ಪ್ರತಿಯೊಬ್ಬರೂ ಸಾಮಾನ್ಯವಾಗಿ ಕನಸು ಕಾಣುವುದು ಸಹಜ. ಕೆಲವು ಕನಸುಗಳು ನೆನಪಿನಲ್ಲಿ ಉಳಿದರೆ ಕೆಲವು ನೆನಪಿನಲ್ಲಿ ಉಳಿಯುವುದಿಲ್ಲ. ಕನಸಿನ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸಿಗೂ ಕೆಲವು ಮಹತ್ವವಿದೆ. ಕೆಲವು ಕನಸುಗಳು ಶುಭ ಮತ್ತು ಅಶುಭ ಸಂಕೇತಗಳನ್ನು ಸೂಚಿಸುತ್ತವೆ ಎಂದು ತಿಳಿಸಲಾಗಿದೆ.  ಇಂದು ನಾವು ನಿಮಗೆ ಅಂತಹ ಕನಸುಗಳ ಬಗ್ಗೆ ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಕನಸಿನಲ್ಲಿ ಮೃತ ದೇಹ 


ಕನಸಿನ ಶಾಸ್ತ್ರ(Swapna Shastra)ದ ಪ್ರಕಾರ, ಕನಸಿನಲ್ಲಿ ಮೃತ ದೇಹ ಕಾಣುವುದರ ಸಂಕೇತ ಸಂಪತ್ತನ್ನು ಸೂಚಿಸುತ್ತದೆ. ಇದಲ್ಲದೆ ಕನಸಿನಲ್ಲಿ ಹಾಲು ಕುಡಿಯುವುದು, ವಸ್ತುವಿಗೆ ಬೆಂಕಿ ಹಚ್ಚುವುದು, ಮಾವು ಅಥವಾ ದಾಳಿಂಬೆ ಹಣ್ಣು ತಿನ್ನುವುದು, ಕ್ರಿಮಿಕೀಟಗಳನ್ನು ನೋಡುವುದು ಧನಲಾಭವನ್ನು ಸೂಚಿಸುತ್ತದೆ ಎಂದು ತಿಳಿಸಲಾಗಿದೆ.


ಇದನ್ನೂ ಓದಿ : ಮಲಗುವ ಮುನ್ನ ನೀವು ಸಂಗೀತ ಕೇಳುತ್ತೀರಾ? ಮೊದಲು ಈ ಅಭ್ಯಾಸ ಬದಲಿಸಿ!


ಉದ್ಯೋಗ ಮತ್ತು ವ್ಯವಹಾರದ ಬಗ್ಗೆ ಕನಸು ಬಿದ್ದರೆ


ಕನಸಿನಲ್ಲಿ ಉದ್ಯೋಗ ಅಥವಾ ವ್ಯವಹಾರದ ಬಗ್ಗೆ ಕಂಡರೆ ಅದು ದುರದೃಷ್ಟವನ್ನು ಸೂಚಿಸುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಸ್ವಲ್ಪ ನಷ್ಟ ಉಂಟಾಗಲಿದೆ ಎಂದು ಇದು ಸೂಚಿಸುತ್ತದೆ.


ಕನಸಿನಲ್ಲಿ ಡಾಕ್ಟರ್ ಅನ್ನು ಕಂಡರೆ 


ಕನಸಿನಲ್ಲಿ ವೈದ್ಯರನ್ನು(Doctor In Dream) ಕಾಣುವುದುಸಾಮಾನ್ಯವಾಗಿ ಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಉತ್ತಮ ಆರೋಗ್ಯ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ಇದಲ್ಲದೆ, ಶೀಘ್ರದಲ್ಲೇ ನಿಮ್ಮಿಂದ ಯಾವುದೇ ರೋಗ ದೂರವಾಗುವುದು ಸೂಚಿಸುತ್ತದೆ.


ಇದನ್ನೂ ಓದಿ : Palmistry: ಇಂತಹ ಉಗುರು ಹೊಂದಿರುವ ಜನರು ತುಂಬಾ ಬುದ್ಧಿವಂತರು ಮತ್ತು ಅದೃಷ್ಟವಂತರು!


ಕನಸಿನಲ್ಲಿ ನೀರು ಕಂಡರೆ


ನೀರಿಗೆ ಸಂಬಂಧಿಸಿದ ಕನಸುಗಳನ್ನು ಕಂಡರೆ ಅವುಗಳನ್ನ ಶುಭವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ನೀವು ನೀರು ಬೀಳುವುದನ್ನು ನೋಡಿದರೆ, ಅದು ವ್ಯವಹಾರದಲ್ಲಿ ಆರ್ಥಿಕ ಲಾಭವನ್ನು ಪಡೆಯಲಿದೆ ಎಂಬುದರ ಸಂಕೇತವಾಗಿದೆ. ಕನಸಿನಲ್ಲಿ ನೀರು ಕುಡಿಯುವುದನ್ನು ನೋಡಿದರೆ ನಿಮಗೆ ಸಾಲದಿಂದ ಮುಕ್ತಿ ಪಡೆಯುವುದು ಸೂಚಿಸುತ್ತದೆ. ಇದಲ್ಲದೆ, ನೀರಿನ ಮೇಲೆ ನಡೆಯುವುದನ್ನು ನೋಡುವುದು ಉತ್ತಮ ಯಶಸ್ಸಿನ ಸಂಕೇತವಾಗಿದೆ ಎಂದು ತಿಳಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.