Palmistry: ಇಂತಹ ಉಗುರು ಹೊಂದಿರುವ ಜನರು ತುಂಬಾ ಬುದ್ಧಿವಂತರು ಮತ್ತು ಅದೃಷ್ಟವಂತರು!

ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವವು ಉಗುರಿನ ಆಕಾರದಿಂದ ತಿಳಿಯುತ್ತದೆ. ವ್ಯಕ್ತಿ ಉಗುರುಗಳ ಆಕಾರದಿಂದಲೇ ಅವರು ಯಾವ ಕ್ಷೇತ್ರದಲ್ಲಿ ಹೆಸರು ಮಾಡುತ್ತಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.

Written by - Puttaraj K Alur | Last Updated : Feb 1, 2022, 04:12 PM IST
  • ಉಗುರುಗಳ ಆಕಾರದಿಂದ ನಿಮ್ಮ ಉಜ್ವಲ ಭವಿಷ್ಯವನ್ನು ತಿಳಿದುಕೊಳ್ಳಬಹುದು
  • ಉಗುರು ವಿನ್ಯಾಸವು ವ್ಯಕ್ತಿಯ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ
  • ಅಗಲವಾದ ಉಗುರು ಹೊಂದಿರುವ ಜನರು ತುಂಬಾ ಬುದ್ಧಿವಂತರಾಗಿರುತ್ತಾರೆ
Palmistry: ಇಂತಹ ಉಗುರು ಹೊಂದಿರುವ ಜನರು ತುಂಬಾ ಬುದ್ಧಿವಂತರು ಮತ್ತು ಅದೃಷ್ಟವಂತರು! title=
ಉಗುರುಗಳಿಂದ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿರಿ

ನವದೆಹಲಿ: ನಮ್ಮ ಕೈಯಲ್ಲಿರುವ ರೇಖೆಗಳು, ಗುರುತುಗಳು ಮತ್ತು ಆಕಾರಗಳ ಹೊರತಾಗಿ ಕೈ ಬೆರಳುಗಳು, ಉಗುರುಗಳ ವಿನ್ಯಾಸ-ಬಣ್ಣದಿಂದ ಸಹ ವ್ಯಕ್ತಿಯ ಭವಿಷ್ಯ(Palmistry Fingers Planets)ದ ಬಗ್ಗೆ ತಿಳಿಯಬಹುದು. ಉಗುರುಗಳ ಆಕಾರದಿಂದ ವ್ಯಕ್ತಿಯ ಅದೃಷ್ಟದ ಬಗ್ಗೆ ತಿಳಿಯುವ ವಿಧಾನ ಇಲ್ಲಿದೆ ನೋಡಿ.

ಉಗುರುಗಳ ಆಕಾರದಿಂದ ನಿಮ್ಮ ಭವಿಷ್ಯ ತಿಳಿಯಿರಿ

ದುಂಡಗಿನ ಅಥವಾ ಅಂಡಾಕಾರದ ಉಗುರುಗಳು: ದುಂಡಗಿನ  ಅಥವಾ ಅಂಡಾಕಾರದ ಉಗುರುಗಳನ್ನು ಹೊಂದಿರುವವರು ಸುಲಭವಾಗಿ ಯಾರನ್ನಾದರೂ ಆಕರ್ಷಿಸಬಹುದು. ಅವರ ವ್ಯಕ್ತಿತ್ವದಲ್ಲಿ ಅದ್ಭುತವಾದ ಮೋಡಿ ಇರುತ್ತದೆ.

ಅಗಲವಾದ ಉಗುರುಗಳನ್ನು ಹೊಂದಿರುವವರು: ಇಂತಹ ಜನರು ತುಂಬಾ ಬುದ್ಧಿವಂತರು(Palmistry Tips). ಯೋಚಿಸುವ, ಅರ್ಥಮಾಡಿಕೊಳ್ಳುವ ಮತ್ತು ವಿಶ್ಲೇಷಿಸುವ ಅವರ ಸಾಮರ್ಥ್ಯ ಅದ್ಭುತವಾಗಿರುತ್ತದೆ. ಇವರು ಪ್ರತಿ ಕೆಲಸದಲ್ಲಿ ತಮ್ಮ ಮಿದುಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ ಮತ್ತು ಕೆಲಸವನ್ನು ಬಹಳ ಬೇಗನೆ ಮುಗಿಸುತ್ತಾರೆ.

ಇದನ್ನೂ ಓದಿ: Budh Gochar: ಈ 5 ರಾಶಿಯವರಿಗೆ ಮುಂದಿನ 30 ದಿನಗಳು ತುಂಬಾ ಶುಭ

ಉದ್ದನೆಯ ಉಗುರು ಹೊಂದಿರುವವರು : ಉದ್ದವಾದ ಉಗುರುಗಳನ್ನು ಹೊಂದಿರುವವರು ಸ್ವಭಾವತಃ ಸರಳ ಆದರೆ ತುಂಬಾ ಸೃಜನಶೀಲರು. ಇವರ ಕಲ್ಪನೆಯೂ ಚೆನ್ನಾಗಿರುತ್ತದೆ. ಇವರು ಕಲಾ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುತ್ತಾರೆ.

ಚೌಕಾಕಾರದ ಉಗುರುಗಳನ್ನು ಹೊಂದಿರುವ ಜನರು: ಚೌಕಾಕಾರದ ಉಗುರು(Palmistry)ಗಳನ್ನು ಹೊಂದಿರುವ ಜನರು ಸ್ವಭಾವತಃ ತುಂಬಾ ಗಂಭೀರರಾಗಿರುತ್ತಾರೆ. ಇವರ ನಾಯಕತ್ವದ ಗುಣವು ಅವರಿಗೆ ಬಹಳಷ್ಟು ಯಶಸ್ಸನ್ನು ನೀಡುತ್ತದೆ. 

ಚೂಪಾದ ಉಗುರುಗಳನ್ನು ಹೊಂದಿರುವವರು: ಇಂತಹ ಜನರು ತುಂಬಾ ಹಠಮಾರಿ ಮತ್ತು ಕೋಪಗೊಳ್ಳುತ್ತಾರೆ. ಇವರು ಬೇರೆಯವರೊಂದಿಗೆ ಬೆರೆಯುವುದು ವಿರಳ.

ಬಾದಾಮಿ ಆಕಾರದ ಉಗುರುಗಳನ್ನು ಹೊಂದಿರುವವರು: ಬಾದಾಮಿ ಆಕಾರದ ಉಗುರುಗಳನ್ನು ಹೊಂದಿರುವ ಜನರು ತುಂಬಾ ಕರುಣಾಮಯಿ ಮತ್ತು ಎಲ್ಲರಿಗೂ ಸಹಾಯ ಮಾಡುತ್ತಾರೆ. ಅನ್ಯಾಯದ ವಿರುದ್ಧ ಹೋರಾಡಲು ಇವರು ಸದಾ ಸಿದ್ಧರಾಗಿರುತ್ತಾರೆ.

ಇದನ್ನೂ ಓದಿ: Bamboo Vastu Tips: ಮನೆಯ ಈ ದಿಕ್ಕಿನಲ್ಲಿ ಬಿದಿರಿನ ಗಿಡ ನೆಡುವುದರಿಂದ ಧನ ಪ್ರಾಪ್ತಿ, ಹೊಳೆಯುತ್ತೆ ಅದೃಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News