Dream Interpretation: ಯಾವ ಸಮಯದಲ್ಲಿ ಬೀಳುವ ಕನಸು ಎಷ್ಟು ದಿನಗಳ ನಂತರ ಫಲ ನೀಡಲಿದೆ ಗೊತ್ತಾ!
ಸ್ವಪ್ನ ಶಾಸ್ತ್ರವು ಬಹಳ ನಿಗೂಢ ಗ್ರಂಥವಾಗಿದೆ. ಇದರಲ್ಲಿ, ನಿದ್ರೆಯಲ್ಲಿ ಕಂಡುಬರುವ ಕನಸುಗಳ ಅರ್ಥವನ್ನು ಹೇಳಲಾಗಿದೆ. ಇದರೊಂದಿಗೆ, ರಾತ್ರಿಯ ಹೊತ್ತು ಯಾವ ಸಮಯದಲ್ಲಿ ಬಿದ್ದ ಕನಸು ಎಷ್ಟು ದಿನಗಳ ನಂತರ ಫಲ ನೀಡುತ್ತದೆ ಎಂದು ಸಹ ತಿಳಿಸಲಾಗಿದೆ.
ಬೆಂಗಳೂರು: ಬೆಳಗಿನ ಕನಸು ನನಸಾಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಸ್ವಪ್ನ ಶಾಸ್ತ್ರದಲ್ಲಿ (Swapan Shastra), ಕನಸುಗಳ ಅರ್ಥವನ್ನು ಹೇಳುವುದರ ಹೊರತಾಗಿ, ಯಾವ ಸಮಯದಲ್ಲಿ ಬಿದ್ದ ಕನಸು ಯಾವಾಗ ತನ್ನ ಫಲವನ್ನು ನೀಡಲಿದೆ ಎಂಬ ಬಗ್ಗೆಯೂ ಹೇಳಲಾಗಿದೆ. ಇದರ ಪ್ರಕಾರ, ಬೆಳಗಿನ ಕನಸುಗಳು (Morning Dreams) ಮಾತ್ರವಲ್ಲದೆ ರಾತ್ರಿಯಲ್ಲಿ ಕಂಡುಬರುವ ಕನಸುಗಳೂ ಸಹ ಫಲ ನೀಡುತ್ತವೆ. ಆದಾಗ್ಯೂ, ವಿಭಿನ್ನ ಹಂತಗಳಲ್ಲಿ ಕಂಡುಬರುವ ಕನಸುಗಳು ವಿಭಿನ್ನ ಸಮಯಗಳಲ್ಲಿ ಫಲಿತಾಂಶಗಳನ್ನು ನೀಡುತ್ತವೆ. ಯಾವ ಸಮಯದಲ್ಲಿ ಕಂಡ ಕನಸು ಎಷ್ಟು ದಿನಗಳ ನಂತರ ಅದರ ಪರಿಣಾಮವನ್ನು ತೋರಿಸುತ್ತದೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ.
ಕನಸು ಶುಭವಾಗಿರಲಿ (Good Dream) ಅಥವಾ ಕೆಟ್ಟದ್ದಾಗಿರಲಿ (Nad Dream), ಅದು ಖಂಡಿತವಾಗಿಯೂ ಅದರ ಫಲವನ್ನು ನೀಡುತ್ತದೆ. ವ್ಯಕ್ತಿಯ ಕರ್ಮ-ಅದೃಷ್ಟದ ಪ್ರಕಾರ, ಕನಸಿನ ಫಲದ ಪ್ರಮಾಣವು ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಅಂದರೆ, ಶುಭ ಕನಸಿನ ಫಲವು ಯಾರಿಗಾದರೂ ಉತ್ತಮ ಯಶಸ್ಸನ್ನು ತರುತ್ತದೆ. ಆದರೆ ನೀವು ಮತ್ತೆ ಮತ್ತೆ ದುರುದ್ದೇಶಪೂರಿತ ಕನಸುಗಳನ್ನು ಅಂದರೆ ದುಸ್ವಪ್ನಗಳನ್ನು ಕಾಣುತ್ತಿದ್ದರೆ ಮುಂದೆ ಏನೋ ಅಶುಭವಾಗಲಿದೆ ಎಂಬ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ, ಪ್ರತಿಯೊಬ್ಬರೂ ದೇವರನ್ನು ನೆನೆದು, ಅವನನ್ನು ಪ್ರಾರ್ಥಿಸಿ ನಂತರ ಮಲಗಬೇಕು. ಇದರಿಂದ ಒಳ್ಳೆಯ ಮತ್ತು ನಿರಂತರ ನಿದ್ರೆ ಅಥವಾ ಒಳ್ಳೆಯ ಕನಸುಗಳು ಬರುತ್ತವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Auspicious Dream: ನೀವೂ ಕೂಡ ಈ ರೀತಿಯ ಕನಸು ಕಂಡರೆ ಶೀಘ್ರದಲ್ಲೇ ಸಿರಿವಂತರಾಗುವ ಸೂಚನೆ
ಯಾವ ಸಮಯದಲ್ಲಿ ಕಂಡ ಕನಸು ಯಾವಾಗ ಫಲ ನೀಡುತ್ತದೆ?
- ರಾತ್ರಿಯ ಮೊದಲ ಭಾಗದಲ್ಲಿ ಕಂಡುಬರುವ ಕನಸಿನ (Dream) ಶುಭ ಮತ್ತು ಕೆಟ್ಟ ಫಲಿತಾಂಶಗಳು ಸಾಮಾನ್ಯವಾಗಿ ಒಂದು ವರ್ಷದೊಳಗೆ ಕಂಡುಬರುತ್ತವೆ.
- ಅದೇ ಸಮಯದಲ್ಲಿ, ರಾತ್ರಿಯ ಎರಡನೇ ಭಾಗದಲ್ಲಿ ಕಂಡುಬರುವ ಕನಸಿನ ಫಲವು 9 ತಿಂಗಳಲ್ಲಿ ಲಭ್ಯವಾಗಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Dream Sign: ಈ ರೀತಿಯ ಕನಸುಗಳು ಮೃತ್ಯುವಿನ ಸಂಕೇತವಂತೆ
- ಮೂರನೆಯ ಪ್ರಹಾರ್‌ನಲ್ಲಿ ಕಂಡುಬರುವ ಕನಸು ತನ್ನ ಫಲವನ್ನು 3 ತಿಂಗಳಲ್ಲಿ ನೀಡುತ್ತದೆ. ಅಂದರೆ, ಯಶಸ್ಸನ್ನು ಪಡೆಯುವ ಕನಸು ಇದ್ದರೆ, ಮುಂದಿನ ಮೂರು ತಿಂಗಳೊಳಗೆ ಅದರ ಫಲಿತಾಂಶ ಲಭ್ಯವಾಗಲಿದೆ.
- ರಾತ್ರಿಯ ನಾಲ್ಕನೇ ಭಾಗದಲ್ಲಿ ಕಂಡುಬರುವ ಕನಸು 10 ರಿಂದ 12 ದಿನಗಳಲ್ಲಿ ಬೇಗನೆ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ನಾಲ್ಕನೆಯ ಪ್ರಹಾರ್ ಎಂದರೆ ರಾತ್ರಿ ಮುಗಿಯುವ ಸಮಯ/ಬೆಳಗಿನ ಜಾವಾ ಇದನ್ನು ಬೆಳಿಗ್ಗೆ ಕನಸು ಎಂದು ಕರೆಯಲಾಗುತ್ತದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.