ಒಂದು ವಾರದಲ್ಲಿ 2 ಕಿಲೋ ತೂಕ ಕಳೆದುಕೊಳ್ಳಬಹುದು ! ಬೆಳಗ್ಗೆ ಎದ್ದು ಈ ನೀರು ಕುಡಿಯಿರಿ ಸಾಕು !
Weight Loss Drinks : ಕೇವಲ ವ್ಯಾಯಾಮ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ತೂಕ ನಿಯಂತ್ರಿಸಲು ಆಹಾರಕ್ರಮದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.
Weight Loss with Drinks : ಇಂದಿನ ಕಾಲದಲ್ಲಿ, ಬಹುತೇಕ ಪ್ರತಿಯೊಬ್ಬ ವ್ಯಕ್ತಿಯು ತೂಕ ಹೆಚ್ಚಾಗಿರುವ ಸಮಸ್ಯೆಯಿಂದ ಬಳಲುತ್ತಿದ್ದಾನೆ. ತೂಕ ಹೆಚ್ಚಾಗುವುದರಿಂದ, ಆತ್ಮವಿಶ್ವಾಸ ಕೂಡಾ ಕುಗ್ಗುತ್ತದೆ ಎಂದರೆ ತಪ್ಪಲ್ಲ. ಇದರ ಜೊತೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಕೂಡಾ ಎದುರಿಸಬೇಕಾಗುತ್ತದೆ. ಹೀಗಾಗಿ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಬಹಳ ಮುಖ್ಯ. ಕೇವಲ ವ್ಯಾಯಾಮ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ತೂಕ ನಿಯಂತ್ರಿಸಲು ಆಹಾರಕ್ರಮದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ತೂಕವನ್ನು ನಿಯಂತ್ರಿಸಲು, ಕೆಲವು ಆರೋಗ್ಯಕರ ಪಾನೀಯಗಳನ್ನು ಸೇವಿಸಬಹುದು.
ತೂಕ ಇಳಿಸಲು ಸಹಾಯ ಮಾಡುವ ಪಾನೀಯಗಳು :
ಚಕ್ಕೆ ನೀರು :
ತೂಕ ನಷ್ಟಕ್ಕೆ ಚಕ್ಕೆ ನೀರು ಅಥವಾ ದಾಲ್ಚಿನ್ನಿ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ಚಕ್ಕೆ ನೀರು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸಿದರೆ, ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವಾಗುವುದು. ಇದಕ್ಕಾಗಿ ಸುಮಾರು 2 ಲೋಟ ನೀರನ್ನು ತೆಗೆದುಕೊಳ್ಳಿ. ಆ ನೀರಿಗೆ ದಾಲ್ಚಿನ್ನಿ ತುಂಡು ಸೇರಿಸಿ ನೀರು ಅರ್ಧದಷ್ಟಾಗುವವರೆಗೆ ಚೆನ್ನಾಗಿ ಕುದಿಸಿ. ಹೀಗೆ ಕುದಿಸಿದ ನೀರನ್ನು ತಣ್ಣಗಾದ ಮೇಲೆ ಕುಡಿಯಿರಿ.
ಇದನ್ನೂ ಓದಿ : ದಕ್ಷಿಣ ಭಾರತದ ಉಪಹಾರ ಆರೋಗ್ಯಕ್ಕೆ ಒಳ್ಳೆಯದು ! ಯಾಕೆ ಗೊತ್ತಾ
ಜೇನು ತುಪ್ಪ ಬೆರೆಸಿ ನೀರು :
ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಜೇನುತುಪ್ಪ ಬೆರೆಸಿದ ನೀರನ್ನು ಕುಡಿಯಬಹುದು. ಜೇನುತುಪ್ಪ ಬೆರೆಸಿದ ನೀರನ್ನು ಕುಡಿಯಲು, ಮೊದಲು 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಇದಕ್ಕೆ ಸುಮಾರು 1 ಚಮಚ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಣ ಶುಂಠಿ ನೀರು :
ಒಣ ಶುಂಠಿಯ ನೀರನ್ನು ಸೇವಿಸುವ ಮೂಲಕ, ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಬಹುದು. ಒಣ ಶುಂಠಿ ನೀರನ್ನು ತಯಾರಿಸಲು, ಒಣ ಶುಂಠಿಯ ತುಂಡನ್ನು ತೆಗೆದುಕೊಂಡು ಅದನ್ನು ಪುಡಿಮಾಡಿ. ಈ ಪುಡಿಯನ್ನು ರಾತ್ರಿಯಿಡೀ ನೀರಿನಲ್ಲಿ ಹಾಕಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಇದರಿಂದ ನಿಮ್ಮ ದೇಹದಲ್ಲಿರುವ ಅಧಿಕ ಕೊಬ್ಬು ಕರಗಲು ಶುರುವಾಗುತ್ತದೆ.
ಮೆಂತ್ಯೆ ನೀರು :
ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಲು ಮೆಂತ್ಯೆ ನೀರು ತುಂಬಾ ಆರೋಗ್ಯಕರ ಪರಿಹಾರ. ಇದಕ್ಕಾಗಿ, 1 ಚಮಚ ಮೆಂತ್ಯೆಯನ್ನು ತೆಗೆದುಕೊಂಡು, ಅದನ್ನು 1 ಲೀಟರ್ ನೀರಿನಲ್ಲಿ ಹಾಕಿ ಅರ್ಧದಷ್ಟಾಗುವವರೆಗೆ ಚೆನ್ನಾಗಿ ಕುದಿಸಿ. ನಂತರ, ನೀರನ್ನು ಫಿಲ್ಟರ್ ಮಾಡಿ ತಣ್ಣಗಾದ ಮೇಲೆ ಈ ನೀರನ್ನು ಕುಡಿಯಿರಿ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಸರಿಯಾಗಿ ನಿದ್ರೆ ಬರುತ್ತಿಲ್ಲವೇ ಹಾಗಿದ್ರೆ ಇಲ್ಲಿದೆ ಒಂದು ಪರಿಹಾರ ! ಆದರೆ ಅದರ ಹಿಂದಿನ ಅಪಾಯಗಳು ಗಮನದಲ್ಲಿರಲಿ
ಅಗಸೆಬೀಜದ ನೀರು :
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ಅಗಸೆಬೀಜದ ನೀರನ್ನು ಸೇವಿಸಬಹುದು. ಅಗಸೆಬೀಜದ ನೀರಿನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಅಡಗಿದೆ. ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಈ ನೀರನ್ನು ಸೇವಿಸಲು, 1 ಗ್ಲಾಸ್ ನೀರಿಗೆ ಅಗಸೆ ಬೀಜಗಳನ್ನು ಸೇರಿಸಿ ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.