Dussehra 2021: ದುಷ್ಟ ಶಕ್ತಿಯ ವಿರುದ್ಧ ಒಳ್ಳೆಯದಕ್ಕೆ ವಿಜಯ ಎಂಬ ಸಂದೇಶವನ್ನು ಜಗತ್ತಿಗೇ ಸಾರುವ ಹಬ್ಬ ವಿಜಯದಶಮಿ. ಈ ವಿಜಯದ ಹಬ್ಬವನ್ನು ದಸರಾ ಹಬ್ಬ ಎಂದೂ ಕೂಡ ಕರೆಯಲಾಗುತ್ತದೆ. ದಸರಾವನ್ನು ಅತ್ಯಂತ ಮಂಗಳಕರ ಮತ್ತು ಶುಭ ಸಮಯವೆಂದು ಪರಿಗಣಿಸಲಾಗಿದೆ. ದಸರಾ ಹಬ್ಬದ ಬಗ್ಗೆ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಸಂಪ್ರದಾಯಗಳಿವೆ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ಚಿನ್ನ ಅಥವಾ ಬೆಳ್ಳಿಯ ಎಲೆಗಳನ್ನು ದಸರಾ ದಿನದಂದು ಖರೀದಿಸಲಾಗುತ್ತದೆ. ಇದರಿಂದ ವರ್ಷವಿಡೀ ಸಮೃದ್ಧಿ ತುಂಬಿರುತ್ತದೆ ಎನ್ನಲಾಗುವುದು. ಅದೇ ಸಮಯದಲ್ಲಿ, ಈ ದಿನವನ್ನು ಪ್ರಯಾಣಕ್ಕೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿನ ದುರ್ಗಾ ಮಾತೆಯು ಭೂಮಿಯಿಂದ ಮತ್ತೆ ತನ್ನ ಜಗತ್ತಿಗೆ ಮರಳುತ್ತಾಳೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಇದಲ್ಲದೆ ಜ್ಯೋತಿಷ್ಯದಲ್ಲಿ (Astrology), ಕೆಲವು ಪರಿಹಾರಗಳನ್ನು ಮಾಡಲು ದಸರಾವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಮಾಡುವ ಕೆಲವು ಕೆಲಸಗಳಿಂದ ಹಲವು ಪಟ್ಟು ಹೆಚ್ಚು ಒಳ್ಳೆಯ ಫಲ ದೊರೆಯಲಿದೆ ಎಂದು ನಂಬಲಾಗಿದೆ.


ದಸರಾದಲ್ಲಿ ಈ ಕೆಲಸವನ್ನು ಮಾಡಿದರೆ ಕೊನೆಯಾಗುತ್ತೆ ಆರ್ಥಿಕ ಬಿಕ್ಕಟ್ಟು :
ನೀವು ಕೂಡ ವರ್ಷವಿಡೀ ಸಮೃದ್ಧಿ ಮತ್ತು ಸಂತೋಷದ ಜೀವನ ನಡೆಸಲು ಬಯಸಿದರೆ, ಅಕ್ಟೋಬರ್ 15, 2021 ರ ದಸರಾ (Dasara) ದಿನದಂದು ಈ ಸುಲಭವಾದ ಕೆಲಸವನ್ನು ಮಾಡಿ. ಈ ಕೆಲವು ಸುಲಭವಾದ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು (Financial Crisis) ಕೊನೆಗೊಳ್ಳುವುದರ ಜೊತೆಗೆ, ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿ ನೆಲಸಲಿದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Navratri 2021: ನೀವೂ ಕೂಡ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಬಯಸುತ್ತೀರಾ, ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡಿ


* ದಸರಾ ದಿನದಂದು ನೀಲಕಂಠ ಮಂದಿರಕ್ಕೆ ಭೇಟಿ ನೀಡಿ. ಹೀಗೆ ಮಾಡುವುದು ಬಹಳ ಮಂಗಳಕರ. ದಸರಾ  (Dasara)  ದಿನದಂದು ನೀಲಕಂಠನ ದರ್ಶನ ಪಡೆದರೆ ವರ್ಷಪೂರ್ತಿ ಜೀವನ ಸಂತೋಷವಾಗಿರುತ್ತದೆ ಎನ್ನಲಾಗಿದೆ.


* ದಸರಾ ದಿನದಂದು ಶಮಿ ಮರವನ್ನು ಪೂಜಿಸಿ. ಇದರೊಂದಿಗೆ, ಮನೆಯಲ್ಲಿ ಸಮೃದ್ಧಿ ಇರುತ್ತದೆ. ಮತ್ತೊಂದೆಡೆ, ಶಮಿ ಮರವನ್ನು ನೆಡಲು ದಸರಾ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿನ ಕುಬೇರನು (Kubera) ಶಮಿ ಮರದ ಎಲೆಗಳನ್ನು ಚಿನ್ನದ ನಾಣ್ಯಗಳನ್ನು ರಾಜ ರಘುವಿಗೆ ನೀಡಿದ್ದನು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಚಿನ್ನದ ಎಲೆಯನ್ನು ದಸರಾ ದಿನದಂದು ಖರೀದಿಸಲಾಗುತ್ತದೆ.  


ಇದನ್ನೂ ಓದಿ- Astrology: ಇತರರ ಏಳಿಗೆಯನ್ನು ಸಹಿಸಲ್ಲ ಈ ರಾಶಿಯ ಜನ, ನಿಮ್ಮ ಸುತ್ತಲೂ ಇಂತಹವರು ಇದ್ದಾರೆಯೇ?


* ದಸರಾ ದಿನದಂದು, ಯಾವುದಾದರೂ ಶುಭ ಕೆಲಸಕ್ಕಾಗಿ ಸ್ವಲ್ಪ ದೂರವಾದರೂ ಪ್ರಯಾಣಿಸಿ. ಇದರಿಂದ ವರ್ಷ ಪೂರ್ತಿ ನೀವು ಯಾವುದೇ ಒಳ್ಳೆಯ ಕೆಲಸಕ್ಕೆ ಪ್ರಯಾಣಿಸಿದರೂ ಯಾವುದೇ ಅಡ್ಡಿಯಾಗುವುದಿಲ್ಲ. 


* ದಸರಾ ದಿನದಂದು ದುರ್ಗಾದೇವಿಯ ಪಾದಗಳನ್ನು ಹೊಸ ಕರವಸ್ತ್ರದಿಂದ ಒರೆಸಿ ಮತ್ತು ಅದರೊಂದಿಗೆ ಹಣವನ್ನು ಸುರಕ್ಷಿತವಾಗಿ ನೀವು ಸದಾ ಹಣವಿಡುವ ಸ್ಥಳದಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ವರ್ಷಪೂರ್ತಿ ತಾಯಿಯ ಆಶೀರ್ವಾದದಿಂದ ಮನೆಯಲ್ಲಿ ಸಮೃದ್ಧಿ ಇರುತ್ತದೆ. ಬಟ್ಟೆ ಅಥವಾ ಕರವಸ್ತ್ರವು ಕೆಂಪು ಬಣ್ಣದ್ದಾಗಿರಬೇಕು ಎಂಬುದನ್ನು ನೆನಪಿಡಿ. 


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ