ನವದೆಹಲಿ: Vijayadashami - ಪ್ರಸ್ತುತ ದೇಶಾದ್ಯಂತ ನವರಾತ್ರಿಯ (Navratri) ಪವಿತ್ರ ಪರ್ವ ಆಚರಿಸಲಾಗುತ್ತಿದೆ. ಈ ದಿನಗಳಲ್ಲಿ, ದುರ್ಗಾಮಾತೆಯ (Goddess Durga) ಒಂಬತ್ತು ರೂಪಗಳನ್ನು ಸಂಪೂರ್ಣ ಒಂಬತ್ತು ದಿನಗಳ ಕಾಲ  ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಒಂಬತ್ತು ದಿನಗಳ ನಂತರ ವಿಜಯ ದಶಮಿ (Vijayadashami) ಅಥವಾ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಲಂಕಾ ನರೇಶ ರಾವಣನ ಮೇಲೆ ಶ್ರೀರಾಮನ (Lord Shri Ram) ವಿಜಯವನ್ನು ಗುರುತಿಸುವುದರಿಂದ ದಸರಾ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ದಸರಾ 2021 ಅನ್ನು ಅಶ್ವಿನ್ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಏನಿದೆ ಧಾರ್ಮಿಕ ನಂಬಿಕೆ
ದಸರಾ ದಿನವನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯತನದ ವಿಜಯದ ಸಂಕೇತವೆಂಬಂತೆ ಆಚರಿಸಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ, ರಾಕ್ಷಸ ಮಹಿಷಾಸುರ ದೇವರುಗಳಲ್ಲಿ ಭಾರಿ ಭೀತಿಯನ್ನು ಸೃಷ್ಟಿಸಿದ್ದನು. ಇದಕ್ಕಾಗಿ ದೇವತೆಗಳೆಲ್ಲರೂ ದೇವಾದಿದೇವ ಮಹಾದೇವನ (Lord Shiva) ಸಹಾಯವನ್ನು ಕೋರಿದರು. ಆಗ ಮಹಾದೇವ ಅವರನ್ನು ದೇವಿ ಪಾರ್ವತಿಯ ಬಳಿಗೆ ಕಳುಹಿಸುತ್ತಾರೆ. ದೇವಿ ಪಾರ್ವತಿಯ ಬಳಿ ಅಸುರರ ಸಂಹಾರದ ಶಕ್ತಿ ಇದೆ ಎಂದು ಅವರು ಹೇಳಿದ್ದರು. ಅದು ನವರಾತ್ರಿಯ ಕೊನೆಯ ದಿನ, ಆಗ ದೇವಿ ಪಾರ್ವತಿ ದೇವಿ (Goddess Parvati) ದುರ್ಗೆಯ (Goddess Durga)ರೂಪ ಧರಿಸಿ ಮಹಿಷಾಸುರನನ್ನು ವಧೆ (Mahishasura) ಮಾಡಿ ದೇವತೆಗಳನ್ನು ಆತನ ಕೋಪದಿಂದ ರಕ್ಷಿಸುತ್ತಾಳೆ.  ಅಂದಿನಿಂದ ಈ ದಿನವನ್ನು ಶ್ರೀರಾಮನ ಕೈಯಾರೆ ರಾವಣನ ವಧೆ ನಂತರವೇ ದಸರಾ ಆಚರಿಸುವ ಸಂಪ್ರದಾಯ ಆರಂಭವಾಯಿತು ಎಂದು ಪವಿತ್ರ ಗ್ರಂಥ ರಾಮಾಯಣದಲ್ಲಿ ಬರೆಯಲಾಗಿದೆ, ಏಕೆಂದರೆ ಇದು ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಸೂಚಿಸುತ್ತದೆ.


ಈ ಬಾರಿಯ ದಸರಾ ಹಬ್ಬ ಯಾವಾಗ ಆಚರಿಸಲಾಗುತ್ತಿದೆ?
ಈ ವರ್ಷ ದಸರಾ ಹಬ್ಬವನ್ನು 15 ಅಕ್ಟೋಬರ್ 2021 ರ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ಬಾರಿ ನವರಾತ್ರಿ ಅಕ್ಟೋಬರ್ 7 ರಿಂದ ಆರಂಭವಾಗಿದೆ. ಈ ಬಾರಿ ಎರಡು ತಿಥಿಗಳು ಒಟ್ಟಿಗೆ ಬಂದಿವೆ. ಈ ಕಾರಣದಿಂದಾಗಿ ನವರಾತ್ರಿ ಕೇವಲ ಎಂಟು ದಿನಗಳು ಮಾತ್ರ ಇರಲಿದೆ. ಅದರಂತೆ, ಅಕ್ಟೋಬರ್ 14 ರಂದು ಮಹಾನವಮಿ ಮತ್ತು ಮರುದಿನ ಅಂದರೆ ಅಕ್ಟೋಬರ್ 15 ರಂದು ದಸರಾ ಆಚರಿಸಲಾಗುತ್ತದೆ. ವಿಶೇಷವೆಂದರೆ ಈ ಬಾರಿ 3 ಶುಭ ಯೋಗಗಳು ದಸರಾ ದಿನದಂದು ರೂಪುಗೊಳ್ಳುತ್ತಿವೆ. ಜನರು ಶುಭ ಸಮಯದಲ್ಲಿ ಪೂಜಿಸುವ ಮೂಲಕ ಲಾಭ ಪಡೆಯಬಹುದು.


Dussehra 2021: ತಿಥಿ ಹಾಗೂ ಶುಭ ಮುಹೂರ್ತಗಳು
>> ದಸರಾ ಹಬ್ಬದ ಮುಖ್ಯ ದಿನಾಂಕ: ಅಕ್ಟೋಬರ್ 15, ಶುಕ್ರವಾರ
>> ವಿಜಯ ಮುಹೂರ್ತ - ಮಧ್ಯಾಹ್ನ 02:02 ರಿಂದ 02:48  ವರೆಗೆ
>> ಅಪರ್ಣಾ ಪೂಜೆಯ ಸಮಯ - ಮಧ್ಯಾಹ್ನ 01:16 ರಿಂದ  03:34 ವರೆಗೆ
>> ದಶಮಿ ತಿಥಿ ಆರಂಭ - ಅಕ್ಟೋಬರ್ 14, 2021 ರಂದು ಸಂಜೆ 06:52ಕ್ಕೆ.
>> ದಶಮಿ ದಿನಾಂಕವು ಕೊನೆಗೊಳ್ಳುತ್ತದೆ - 15 ಅಕ್ಟೋಬರ್ 2021 ರಂದು ಸಂಜೆ 06:02 ಕ್ಕೆ
>> ಶ್ರವಣಾ ನಕ್ಷತ್ರ ಆರಂಭ - 14 ಅಕ್ಟೋಬರ್ 2021 ರಂದು ಬೆಳಗ್ಗೆ 09:36 ಕ್ಕೆ
>> ಶ್ರವಣಾ ನಕ್ಷತ್ರ ಮುಕ್ತಾಯ - 15 ಅಕ್ಟೋಬರ್ 2021 ಬೆಳಗ್ಗೆ 09:16 ಕ್ಕೆ


ಇದನ್ನೂ ಓದಿ-Navratri 2021: ನವರಾತ್ರಿಯಲ್ಲಿ ಈ ಗಿಡಗಳನ್ನು ನೆಡುವುದು ಅತ್ಯಂತ ಶುಭ, ದೂರವಾಗುತ್ತೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ


ಈ ಬಾರಿಯ ದಸರಾ ಹಬ್ಬದಂದು ಒಟ್ಟು ಮೂರು ಶುಭಯೋಗಗಳು ನಿರ್ಮಾಣಗೊಳ್ಳುತ್ತಿವೆ 
ಈ ಬಾರಿಯ ದಸರಾ ಹಬ್ಬದ ದಿನ 3 ಶುಭ ಯೋಗಗಳು  ರೂಪುಗೊಳ್ಳುತ್ತಿವೆ. ಮೊದಲ ಯೋಗ ರವಿ ಯೋಗವಾಗಿದ್ದು ಅದು ಅಕ್ಟೋಬರ್ 14 ರಂದು ರಾತ್ರಿ 9:34 ಕ್ಕೆ ಆರಂಭವಾಗುತ್ತದೆ ಮತ್ತು ಅಕ್ಟೋಬರ್ 16 ರಂದು ಬೆಳಗ್ಗೆ 9.31 ರವರೆಗೆ ಮುಂದುವರಿಯುತ್ತದೆ. ಮತ್ತೊಂದೆಡೆ, ಎರಡನೇ ಯೋಗವು ಸರ್ವಾರ್ಥ ಸಿದ್ಧಯೋಗವಾಗಿದ್ದು, ಇದು ಅಕ್ಟೋಬರ್ 15 ರಂದು ಬೆಳಗ್ಗೆ 6.02 ರಿಂದ ಆರಂಭವಾಗಿ 9.15 ರವರೆಗೆ ಇರಲಿದೆ. ಇದಲ್ಲದೇ, ಮೂರನೆಯ ಯೋಗವೆಂದರೆ ಕುಮಾರ್ ಯೋಗ, ಇದು ಬೆಳಗ್ಗೆ ಸೂರ್ಯೋದಯದಿಂದ ಆರಂಭವಾಗಿ 9.16 ನಿಮಿಷಗಳವರೆಗೆ ಇರಲಿದೆ. ಈ ಮೂರು ಮಂಗಳಕರ ಯೋಗಗಳು ಒಟ್ಟಾಗಿ  ರೂಪುಗೊಳ್ಳುವುದರಿಂದ, ದಸರಾದಲ್ಲಿ ಪೂಜೆಯು ಅತ್ಯಂತ ಮಂಗಳಕರವಾಗಿರುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ-Navratri 2021: ನವರಾತ್ರಿಯಲ್ಲಿ ಈ 4 ರಾಶಿಯವರ ಮೇಲೆ ದುರ್ಗಾ ಮಾತೆಯ ವಿಶೇಷ ಕೃಪೆ


ದಸರಾ ಹಬ್ಬದಂದು ಹೇಗೆ ಪೂಜೆ ಕೈಗೊಳ್ಳಬೇಕು? (Dussehra Puja Process)
ದಸರಾ ಹಬ್ಬದ ದಿನ ಚೌರಂಗದ ಮೇಲೆ ಕೆಂಪು ಬತ್ತಿಯನ್ನು ಹರಡಿ ಅದರ ಮೇಲೆ ಶ್ರೀರಾಮ ಹಾಗೂ ದೇವಿ ದುರ್ಗೆಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ನಂತರ ಅರಿಶಿಣವನ್ನು ಬಳಸಿ ಅಕ್ಕಿಯನ್ನು ಹಳದಿಯಾಗಿಸಿ ಅದರಿಂದ ಸ್ವಸ್ತಿಕ ನಿರ್ಮಿಸಿ ಅದರ ಮೇಲೆ ಮೊದಲು ಶ್ರೀಗಣೇಶ ಹಾಗೂ ನಂತರ ನವಗ್ರಹಗಳನ್ನು ಪ್ರತಿಷ್ಟಾಪಿಸಿ ಇಷ್ಟದೇವರ ಆರಾಧನೆಯನ್ನು ಮಾಡಿ. ಇಷ್ಟ ದೇವತೆಗಳ ಪ್ರತಿಷ್ಠಾಪನೆಯ ನಂತರ ಕೆಂಪು ಬಣ್ಣದ ಹೂವುಗಳು ಬಳಸಿ ಪೂಜೆ ಮಾಡಿ ನಂತರ ಬೆಲ್ಲದಿಂದ ತಯಾರಿಸಲಾದ ನೈವೇದ್ಯವನ್ನು ಅರ್ಪಿಸಿ. ಧರ್ಮ ಧ್ವಜದ ರೂಪದಲ್ಲಿ ವಿಜಯ ಪತಾಕೆಯನ್ನು (Vijay Parv) ಪೂಜೆಯ (Dussehra Puja) ಜಾಗದಲ್ಲಿ ಹಾರಿಸಿ. ದಸರಾ ಹಬ್ಬ ನಮಗೆ ಅಧರ್ಮ ಹಾಗೂ ಅನೀತಿಯ ವಿರುದ್ಧ ಹೋರಾಡುವ ಪ್ರೇರಣೆ ನೀಡುತ್ತದೆ.


ಇದನ್ನೂ ಓದಿ-Mysuru Dasara: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ