ಬೆಂಗಳೂರು : ಚಹಾವನ್ನು ಇಷ್ಟಪಡದವರು ಬಹಳ ಕಡಿಮೆ. ನಿದ್ದೆಯಿಂದ ತೂಕಡಿಸುವಾಗ, ಏನೂ ಕೆಲಸ ಮಾಡಲು ಮನಸ್ಸಿಲ್ಲ ಎನ್ನುವಾಗ ಇಂದು ಗುಟುಕು ಚಹಾ ಕುಡಿದರೆ ದೇಹಕ್ಕೆ ಮತ್ತೆ ಉಲ್ಲಾಸ ಸಿಗುತ್ತದೆ. ಆದರೆ, ಈ ಚಹಾ ಕುಡಿಯುವುದರಿಂದ ಜೀವನದ ಸಮಸ್ಯೆಗಳನ್ನು ಕೂಡಾ ಪರಿಹರಿಸಬಹುದು ಎಂದರೆ ನಂಬುವುದು ಸಾಧ್ಯನಾ? ಹೌದು, ಎನ್ನುತ್ತದೆ ಜ್ಯೋತಿಷ್ಯ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇತರರಿಗೆ ಚಹಾವನ್ನು ನೀಡುವುದರಿಂದ ಶನಿ ದೋಷವನ್ನು ಪರಿಹರಿಸುವುದು ಸಾಧ್ಯವಂತೆ. ಇತರರಿಗೆ ಚಹಾ ನೀಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.  


COMMERCIAL BREAK
SCROLL TO CONTINUE READING

ಜಾತಕದಲ್ಲಿ ಶನಿ ಬಲಹೀನನಾಗಿದ್ದರೆ ಚಹಾ ಕುಡಿಯಬೇಡಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಶನಿಯ ಸ್ಥಾನವು ದುರ್ಬಲವಾಗಿದ್ದರೆ, ವ್ಯಕ್ತಿಯು ಚಹಾ ಕುಡಿಯುವುದನ್ನು ನಿಲ್ಲಿಸಬೇಕು. ಆದರೆ ಇತರರಿಗೆ ಚಹಾವನ್ನು ಕುದಿಸಬೇಕು. ಯಾರಿಗೆ ಶನಿ ದೆಸೆ ಕಾದುತ್ತಿದೆಯೋ ಅಂತಹ ವ್ಯಕ್ತಿಯೇ ಚಹಾ ಮಾಡಿ ಕುಡಿಸುವುದು ಉತ್ತಮ ಪರಿಣಾಮ ಬೀರುತ್ತದೆಯಂತೆ. ಇದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ.


ಇದನ್ನೂ ಓದಿ : ಸೆಪ್ಟೆಂಬರ್ 17 ರಿಂದ ಹೊಳೆಯುತ್ತದೆ ಈ ರಾಶಿಯವರ ಅದೃಷ್ಟ. ! ಯಶಸ್ಸು ಕರುಣಿಸಲಿದ್ದಾನೆ ಸೂರ್ಯ


ಚಹಾದ ಮೂಲಕವೂ ತಿಳಿಯಬಹುದು ಭವಿಷ್ಯ :   
ಇಲ್ಲಿ ಇತರರಿಗೆ ಚಹಾ ಕುಡಿಸುವಾಗ ಯಾವ ರೀತಿಯ ಚಹಾವನ್ನು ಕುಡಿಸ ಬೇಕು ಎಂದು ಕೂಡಾ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಹಾಲು ಹಾಕಿದ ಚಹಾ ಕುಡಿಯುವವರ ಜೀವನದಲ್ಲಿ ಸಂತೋಷ ಐಶ್ವರ್ಯ ತುಂಬಿರುತ್ತದೆ. ಇವರು ಖಾಸಗಿ ಅಥವಾ ಸರ್ಕಾರಿ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ ಮತ್ತು ಗೌರವ ಪಡೆಯುತ್ತಾರೆ. ಮತ್ತೊಂದೆಡೆ, ಬ್ಲಾಕ್ ಟೀ ಬುದ್ಧಿಜೀವಿಗಳ ಆಯ್ಕೆಯಾಗಿದೆ. ಬ್ಲಾಕ್ ಟೀ ಕುಡಿಯುವವರು ಕೂಡಾ ವ್ಯಾಪಕ ಖ್ಯಾತಿಯನ್ನು ಪಡೆಯುತ್ತಾರೆ. ಇನ್ನು ಮಸಾಲಾ ಚಹಾ ಇಷ್ಟಪಡುವ ಜನರು ಜೀವನದಲ್ಲಿ ಸಾಕಷ್ಟು ಹೋರಾಟವನ್ನು ಎದುರಿಸುತ್ತಾರೆ. ಆದರೆ ಕೊನೆಯಲ್ಲಿ ಯಶಸ್ಸು ಸಾಧಿಸುತ್ತಾರೆ.  


ಇದನ್ನೂ ಓದಿ : Panchak September 2022: ನಾಳೆಯಿಂದ 'ಚೋರ ಪಂಚಕ' ಆರಂಭ, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ!


 



( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.