How To Clean Blocked Kitchen Sink : ಅಡುಗೆಮನೆಯ ಸಿಂಕ್ ಬ್ಲಾಕ್ ಆದಾಗ ಆಗುವ ಅನುಭವ ಬಹಳ ಕೆಟ್ಟದಾಗಿರುತ್ತದೆ. ಅದು ಕೂಡಾ ಒಮ್ಮೊಮ್ಮೆ ತೀರಾ ಅವಸರದಲ್ಲಿರುವ ವೇಳೆ ಈ ರೀತಿ ಸಿಂಕ್ ಒಮ್ಮೆಲೇ ಬ್ಲಾಕ್ ಆದಾಗ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ. ಪಾತ್ರೆ ತೊಳೆಯುವ ವೇಳೆ ಸಿಂಕ್ ಗೆ ಹಾಕುವ ಆಹಾರ ಮತ್ತು ಉಳಿದ ಆಹಾರ ಪದಾರ್ಥಗಳ ಕಾರಣದಿಂದ ಅಡುಗೆ ಮನೆಯ ಸಿಂಕ್ ಜಾಮ್ ಆಗುತ್ತದೆ. ಹೀಗಾದಾಗ ಸಿಂಕ್ ನಿಂದ ನೀರು ಹೊರ ಹೋಗುವುದಿಲ್ಲ. ಈ ತಪ್ಪು ನಮ್ಮದೇ ಆದ ಅಜಾಗರೂಕತೆಯಿಂದ ಆಗಿ ಹೋಗುತ್ತದೆ. ಸಾಮಾನ್ಯವಾಗಿ, ಚಹಾ ಪುಡಿ, ಕೂದಲು, ಚಿಕನ್ ಮಟನ್ ಮೂಳೆ ಮುಂತಾದ ವಸ್ತುಗಳು ಸಿಂಕ್‌ಗೆ ಜೋಡಿಸಲಾದ ಚರಂಡಿಗಳಲ್ಲಿ ಸಿಲುಕಿಕೊಳ್ಳುತ್ತವೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗುವುದು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಸಿಂಕ್ ತುಂಬಾ ನೀರು ನಿಲ್ಲುತ್ತದೆ. ಆದರೆ, ಇದನ್ನು ಸುಲಭವಾಗಿ ಸರಿ ಮಾಡಬಹುದು. ಇದಕ್ಕಾಗಿ ಕೆಲವು ಸುಲಭ ಟ್ರಿಕ್ ಅನುಸರಿಸಬೇಕು. 


COMMERCIAL BREAK
SCROLL TO CONTINUE READING

ಪ್ಲಂಜರ್ ಬಳಸಿ : 
ಇದಕ್ಕಾಗಿ ಮೊದಲು ಸಿಂಕ್‌ನಲ್ಲಿ ತುಂಬಿದ ಕೊಳಕು ನೀರನ್ನು ಪಾತ್ರೆಯ ಸಹಾಯದಿಂದ ಹೊರತೆಗೆಯಿರಿ. ಈಗ ಅರ್ಧದಷ್ಟು ಸಿಂಕ್ ಅನ್ನು ಬಿಸಿ ನೀರಿನಿಂದ ತುಂಬಿಸಿ. ನಂತರ ಡ್ರೈನ್ ಮೇಲೆ ಪ್ಲಂಜರ್ ಅನ್ನು ಇರಿಸಿ.   ಡ್ರೈನ್ ಅನ್ನು ಖಾಲಿ ಮಾಡಲು ಪ್ಲಂಜರ್ ಅನ್ನು ಮೇಲಕ್ಕೆ ಮತ್ತು ಕೆಳಕ್ಕೆ ಮಾಡಿ. ಹೀಗೆ ಮಾಡಿದರೆ ಸಿಂಕ್ ನಲ್ಲಿ ತುಂಬಿರುವ ನೀರು ಸರಾಗವಾಗಿ ಹರಿದು ಹೋಗುತ್ತದೆ. 


ಇದನ್ನೂ ಓದಿ : ಚಿನ್ನದ ಬೆಲೆ 36 ಸಾವಿರ ರೂ. ಇಳಿಕೆ..! ಸಾರ್ವಕಾಲಿಕ ಕುಸಿತ ಕಂಡ ಬಂಗಾರದ 10 ಗ್ರಾಂ ದರ ಎಷ್ಟಾಗಿದೆ ಗೊತ್ತಾ?


ಬಿಸಿ ನೀರು, ವಿನೆಗರ್ ಮತ್ತು ಅಡಿಗೆ ಸೋಡಾವನ್ನು ಬಳಸಿ :
ಈ ವಿಧಾನವನ್ನು ಪ್ರಯತ್ನಿಸುವ ಮೊದಲು ರಬ್ಬರ್ ಹ್ಯಾಂಡ್ ಗ್ಲೌಸ್ ಧರಿಸುವುದು ಉತ್ತಮ. ಮೊದಲು ಸಿಂಕ್ ನಲ್ಲಿ ತುಂಬಿರುವ  ನೀರನ್ನು ಪಾತ್ರೆಯ ಸಹಾಯದಿಂದ ಹೊರ ತೆಗೆಯಿರಿ. ಈಗ ಒಂದು ಕಪ್ ಅಡಿಗೆ ಸೋಡಾವನ್ನು ಡ್ರೈನ್ ಗೆ ಸುರಿಯಿರಿ. ಅಗತ್ಯವಿದ್ದರೆ, ಒಂದು ಚಾಕು ಬಳಸಿ. ಒಂದು ಕಪ್ ವಿನೆಗರ್ ಅನ್ನು ಕೂಡಾ ಮತ್ತೆ ಡ್ರೈನ್‌ನಲ್ಲಿ ಸುರಿಯಿರಿ.  5 ನಿಮಿಷಗಳ ಕಾಲ ಕಾಯಿರಿ. ಅಂತಿಮವಾಗಿ ಕಿಚನ್ ಸಿಂಕ್‌ನಲ್ಲಿ ಬಿಸಿ ನೀರನ್ನು ಸುರಿಯಿರಿ. ಇದರಿಂದ ಸಿಂಕ್ ನಲ್ಲಿ ಇನ್ನು ಬ್ಲಾಕ್ ಇದೆಯೇ ಸರಿ ಹೋಗಿದೆಯೇ ಎನ್ನುವುದು ತಿಳಿಯುತ್ತದೆ. 


ಪ್ಲಂಬರ್ ಸ್ನೇಕ್ ಬಳಸಿ : 
ಹೆಚ್ಚು ವೃತ್ತಿಪರ ವಿಧಾನವನ್ನು ಪ್ರಯತ್ನಿಸಲು ಬಯಸುವುದಾದರೆ ಪ್ಲಂಬರ್ ಸ್ನೇಕ್  ಬಳಸಬಹುದು. ಅದು ಲೋಹದ ಹ್ಯಾಂಗರ್ ಮತ್ತು ಅದರೊಂದಿಗೆ ಸುರುಳಿಯ ತಂತಿಯನ್ನು ಜೋಡಿಸಿದಂತಿದೆ. ನೀವು ಪಿ-ಟ್ಯಾಂಪ್ ಅನ್ನು ಸಹ ಬಳಸಬಹುದು. ಇದರಲ್ಲಿ ಡ್ರೈನ್ ಕ್ಲೀನ್ ಮಾಡುವ ಪ್ರಕ್ರಿಯೆ 15 ನಿಮಿಷದಿಂದ ಒಂದು ಗಂಟೆಯವರೆಗೆ ತೆಗೆದುಕೊಳ್ಳಬಹುದು. 


ಇದನ್ನೂ ಓದಿ : Business Concept: ಮನೆಯ ಜಾಗವನ್ನೇ ಬಳಸಿ ಈ ನಾಲ್ಕು ವ್ಯಾಪಾರ ಆರಂಭಿಸಿ ಕೈತುಂಬಾ ಗಳಿಕೆ ಮಾಡಬಹುದು


ಈ ವಿಧಾನಗಳನ್ನು ಪ್ರಯತ್ನಿಸುವ ಮೂಲಕ, ನಿಮ್ಮ ಸಿಂಕ್‌ನಲ್ಲಿರುವ  ಬ್ಲಾಕ್ ಅನ್ನು ತೆರವುಗೊಳಿಸುವುದು ಸಾಧ್ಯವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.