Gold and Silver Price 09-06-2023: ಚಿನ್ನ ಪ್ರಿಯರಿಗೆ ಸಂತಸದ ಸುದ್ದಿಯೊಂದಿದೆ. ಕೆಲ ದಿನಗಳಿಂದ ದಾಖಲೆ ಮಟ್ಟ ತಲುಪಿದ್ದ ಬಂಗಾರದ ಬೆಲೆಯಲ್ಲಿ ಇಂದು ತಂಪು ಕಾಣಿಸುತ್ತಿದೆ. ಇದೀಗ ಇಳಿಕೆ ಕಂಡಿರುವುದು ಸಮಾಧಾನದ ಸಂಗತಿ ಎನ್ನಬಹುದು. US ಫೆಡ್ ಬಡ್ಡಿದರ ಹೆಚ್ಚಳದ ನಿರೀಕ್ಷೆಗಳ ಮೇಲೆ ಡಾಲರ್ ಲಾಭದ ಪರಿಣಾಮ ಚಿನ್ನ, ಬೆಳ್ಳಿಯಂತಹ ಅಮೂಲ್ಯ ಖನಿಜಗಳ ಮಾರುಕಟ್ಟೆ ಮೇಲೆ ಬೀಳುತ್ತಿದೆ.
ಇದನ್ನೂ ಓದಿ: ರಾಜಕಾಲುವೆ ನುಂಗಣ್ಣರಿಗೆ ಡಿಕೆಶಿ ಖಡಕ್ ವಾರ್ನ್: ಶಾಸಕಿ ಮಂಜುಳಾ ಅರವಿಂದ್ ತಬ್ಬಿಬ್ಬು
ಈಗ ಮದುವೆ ಸೀಸನ್ ನಡೆಯುತ್ತಿದೆ. ಚಿನ್ನಕ್ಕೆ ಉತ್ತಮ ಬೇಡಿಕೆ ಇದ್ದರೂ ಸಹ, ಬೆಲೆ ಇಳಿಕೆ ಕಂಡಿದೆ. ಈ ಬೆಳವಣಿಗೆ ಚಿನ್ನದ ಖರೀದಿದಾರರಿಗೆ ಉತ್ತಮ ಅವಕಾಶವಾಗಿದೆ. ಸದ್ಯ ದೇಶದ ರಾಜಧಾನಿ ದೆಹಲಿ ಮತ್ತು ಹೈದರಾಬಾದ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ತಿಳಿಯೋಣ.
ಬೆಳ್ಳಿಯ ದರ ನಿರಂತರವಾಗಿ ಕುಸಿಯುತ್ತಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಕಿಲೋ ಬೆಳ್ಳಿಯ ಬೆಲೆ 100 ರೂಪಾಯಿ ಇಳಿಕೆಯಾಗಿ 73 ಸಾವಿರದ 400 ರೂಪಾಯಿಗಳಿಗೆ ತಲುಪಿದೆ. ಮತ್ತೊಂದೆಡೆ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ನೋಡಿದರೆ ಇಂದು ಕೆಜಿ ಬೆಳ್ಳಿ ದರ 100 ರೂಪಾಯಿ ಇಳಿಕೆಯಾಗಿದೆ.
ಇನ್ನು ಬಂಗಾರದ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ. ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,200 ಆಗಿದ್ದರೆ, ರೂ. 24 ಕ್ಯಾರೆಟ್ ಚಿನ್ನದ ಬೆಲೆ 60,220 ರೂ. ಇದೆ
ಇಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ?
22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 55,200 ರೂ
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ: 60,220 ರೂ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 55,250 ರೂ
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ: 60,270 ರೂ
ವಿವಿಧ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:
ಬೆಂಗಳೂರು: 55,250 ರೂ
ಚೆನ್ನೈ: 55,650 ರೂ
ಮುಂಬೈ: 55,200 ರೂ
ದೆಹಲಿ: 55,350 ರೂ
ಕೋಲ್ಕತ್ತಾ: 55,200 ರೂ
ಕೇರಳ: 55,200 ರೂ
ಜೈಪುರ: 55,350 ರೂ
ಲಕ್ನೋ: 55,350 ರೂ
ಇದನ್ನೂ ಓದಿ: Crime News : ಪಾರ್ಟಿ ಕೊಡಿಸಿದವನಿಗೆ ಥ್ಯಾಂಕ್ಸ್ ಬದಲಾಗಿ, ತಲೆ ಬುರುಡೆಯನ್ನೇ ಬಿಚ್ಚಿದ್ದ ಸ್ನೇಹಿತರು!
36 ಸಾವಿರದವರೆಗೆ ರಿಯಾಯಿತಿ ಲಭ್ಯ:
ಕಲ್ಯಾಣ್ ಜ್ಯುವೆಲರ್ಸ್ ಒಡೆತನದ ಆನ್ ಲೈನ್ ಆಭರಣ ಬ್ರ್ಯಾಂಡ್ ಕ್ಯಾಂಡೆರೆ ಚಿನ್ನದ ಬೆಲೆಯಲ್ಲಿ 36 ಸಾವಿರ ರೂ, ಇಳಿಕೆ ಮಾಡಿದೆ. ಅಂದರೆ ಶ್ರೀಶಾ ಟಸ್ಕಿ ಕೀರಾ ಗೋಲ್ಡ್ ನೆಕ್ಲೇಸ್ ಮೇಲೆ ಈ ಬೃಹತ್ ಕೊಡುಗೆ ನೀಡಲಾಗಿದ್ದು, 36 ಸಾವಿರ ರೂ. ರಿಯಾಯಿತಿ ನೀಡಿದೆ. ಇದರ ನೈಜ ಬೆಲೆ ರೂ. 1,84,213. ಆದರೆ ಈಗ ನೀವು ಇದನ್ನು 1,47,348 ಕ್ಕೆ ಖರೀದಿಸಬಹುದು. ಅಂದರೆ ಈ ನೆಕ್ಲೇಸ್ ಮೇಲೆ ರೂ. 36,865 ಡಿಸ್ಕೌಂಟ್ ಸಿಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ