Basella Alba Benefits for white Hair: ಕೂದಲನ್ನು ಬುಡದಿಂದಲೇ ಕಪ್ಪಾಗಿಸಲು ಅನೇಕ ಜನರು ಅನೇಕ ರೀತಿಯ ಟಿಪ್ಸ್’ಗಳನ್ನು ಟ್ರೈ ಮಾಡಿರಬಹುದು. ಆದರೆ ಎಂದಾದರೂ ಆಹಾರ ಪದ್ಧತಿಯನ್ನು ಫಾಲೋ ಮಾಡಿ ನೋಡಿದ್ದೀರಾ? ಇಲ್ಲವಾದರೆ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ನೋಡಿ. ತಕ್ಷಣವೇ ರಿಸಲ್ಟ್ ಗೋಚರಿಸುತ್ತೆ.


COMMERCIAL BREAK
SCROLL TO CONTINUE READING

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣುಗಳನ್ನು ಸೇವಿಸಿದರೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್-ಸಿ ಇರುತ್ತದೆ. ಹೀಗಾಗಿ ಇವುಗಳ ಸಹಾಯದಿಂದ ಬಿಳಿ ಕೂದಲನ್ನು ಅಂದುಕೊಂಡದಕ್ಕಿಂತ ವೇಗವಾಗಿ ಕಪ್ಪಾಗಿಸಬಹುದು. ಈ ಹಣ್ಣನ್ನು ವಾರಕ್ಕೆ 2 ಬಾರಿ ಸೇವಿಸಿದರೆ ಉತ್ತಮ.


ಇದನ್ನೂ ಓದಿ: ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?


ನಿಂಬೆ: ನಿಂಬೆಯಿಂದಲೂ ಪ್ರಯೋಜನ ಪಡೆಯಬಹುದು. ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವ ನಿಂಬೆ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.


ನೆಲ್ಲಿಕಾಯಿ: ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿ ಕೂದಲಿನ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜತೆಗೆ ಕೂದಲು ಉದುರುವಿಕೆಯನ್ನು ತಡೆಯುತ್ತದೆ.


ಸೋಯಾಬೀನ್: ಸೋಯಾಬೀನ್ ಸಹ ಕೂದಲಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಂದಿರುತ್ತದೆ. ಹೀಗಾಗಿ ಕೂದಲಿನ ನೈಸರ್ಗಿಕ ಸೌಂದರ್ಯ ಮತ್ತು ಬಣ್ಣವನ್ನು ಕಾಪಾಡಿಕೊಳ್ಳುತ್ತವೆ.


ಬಸಳೆ ಎಲೆ: ಬಸಳೆ ಎಲೆಯಲ್ಲಿ ವಿಟಮಿನ್ ಎ, ಸಿ, ಫೋಲೇಟ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ವಾರಕ್ಕೆ ಒಂದು ಬಾರಿಯಾದರೂ ಇದನ್ನು ಸೇವನೆ ಮಾಡಿದರೆ ಶೀಘ್ರವಾಗಿ ಬಿಳಿಕೂದಲು ಪರ್ಮನೆಂಟ್ ಆಗಿ ಕಪ್ಪಾಗುತ್ತದೆ.


ಇದನ್ನೂ ಓದಿ: ವಿಶ್ವಕಪ್ ಬಳಿಕ ನಿವೃತ್ತಿ ಘೋಷಣೆಗೆ ಮುಂದಾದ ನಾಯಕ! 23ರ ಹರೆಯದ ಸ್ಪಿನ್ನರ್ ಮುಂದಿನ ಕ್ಯಾಪ್ಟನ್..!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್