ಬೆಂಗಳೂರು : ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಎಲ್ಲೇ ಹೋದರೂ ಜನರು ತೂಕ ಹೆಚ್ಚಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜು  ಗಂಭೀರ ಸಮಸ್ಯೆಯಾಗಿದೆ. ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ  ನಮ್ಮ ಆರೋಗ್ಯ, ಊಟ ತಿಂಡಿ ಬಗ್ಗೆ ನಾವು ಅತಿಯಾದ ನಿರ್ಲಕ್ಷ್ಯ ತೋರಿಸುತ್ತೇವೆ. ಇದರ ಪರಿಣಾಮ ಬೀಳುವುದೇ ಹೊಟ್ಟೆಯ ಮೇಲೆ. ಯಾಕೆಂದರೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಬೆಳೆದು ಬಿಡುತ್ತದೆ. ಹೀಗಾಗಿ ಮೈ ಕೈ ಮತ್ತು ದೇಹದ ಇತರ ಭಾಗಗಳು ಸಣ್ಣಗೆ ಇದ್ದರೂ ಹೊಟ್ಟೆ ಮಾತ್ರ ದುಂಡಾಗಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕರಗಿಸುವುದು ಅಷ್ಟು ಸುಲಭವಲ್ಲ. 


COMMERCIAL BREAK
SCROLL TO CONTINUE READING

ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸಲು ಜನರು ಮೊದಲು ಆಯ್ಕೆ ಮಾಡಿಕೊಳ್ಳುವುದೇ ಜಿಮ್. ಇನ್ನು ಕೆಲವರು ಬೇರೆ ದೈಹಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆದರೆ ಇದರ ಜೊತೆ ಆಹಾರದ ಮೇಲೆ ನಿಯಂತ್ರಣ ಹೊಂದುವುದು ಕೂಡಾ ಬಹಳ ಮುಖ್ಯ. ಹಾಗಿದ್ದರೆ ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ನಮ್ಮ ಆಹಾರದಲ್ಲಿ ಏನನ್ನು ಸೇರಿಸಬೇಕು ಎನ್ನುವ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : ಈ ಜ್ಯೂಸ್ ನಿಂದ ದಿನ ಆರಂಭಿಸಿ ! ಅಧಿಕ ರಕ್ತದೊತ್ತಡ ಸಮಸ್ಯೆಗೆ ಇದು ದಿವೌಷಧ


1. ಸೂಪ್ ಕುಡಿಯಿರಿ :
ಭಾರತದಲ್ಲಿ, ನಾವು ಸಾಮಾನ್ಯವಾಗಿ ಘನ ಆಹಾರ ಅಥವಾ ಸಾಲಿಡ್ ಫುಡ್ ತಿನ್ನಲು ಇಷ್ಟಪಡುತ್ತೇವೆ. ಇದರಿಂದಾಗಿ ಜೀರ್ಣಕ್ರಿಯೆಯು ವಿಳಂಬವಾಗುತ್ತದೆ. ನಮ್ಮ ದೇಹ ತೂಕವೂ ಹೆಚ್ಚಾಗುತ್ತದೆ. ಇದರ ಬದಲಿಗೆ, ಸಾಧ್ಯವಾದಷ್ಟು ಸೂಪ್ ಅನ್ನು ಕುಡಿಯಿರಿ. ನಿಮ್ಮ ದೇಹಕ್ಕೆ ಎಷ್ಟು ಕ್ಯಾಲೋರಿ ಅಗತ್ಯವಾಗಿ ಬೇಕೋ ಅಷ್ಟು ಪ್ರಮಾಣದ ಕ್ಯಾಲೋರಿಯನ್ನು  ಸೂಪ್ ಮೂಲಕ ಪಡೆದುಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೂಕವನ್ನು ಕಳೆದುಕೊಳ್ಳುವುದು ಸುಲಭವಾಗುತ್ತದೆ.


2. ಮೂಲಂಗಿ :
ಮೂಲಂಗಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯುವ ಸಸ್ಯವಾಗಿದೆ. ಈ ಋತುವಿನಲ್ಲಿ, ಮಾನವ ದೇಹದ ಚಟುವಟಿಕೆಯು ಕಡಿಮೆಯಾಗುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವ ಅಪಾಯ ಕೂಡಾ ಏರುತ್ತದೆ. ಆದ್ದರಿಂದ ನಾವು ಮೂಲಂಗಿಯನ್ನು ತಿನ್ನಬೇಕು. ಇದು ಕಡಿಮೆ ಕ್ಯಾಲೋರಿ ಆಹಾರವಾಗಿದ್ದು, ದೇಹದಲ್ಲಿ ಕೊಬ್ಬು ಬೆಳೆಯಲು ಬಿಡುವುದಿಲ್ಲ. 


ಇದನ್ನೂ ಓದಿ : ಈ ತರಕಾರಿಯ ಹೇರ್ ಮಾಸ್ಕ್ ನಿಂದ ಬಿಳಿ ಕೂದಲು ಕಪ್ಪಾಗುವುದು ಖಚಿತ!


3. ಸಿಹಿ ಗೆಣಸು :
ನೆಲದಲ್ಲಿ ಬೆಳೆಯುವ ಗೆಣಸು ಒಂದು ಅತ್ಯುತ್ತಮವಾದ ಆಹಾರವಾಗಿದೆ.  ಇದನ್ನು ಪ್ರತಿನಿತ್ಯ ತಿನ್ನುವುದರಿಂದ ಹೊಟ್ಟೆ ತುಂಬಿರುತ್ತದೆ. ಆದ್ದರಿಂದ  ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಇದಲ್ಲದೆ, ಸಿಹಿ ಗೆಣಸಿನಲ್ಲಿರುವ   ನಾರಿನ ಪ್ರಮಾಣವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.


4. ಸಿಟ್ರಸ್ ಹಣ್ಣುಗಳು :
ನಿಂಬೆಹಣ್ಣು, ಕಿತ್ತಳೆ ಮತ್ತು ಟ್ಯಾಂಗರಿನ್‌ಗಳಲ್ಲಿ ಸಾಮಾನ್ಯವಾಗಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ತೂಕ ನಷ್ಟಕ್ಕೆ ಕೂಡಾ ಪ್ರಯೋಜನಕಾರಿಯಾಗಿದೆ. 


ಇದನ್ನೂ ಓದಿ :  ಯಾವ ವ್ಯಾಯಾಮವೂ ಬೇಡ ! ಪೇರಳೆ ಹಣ್ಣನ್ನು ಹೀಗೆ ತಿಂದರೆ ಕೆಲವೇ ದಿನಗಳಲ್ಲಿ ತೂಕ ಕಳೆದು ಕೊಳ್ಳುವುದು ಗ್ಯಾರಂಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.