Eating Habits:ಆಯುರ್ವೇದದಲ್ಲಿ (Ayurveda), ಆಹಾರ ಮತ್ತು ಪಾನೀಯಗಳ ಸೇವನೆ  ಬಗ್ಗೆ ಅನೇಕ ನಿಯಮಗಳನ್ನು ಹೇಳಲಾಗಿದೆ, ಈ ನಿಯಮಗಳು ನಿಮ್ಮ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತವೆ. ಇದೆ ರೀತಿ, ಹಣ್ಣುಗಳನ್ನು (Fruits) ತಿನ್ನಲು ಸರಿಯಾದ ಸಮಯವನ್ನು ಸಹ ತಿಳಿಸಲಾಗಿದೆ. ಹಣ್ಣುಗಳು ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿವೆ ಮತ್ತು ನೀವು ದಿನಕ್ಕೆ ಒಂದು ಅಥವಾ ಎರಡು ಬಾರಿ ಹಣ್ಣುಗಳನ್ನು ಸೇವಿಸಿದರೆ, ಅದು ನಿಮಗೆ ಪ್ರಯೋಜನವನ್ನು ನೀಡಲಿದೆ.


COMMERCIAL BREAK
SCROLL TO CONTINUE READING

ಹಣ್ಣುಗಳನ್ನು ತಿನ್ನುವ ಸರಿಯಾದ ಸಮಯ
ಹಣ್ಣುಗಳು ದೇಹದ ತೂಕ ಇಳಿಕೆಗೆ ಸಹಕಾರಿಯಾಗಿವೆ ಮತ್ತು ದೈನಂದಿನ ಸೇವನೆಯು ಅನೇಕ ರೋಗಗಳ (Helath Tips) ಅಪಾಯವನ್ನು ಕಡಿಮೆಗೊಳಿಸುತ್ತದೆ. ಆಯುರ್ವೇದದ ಪ್ರಕಾರ, ನೀವು ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ಮಾತ್ರ ಅದರ ಸಂಪೂರ್ಣ ಪ್ರಯೋಜನಗಳನ್ನು  (Benefits Of Fruits)ಪಡೆಯುತ್ತೀರಿ. ಸೂರ್ಯಾಸ್ತದ ನಂತರ ನೀವು ಹಣ್ಣುಗಳನ್ನು ತಿಂದರೆ, ನಿಮಗೆ ಅಷ್ಟೊಂದು ಲಾಭ ಸಿಗುವುದಿಲ್ಲ. 


ಬ್ಯಾಕ್ಟೀರಿಯಾ ಹೆಚ್ಚಾಗುತ್ತವೆ
ಸೂರ್ಯಾಸ್ತದ (Sunset) ಮೊದಲು ಹಣ್ಣುಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ ಪೂರ್ಣ ಸಮಯವನ್ನು ನೀಡುತ್ತದೆ. ಈ ಕಾರಣದಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಬಲವಾಗಿ ಉಳಿಯುತ್ತದೆ. ಮತ್ತೊಂದೆಡೆ, ಹಗಲಿನಲ್ಲಿ ಹಣ್ಣುಗಳನ್ನು ತಿನ್ನುವುದು ಕೂಡ ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಸೂರ್ಯಾಸ್ತದ ನಂತರ ನೀವು ಹಣ್ಣುಗಳನ್ನು ತಿಂದರೆ, ಈ ಸಮಯದಲ್ಲಿ ಪರಿಸರದಲ್ಲಿ ಹೆಚ್ಚು ತೇವಾಂಶ ಇರುತ್ತದೆ ಮತ್ತು ಈ ತೇವಾಂಶ ಕೂಡ ಹಣ್ಣುಗಳಲ್ಲಿ ಬರಲಾರಂಭಿಸುತ್ತದೆ. ಇದು ಬ್ಯಾಕ್ಟೀರಿಯಾ ಹೆಚ್ಚಳಕ್ಕೆ ಅನುವು ಮಾಡಿಕೊಡುತ್ತದೆ.


ಇದನ್ನೂ ಓದಿ-Dark Underarms Treatment: ಮನೆಯಲ್ಲೇ ಇರುವ ಈ ಪದಾರ್ಥಗಳನ್ನು ಬಳಸಿ ಐದೇ ನಿಮಿಷದಲ್ಲಿ ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯಿಂದ ಪರಿಹಾರ ಪಡೆಯಿರಿ


ಊಟದ ಸ್ವರೂಪದಲ್ಲಿ ಬದಲಾವಣೆ
ಈ ಬ್ಯಾಕ್ಟೀರಿಯಾಗಳು ನಿಮ್ಮ ಹೊಟ್ಟೆಗೆ ಪ್ರವೇಶಿಸಿದಾಗ, ಅವು ನಿಮಗೆ ಹಾನಿ ಮಾಡುತ್ತವೆ. ಆಯುರ್ವೇದದ ಪ್ರಕಾರ, ಸೂರ್ಯಾಸ್ತದ ನಂತರ ಆಹಾರದ ಸ್ವರೂಪ ಬದಲಾಗುತ್ತದೆ. ಈ ಕಾರಣದಿಂದಾಗಿ ಹಣ್ಣುಗಳಲ್ಲಿರುವ ಪೋಷಕಾಂಶಗಳು ನಾಶವಾಗಲಾರಂಭಿಸುತ್ತವೆ. ಅದಕ್ಕಾಗಿಯೇ ನೀವು ಸೂರ್ಯಾಸ್ತದ ನಂತರ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು.


ಇದನ್ನೂ ಓದಿ-Health Tips: ಮೆಟ್ಟಿಲುಗಳನ್ನು ಹತ್ತುವಾಗ, ಇಳಿಯುವಾಗ ನಿಮಗೂ ಏದುಸಿರು ಬರುತ್ತಾ? ಈ ಬಗ್ಗೆ ಹುಷಾರಾಗಿರಿ!


(ಸೂಚನೆ- ಈ ಲೆಕ್ಷನದಲ್ಲಿ ನೀಡಲಾಗಿರುವ ಮನೆ ಉಪಾಯಗಳು ಹಾಗೂ ಮಾಹಿ ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ, ಇವುಗಳನ್ನು ಅನುಸರಿಸುವ ಮುನ್ನ ನುರಿತ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕಣ್ಣಾ ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ )


ಇದನ್ನೂ ಓದಿ-Benefits Of Sweet Potato: ಸಿಹಿಗೆಣಸಿನ ಸೇವನೆ ಆರೋಗ್ಯಕ್ಕೆ ಎಷ್ಟು ಆರೋಗ್ಯಕರ? ಅದಕ್ಕೆ ಸಂಬಂಧಿಸಿದ ಪ್ರಮುಖ ವಿಷಯವನ್ನು ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.