High BP Tips: ಇಂದಿನ ಕಾಲದಲ್ಲಿ ಬಹುತೇಕರ ರಕ್ತದೊತ್ತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಸರಿಯಾದ ಆಹಾರ ಸೇವನೆಯ ಮೂಲಕ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಏಕೆಂದರೆ, ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಜೊತೆಗೆ ನೇರ ಸಂಬಂಧ ಹೊಂದಿದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನಾವು ಯಾವ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

1. ಅಧಿಕ ರಕ್ತದೊತ್ತಡ ಇರುವವರು ಕಡಿಮೆ ಉಪ್ಪನ್ನು ಸೇವಿಸಬೇಕು. ಸೋಡಿಯಂ ಉಪ್ಪಿನಲ್ಲಿ ಸಾಕಷ್ಟು ಕಂಡುಬರುತ್ತದೆ, ಇದು ನಿಮಗೆ ಹಾನಿಕಾರಕ ಸಾಬೀತಾಗುವ ಸಾಧ್ಯತೆ ಇದೆ.

2. ಆಹಾರದ ಜೊತೆಗೆ ಉಪ್ಪಿನಕಾಯಿ ಕೂಡ ಬೇಕು. ಹಲವರಿಗೆ ಈ ಅಭ್ಯಾಸ ಇರುತ್ತದೆ. ಆದರೆ ನೀವು ಅಧಿಕ ರಕ್ತದೊತ್ತಡದ ರೋಗಿಗಳಾಗಿದ್ದರೆ, ನೀವು ಉಪ್ಪಿನಕಾಯಿ ಸೇವನೆಯಿಂದ ದೂರವಿರಬೇಕು.

3. ಬಿಪಿ ರೋಗಿಗಳು ಮದ್ಯ ಸೇವಿಸಬಾರದು. ಏಕೆಂದರೆ ಆಲ್ಕೋಹಾಲ್ ಸೇವನೆಯು ನಿಮಗೆ ಹಾನಿಕಾರಕವಾಗಿದೆ.


ಇದನ್ನೂ ಓದಿ-Neera Health Benefits: ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೈಸರ್ಗಿಕ ಜ್ಯೂಸ್!

4. ಹೆಚ್ಚಿನ ಜನರು ಆಗಾಗ್ಗೆ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ ಆದರೆ ಅಧಿಕ ಬಿಪಿ ರೋಗಿಗಳು ಚಹಾವನ್ನು ಕುಡಿಯುವುದನ್ನು ತಪ್ಪಿಸಬೇಕು ಏಕೆಂದರೆ ಇದನ್ನು ಸೇವಿಸುವುದರಿಂದ ನಿಮ್ಮ ಬಿಪಿ ಹೆಚ್ಚಾಗುತ್ತದೆ.


ಇದನ್ನೂ ಓದಿ-Piles Remedy: ಪೈಲ್ಸ್ ನೋವಿನಿಂದ ಭಾರಿ ಪರಿಹಾರ ಒದಗಿಸುತ್ತದೆ ಮನೆಮದ್ದು

5. ಬಿಪಿ ಇರುವವರು ಫಾಸ್ಟ್ ಫುಡ್ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಫಾಸ್ಟ್ ಫುಡ್ ನಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಬಿಪಿ ಹೆಚ್ಚಾಗಬಹುದು.


ಇದನ್ನೂ ಓದಿ-Weight Loss Juice: ತೂಕ ಇಳಿಕೆಗೆ ಈ ವಿಶೇಷ ಜ್ಯೂಸ್ ನಿಮ್ಮ ಆಹಾರದಲ್ಲಿರಲಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.