ನಿಮ್ಮ ಮನೆಯಲ್ಲಿಯೇ ಇರುವ ಈ ವಸ್ತುಗಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ !
ಇಂದಿನ ಜಗತ್ತಿನಲ್ಲಿ ಅಕಾಲಿಕ ಬಿಳಿ ಕೂದಲು ದುರದೃಷ್ಟವಶಾತ್ ಕೆಮ್ಮು ಮತ್ತು ಶೀತದಂತೆಯೇ ಸಾಮಾನ್ಯವಾಗಿದೆ. ಬಿಳಿ ಕೂದಲಿಗೆ ಕೆಲವು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಪರಿಹಾರಗಳು ಇಲ್ಲಿವೆ.
ಬೆಂಗಳೂರು : ಇಂದಿನ ಜಗತ್ತಿನಲ್ಲಿ ಕಿರಿ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಕೆಮ್ಮು ಮತ್ತು ಶೀತದಂತೆಯೇ ಸಾಮಾನ್ಯವಾಗಿದೆ. ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದಕ್ಕೆ ವಂಶವಾಹಿಯನ್ನು ದೂಷಿಸುವುದು ಸರಿಯಲ್ಲ. ಕೂದಲು ಅಕಾಲಿಕವಾಗಿ ಬೆಳ್ಳಗಾಗುವುದಕ್ಕೆ ಕಾರಣವಾಗುವ ಅಂಶಗಳು ಹಲವಾರು. ಇದರಲ್ಲಿ ಬಹು ಮುಖ್ಯವಾದದ್ದು ಅಸಮತೋಲಿತ ಆಹಾರ. ಇನ್ಸ್ಟಂಟ್ ಆಹಾರ, ಮೈದಾ ಹಿಟ್ಟಿನಿಂದ ಮಾಡಿದ ಭಕ್ಷ್ಯಗಳು, ಗಾಳಿಯಾಡಿಸಿದ ಪಾನೀಯಗಳು ಮತ್ತು ಸಕ್ಕರೆಗಳನ್ನು ಒಳಗೊಂಡಿರುವ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸುತ್ತಿದ್ದರೆ ಆರೋಗ್ಯಕರ ಚರ್ಮ ಅಥವಾ ಕೂದಲನ್ನು ಹೊಂದುವುದು ಖಂಡಿತಾ ಸಾಧ್ಯವಾಗುವುದಿಲ್ಲ. ಬಿ 12, ಕಬ್ಬಿಣ ಮತ್ತು ಒಮೆಗಾ 3 ಹೆಚ್ಚಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗಿರುತ್ತದೆ. ಅಲ್ಲದೆ ತಾಜಾ ಸಲಾಡ್ ಗಳ ಸೇವನೆ ಕೂಡಾ ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಬಹಳ ಮುಖ್ಯ. ಚರ್ಮ ಮತ್ತು ಕೂದಲಿನ ಸಲುವಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಮೀನು ಮತ್ತು ಕೋಳಿ, ಹಣ್ಣುಗಳು ಮತ್ತು ಹಸಿರು ತರಕಾರಿಗಳಂತಹ ಆಹಾರಗಳನ್ನು ಸೇವಿಸಬೇಕು. ಪಾನೀಯಗಳ ವಿಷಯಕ್ಕೆ ಬಂದರೆ ಎಳ ನೀರು, ನಿಂಬೆ ನೀರು, ಮಜ್ಜಿಗೆ ಅಥವಾ ತಾಜಾ ಹಣ್ಣಿನ ರಸವನ್ನು ಹೆಚ್ಚು ಹೆಚ್ಚು ಸೇವಿಸಬೇಕು.
ಅಕಾಲಿಕ ಬಿಳಿ ಕೂದಲನ್ನು ತಡೆಯುವುದು ಹೇಗೆ ? :
ಕೂದಲಿನ ಆರೋಗ್ಯದ ಬಗ್ಗೆ ನಿಯಮಿತ ಕಾಳಜಿ ಅಗತ್ಯ. ಇತ್ತೀಚಿನ ಒತ್ತಡದ ಬದುಕಿನಲ್ಲಿ ಕೂದಲಿನ ಆರೋಗ್ಯವನ್ನು ಬಹುತೇಕ ಮಂದಿ ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಇದು ತಪ್ಪು. ನಿಯಮಿತವಾಗಿ ಶ್ರದ್ಧೆಯಿಂದ ನಿಮ್ಮ ಕೂದಲು ಮತ್ತು ಚರ್ಮದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಸುಂದರ ಕೂದಲನ್ನು ಹೊಂದುವುದು ಸಾಧ್ಯವಾಗುತ್ತದೆ. ಇನ್ನು ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವ ಬಿಳಿ ಕೂದಲಿನ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಶಾಶ್ವತ ಪರಿಹಾರಗಳಿರುತ್ತವೆ. ಹೇರ್ ಕಲರ್, ಡೈ ಇವುಗಳ ಮೊರೆ ಹೋಗದೆ ನೈಸರ್ಗಿಕವಾಗಿ ಸಿಗುವ ಈ ವಸ್ತುಗಳನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಮತ್ತೆ ಕಪ್ಪಾಗುತ್ತದೆ.
ಇದನ್ನೂ ಓದಿ : Rainy Season Tips: ಮಳೆಗಾಲದ ಋತುವಿನಲ್ಲಿ ಈ ಗಿಡಮೂಲಿಕೆಗಳನ್ನು ಬಳಸಿ ಆರೋಗ್ಯ ರಕ್ಷಿಸಿಕೊಳ್ಳಿ!
1. ನೆಲ್ಲಿಕಾಯಿ ಪುಡಿ :
1 ಕಪ್ ನೆಲ್ಲಿಕಾಯಿ ಪುಡಿಯನ್ನು ಕಬ್ಬಿಣದ ಪಾತ್ರೆಯಲ್ಲಿ ಕಪ್ಪು ಬಣ್ಣ ಬರುವವರೆಗೆ ಬಿಸಿ ಮಾಡಿ. ಅದಕ್ಕೆ 500 ಮಿಲಿ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು 20 ನಿಮಿಷಗಳ ಕಾಲ ನಿಧಾನ ಜ್ವಾಲೆಯಲ್ಲಿ ಕುದಿಸುತ್ತಾ ಬನ್ನಿ. ನಂತರ ಈ ಮಿಶ್ರಣವನ್ನು ತಣ್ಣಗಾಗಲು 24 ಗಂಟೆಗಳವರೆಗೆ ಬಿಡಿ. ತಣ್ಣಗಾದ ಮೇಲೆ ಈ ಮಿಶ್ರಣವನ್ನು ಗಾಳಿಯಾಡದ ಬಾಟಲಿಗೆ ಹಾಕಿಟ್ಟುಕೊಳ್ಳಿ. ಈ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಹೀಗೆ ಮಾಡುತ್ತಾ ಬಂದರೆ ಕ್ರಮೇಣ ಬಿಳಿ ಕೂದಲು ಕಪ್ಪಾಗುತ್ತದೆ.
2. ಕರಿಬೇವಿನ ಎಲೆಗಳು :
ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು 2 ಟೀಸ್ಪೂನ್ ನೆಲ್ಲಿಕಾಯಿ ಪುಡಿ ಮತ್ತು 2 ಟೀಸ್ಪೂನ್ ಬ್ರಾಹ್ಮಿ ಪುಡಿಯೊಂದಿಗೆ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡ ಪೇಸ್ಟ್ ಅನ್ನು ಹೇರ್ ಮಾಸ್ಕ್ ಆಗಿ ಕೂದಲಿಗೆ ಹಚ್ಚಿ, ಕೂದಲ ಬುಡದಿಂದ ತುದಿಯವರೆಗೆ ಈ ಮಿಶ್ರಣವನ್ನು ಹಚ್ಚಿ. ಒಂದು ಗಂಟೆಯವರೆಗೆ ಈ ಹೇರ್ ಪ್ಯಾಕ್ ಅನ್ನು ಕೂದಲಿನಲ್ಲಿ ಬಿಟ್ಟು ಸೌಮ್ಯವಾದ ಗಿಡಮೂಲಿಕೆ ಶಾಂಪೂ ಬಳಸಿ ಕೂದಲು ತೊಳೆಯಿರಿ.
ಇದನ್ನೂ ಓದಿ : Heart Care Tips: ಈ ಒಂದು ಪರೀಕ್ಷೆ ಮಾಡಿಸಿಕೊಂಡು ನೀವು ಹೃದ್ರೋಗದ ಅಪಾಯದಿಂದ ಪಾರಾಗಬಹುದು!
3. ಇಂಡಿಗೊ ಮತ್ತು ಮೆಹಂದಿ :
ಇಂಡಿಗೊ, ಮತ್ತು ಮೆಹೆಂದಿಯನ್ನು ಕೂದಲ ಬಣ್ಣ ಮತ್ತು ಹೊಳಪು ಕಾಪಾಡಿಕೊಳ್ಳುವ ಸಲುವಾಗಿ ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ಇಂಡಿಗೊ ನೀಲಿ ಕಪ್ಪು ಬಣ್ಣವನ್ನು ಸೃಷ್ಟಿಸುತ್ತದೆ. ಹೀಗಾಗಿ ಬಿಳಿ ಕೂದಲನ್ನು ಮರೆ ಮಾಚಲು ಇದು ಅತ್ಯಂತ ಸಹಾಯಕ. ಇನ್ನು ಬಿಳಿ ಕೂದಲನ್ನು ಮರೆ ಮಾಚಲು ಇಂಡಿಗೋ ಜೊತೆ ಮೆಹಂದಿಯನ್ನು ಸೇರಿಸಿ ಈ ಮಿಶ್ರಣವನ್ನು ಹಚ್ಚಿದರೆ ಬಿಳಿ ಕೂದಲು ಮರೆಯಾಗಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
4. ತೆಂಗಿನ ಎಣ್ಣೆ :
ತೆಂಗಿನೆಣ್ಣೆ ಮತ್ತು ನಿಂಬೆ ರಸವನ್ನು ಒಟ್ಟಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಈ ಎರಡರ ಸಂಯೋಜನೆಯು ರಾಸಾಯನಿಕ ಕ್ರಿಯೆಯನ್ನು ಉಂಟುಮಾಡುತ್ತದೆ. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ. ತೆಂಗಿನ ಎಣ್ಣೆತೆಂಗಿನ ಎಣ್ಣೆ ಮತ್ತುನಿಂಬೆ ರಸವನ್ನು ಒಟ್ಟಿಗೆ ಬೆರೆಸುವುದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Monsoon Snacks: ಮಳೆಗಾಲಕ್ಕೆ ಬಾಯಲ್ಲಿ ನೀರೂರಿಸುವ ಈ ತಿಂಡಿ ಸವಿದು ಖುಷಿಪಡಿ
5. ಬ್ಲಾಕ್ ಟೀ :
ಬ್ಲಾಕ್ ಟೀ ಬಿಳಿ ಕೂದಲನ್ನು ತಡೆಯಲು ಸಹಾಯ ಮಾಡುವ ಮತ್ತೊಂದು ಪರಿಣಾಮಕಾರಿ ಅಂಶವಾಗಿದೆ. ಸರಿಸುಮಾರು 200 ಮಿಲಿ ಟೀ ತೆಗೆದುಕೊಳ್ಳಿ. ಕೂದಲಿಗೆ ಶಾಂಪೂ ಮಾಡಿದ ನಂತರ ಕಂಡಿಷನರ್ ರೀತಿ ಈ ಬ್ಲಾಕ್ ಟೀಯನ್ನು ಬಳಸಿ. ಇದಲ್ಲದೆ ಚಹಾ ಪುಡಿಯನ್ನು 2 ಗಂಟೆಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿ ಮತ್ತು ಅದನ್ನು ನಯವಾದ ಪೇಸ್ಟ್ ರೀತಿ ರುಬ್ಬಿಕೊಳ್ಳಿ. ಈ ಪೇಸ್ಟ್ ಗೆ ಸ್ವಲ್ಪ ನಿಂಬೆ ರಸ ಬೆರೆಸಿ. ಕೂದಲನ್ನು ತೊಳೆಯುವ ಮೊದಲು 40 ನಿಮಿಷಗಳ ಕಾಲ ಹೇರ್ ಮಾಸ್ಕ್ ಆಗಿ ಕೂದಲಿಗೆ ಹಚ್ಚಿ. ಹೀಗೆ ಮಾಡಿದರೂ ಬಿಳಿ ಕೂದಲು ಮಾಯವಾಗುತ್ತದೆ.
ಮೇಲೆ ಹೇಳಿದ ಯಾವುದೇ ವಿಧಾನವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಬಿಳಿ ಕೂದಲಿನ ಸಮಯೆಗೆ ಮುಕ್ತಿ ಸಿಗುತ್ತದೆ. ಅಲ್ಲದೆ ಹೇರ್ ಡೈ, ಹೇರ್ ಕಲರ್, ಸ್ಪಾ ಸಲೂನ್ ಮೊರೆ ಹೋಗುವ ಅಗತ್ಯವೂ ಇರುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.