Monsoon Snacks: ಮಳೆಗಾಲಕ್ಕೆ ಬಾಯಲ್ಲಿ ನೀರೂರಿಸುವ ಈ ತಿಂಡಿ ಸವಿದು ಖುಷಿಪಡಿ

Monsoon Season Snacks: ಮಳೆಗಾಲವನ್ನು ಮತ್ತಷ್ಟು ರೋಮಾಂಚನಗೊಳಿಸಲು ಬಾಯಲ್ಲಿ ನೀರೂರಿಸುವ ಈ ತಿಂಡಿಗಳನ್ನು ತಯಾರಿಸಿ ಸೇವಿಸಿ ಖುಷಿಪಡಿ.

Best Monsoon Snacks: ಮಾನ್ಸೂನ್ ಬಂದಿದೆ. ದೇಶದಾದ್ಯಂತ ವರುಣನ ಆರ್ಭಟ ಜೋರಾಗಿದೆ.  ಮಳೆ ಬಂದಾಗ ಬಿಸಿ ಬಿಸಿ ಚಹಾದೊಂದಿಗೆ ಕರಿದ ತಿಂಡಿಗಳಿದ್ದರೆ ಅದರ ಮಜಾನೇ ಬೇರೆ. ಭಾರತದಲ್ಲಿ ಮಳೆಗಾಲದ ವೇಳೆ ಚಹಾದ ಜೊತೆಗೆ ವಿವಿಧ ರೀತಿಯ ಕರಿದ ತಿಂಡಿಗಳನ್ನು ಸೇವಿಸುವುದು ವಾಡಿಕೆ. ಜೋರಾಗಿ ಮಳೆ ಬರುತ್ತಿರುವಾಗ ಏನಾದರೂ ಕುರುಕುಲು ತಿಂಡಿ ತಿನ್ನಬೇಕೆಂದು ನಮ್ಮ ಮನಸ್ಸು ಹಾತೊರೆಯುತ್ತದೆ. ಹೀಗಾಗಿ ಮಳೆಗಾಲವನ್ನು ಮತ್ತಷ್ಟು ರೋಮಾಂಚನಗೊಳಿಸಲು ಬಾಯಲ್ಲಿ ನೀರೂರಿಸುವ ಈ ತಿಂಡಿಗಳನ್ನು ತಯಾರಿಸಿ ಸೇವಿಸಿ ಖುಷಿಪಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸಮೋಸಾ ಅಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸಮೋಸಾ ಅನೇಕರ ಫೆವರೀಟ್ ಸ್ನಾಕ್ಸ್ ಅಂದರೆ ತಪ್ಪಾಗಲ್ಲ. ಮಳೆಗಾಲದಲ್ಲಿ ಗರಿಗರಿಯಾದ ಸಮೋಸಾ ಸೇವಿಸುವುದೇ ಒಂದು ರೀತಿ ಮಜಾ ನೀಡುತ್ತದೆ.

2 /5

ಈರುಳ್ಳಿ ಪಕೋಡವನ್ನು ಈರುಳ್ಳಿ ಪನಿಯಾಣ ಎಂತಲೂ ಕರೆಯಲಾಗುತ್ತದೆ. ಇದು ಮಳೆಗಾಲದ ಅತ್ಯಂತ ಜನಪ್ರಿಯ ಕುರುಕಲು ತಿಂಡಿ. ಈ ಪಕೋಡ ಮೃದುವಾದ, ಕುರುಕುಲಾದ ಮತ್ತು ಗರಿಗರಿಯಾದ ತಿಂಡಿಯಾಗಿದ್ದು, ಮಳೆಗಾಲದ ನೆಚ್ಚಿನ ತಿಂಡಿಯಾಗಿದೆ. ಇದನ್ನು ಬಾಳೆಕಾಯಿ, ಪಾಲಕ್, ಆಲೂಗಡ್ಡೆ, ಈರುಳ್ಳಿ ಮತ್ತು ಕುಂಬಳಕಾಯಿ ಮುಂತಾದವುಗಳಿಂದ ತಯಾರಿಸಲಾಗುತ್ತದೆ.

3 /5

ಮಳೆಗಾಲಕ್ಕೆ ಆಲೂ ಟಿಕ್ಕಿ ಅತ್ಯುತ್ತಮ ತಿಂಡಿಯಾಗಿದೆ. ಗರಿಗರಿಯಾದ, ಎಣ್ಣೆಯುಕ್ತ ಮತ್ತು ಸುವಾಸನೆಯುಳ್ಳ ಆಲೂ ಟಿಕ್ಕಿ ಸೇವಿಸಲು ಉತ್ತಮ ಸ್ನಾಕ್ಸ್ ಆಗಿದೆ. ಈ ಖಾದ್ಯವನ್ನು ನೀವು ವಿವಿಧ ರೀತಿಯಲ್ಲಿ ತಯಾರಿಸಬಹುದು. ಕುರ್ಕುರೆ ಆಲೂ ಟಿಕ್ಕಿ, ದಾಲ್ ಆಲೂ ಟಿಕ್ಕಿ, ಚೋಲೆ ಆಲೂ ಟಿಕ್ಕಿ ಇನ್ನೂ ಅನೇಕ ರೀತಿ ತಯಾರಿಸಿ ಸವಿಯಬಹುದು.

4 /5

ಮಸಾಲೆಯುಕ್ತ ಹಿಸುಕಿದ ಆಲೂಗಡ್ಡೆಯನ್ನು ಬ್ರೆಡ್ ತುಂಡುಗಳಲ್ಲಿ ಸುತ್ತಿ ಗರಿಗರಿಯಾಗುವವರೆಗೆ ಕರಿದು ಇದನ್ನು ತಯಾರಿಸಲಾಗುತ್ತದೆ. ಇದನ್ನು ಹಸಿರು ಮತ್ತು ಕೆಂಪು ಚಟ್ನಿಯೊಂದಿಗೆ ಸೇವಿಸಿದ್ರೆ ಸಿಗುವ ಆನಂದವೇ ಬೇರೆ. ಇದು ಸಹ ಮಳೆಗಾಲದ ಉತ್ತಮ ತಿಂಡಿಯಾಗಿದೆ.

5 /5

ಬೋಂಡಾ ಬಹುತೇಕರಿಗೆ ಇಷ್ಟವಾಗುವ ಸ್ನಾಕ್ಸ್ ಆಗಿದೆ. ಬೇಯಿಸಿದ ಆಲೂಗಡ್ಡೆಯನ್ನು ಉಪ್ಪು, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಗರಿಗರಿಯಾಗುವವರೆಗೂ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದರ ಮೇಲ್ಬಾಗ ಚೆನ್ನಾಗಿ ರೋಸ್ಟ್ ಆಗಿದ್ದರೆ, ಒಳಗಿನ ಮಸಾಲೆಯುಕ್ತ ಆಲೂಗಡ್ಡೆ ನಿಮಗೆ ವಿಭಿನ್ನ ರುಚಿ ನೀಡುತ್ತದೆ.