ನವದೆಹಲಿ: ಈಗಿನ ಜೀವನ ಶೈಲಿಯಲ್ಲಿ ನಾವು ಆರೋಗ್ಯಕರ ಆಹಾರ ಸೇವಿಸುವ ಬದಲು ಫಾಸ್ಟ್ ಫುಡ್ ಮೊರೆ ಹೋಗುವುದೇ ಹೆಚ್ಚು. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ದೊಡ್ಡವರು, ಸಣ್ಣವರು ಎಲ್ಲರಿಗೂ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆ ಗ್ಯಾಸ್ಟ್ರಿಕ್ ಸಮಸ್ಯೆ. ಇದಕ್ಕಾಗಿ ಹಲವರು ಮಾತ್ರೆಗಳ ಮೊರೆ ಹೋದರೆ, ಕೆಲವರು ಮನೆ ಮದ್ದುಗಳನ್ನು ಟ್ರೈ ಮಾಡುತ್ತಾರೆ. ನೀವೂ ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ನಾವಿಂದು ನಿಮಗೆ ಸುಲಭ ಪರಿಹಾರವನ್ನು ನೀಡಲಿದ್ದೇವೆ. ಇದು ಕೇವಲ ನಿಮ್ಮ ಹೊಟ್ಟೆ ಸಮಸ್ಯೆಯನ್ನು ಮಾತ್ರವಲ್ಲ ಮನೆ ಕ್ಲೀನ್ ಮಾಡುವುದರಲ್ಲೂ ನಿಮಗೆ ಸಹಾಯ ಮಾಡಲಿದೆ.


COMMERCIAL BREAK
SCROLL TO CONTINUE READING

ಚಿಟಿಕಿಯಲ್ಲಿ ನಿಮ್ಮ ಸಮಸ್ಯೆ ಪರಿಹರಿಸಲಿದೆ ENO:
ನಿಮಗೆ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಅಥವಾ ಆಮ್ಲೀಯತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಇನೋ (ENO) ಬಳಸಿ ಕ್ಷಣಮಾತ್ರದಲ್ಲಿ ಅದನ್ನು ತೊಡೆದುಹಾಕಬಹುದಾಗಿದೆ.  ಇನೋವನ್ನು ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾತ್ರವಲ್ಲ, ಬೇಕಿಂಗ್ ಮತ್ತು ಸ್ಟೀಮ್ ಮಾಡಲು ಸಹ ಬಳಸಲಾಗುತ್ತದೆ. ಹೌದು, ಇನೋ ನಿಮ್ಮ ಉದರ ಸಂಬಂಧಿತ ಸಮಸ್ಯೆಗಳಿಗೆ ಮಾತ್ರವಲ್ಲದೆ ಸ್ವಚ್ಛತೆಯಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ - Immunity Booster: ಇಲಾಚಿ ಹಣ್ಣಿನಲ್ಲಿದೆ ರೋಗನಿರೋಧಕ ಶಕ್ತಿ: ಇಲ್ಲಿದೆ ಅದರ 5 ಪ್ರಯೋಜನಗಳು!


ಆಭರಣಗಳು ಹೊಳೆಯುತ್ತವೆ :
ದೈನಂದಿನ ಬಳಕೆಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹೆಚ್ಚಾಗಿ ಕಲೆಗಟ್ಟುತ್ತವೆ. ಈ ಸಂದರ್ಭದಲ್ಲಿ, ಇನೋ  (Jewellery Cleaning At Home) ಸಹಾಯದಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು. ಒಂದು ಬಟ್ಟಲಿನಲ್ಲಿ ಬಿಸಿನೀರನ್ನು ತೆಗೆದುಕೊಂಡು, ಅದರಲ್ಲಿ ಒಂದು ಪ್ಯಾಕ್ ಇನೋ ಹಾಕಿ. ನಂತರ ನಿಮ್ಮ ಆಭರಣಗಳನ್ನು ಈ ನೀರಿನಲ್ಲಿ ಹಾಕಿ ಮತ್ತು ಅದನ್ನು 15 ನಿಮಿಷಗಳ ಕಾಲ ನೀರಿನಲ್ಲಿ ಹಾಗೆ ಬಿಡಿ. 15 ನಿಮಿಷಗಳ ನಂತರ, ನೀವು ಇನೋ ನೀರಿನಿಂದ ಆಭರಣಗಳನ್ನು ಹೊರತೆಗೆದಾಗ ಅದು ಹೊಳೆಯುವಂತೆ ಕಾಣುತ್ತದೆ.


ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು:
ಪಾತ್ರೆಗಳನ್ನು ಸ್ವಚ್ಛಗೊಳಿಸಲು (Cleaning) ಕೂಡ ಇನೋ ಬಳಸಬಹುದು. ಹಲವು ಬಾರಿ ಒಲೆಯ ಮೇಲೆ ಏನಾದರು ಇಟ್ಟು ಬೇರೆ ಕೆಲಸದಲ್ಲಿ ತೊಡಗಿದಾಗ ಪಾತ್ರೆ ಸುಟ್ಟು ಕರಕಲಾಗುತ್ತದೆ. ಈ ರೀತಿಯ ಪಾತ್ರೆ, ಪ್ಯಾನ್ ಮತ್ತು ಗ್ಯಾಸ್ ಬರ್ನರ್ಗಳನ್ನು ಸ್ವಚ್ಛಗೊಳಿಸಲು ಇನೋ ಉತ್ತಮ ಆಯ್ಕೆಯಾಗಿದೆ. ಸುಟ್ಟು ಕರಕಲಾದ ಪಾತ್ರೆಗಳನ್ನು ಇನೋ ಬಳಸಿ ಸ್ವಚ್ಛಗೊಳಿಸಲು, ಒಂದು ಟಬ್‌ನಲ್ಲಿ ಬಿಸಿನೀರನ್ನು ತೆಗೆದುಕೊಂಡು ಅದರಲ್ಲಿ 3-4 ಪ್ಯಾಕೆಟ್ ಇನೋ ಹಾಕಿ. ಬಳಿಕ ಸುಟ್ಟ ಪಾತ್ರೆಗಳನ್ನು ಈ ಟಬ್‌ನಲ್ಲಿ ಹಾಕಿ ರಾತ್ರಿಯಿಡಿ ಬಿಡಿ. ಬೆಳಿಗ್ಗೆ ಎದ್ದು ನಿಂಬೆ ಮತ್ತು ಉಪ್ಪಿನ ಸಹಾಯದಿಂದ ಈ ಪಾತ್ರೆಗಳನ್ನು ಸ್ಕ್ರಬ್ ಮಾಡಿ. ನಿಮ್ಮ ಪಾತ್ರೆಗಳು ಹೊಸ ಪಾತ್ರೆಗಳಂತೆ ಪಳ ಪಳ ಹೊಳೆಯುತ್ತವೆ.


ಇದನ್ನೂ ಓದಿ - Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ


ಕೈಯಿಂದ ಈರುಳ್ಳಿ-ಬೆಳ್ಳುಳ್ಳಿ ವಾಸನೆಯನ್ನು ತೆಗೆದುಹಾಕಬಹುದು:
ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಕೈಯಲ್ಲಿ ಮಸಾಲೆಗಳು, ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆ ಮೂಡುವುದು ತುಂಬಾ ಸಾಮಾನ್ಯವಾಗಿದೆ. ಅನೇಕ ಬಾರಿ ಈ ವಾಸನೆಯು ಕೈಯಲ್ಲಿ ದೀರ್ಘಕಾಲ ಉಳಿಯುತ್ತದೆ. ಇನೋ ಸಹಾಯದಿಂದ, ಈ ವಾಸನೆಯನ್ನು ತೆಗೆದುಹಾಕಬಹುದು. ಇದಕ್ಕಾಗಿ ಇನೋ ಪ್ಯಾಕ್ ಅನ್ನು ಕೈಗಳಿಗೆ ಉಜ್ಜಿ ಕೈಗಳನ್ನು ನೀರಿನಿಂದ ಸ್ವಚ್ಛಗೊಳಿಸಿ. ಕೈಯಿಂದ ಬರುವ ವಾಸನೆ ಮಾಯವಾಗುತ್ತದೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.