ತಿರುಪತಿ : 2020 ಇನ್ನೇನು ಮುಗಿಯುತ್ತಿದೆ. 2021ರ ಆಗಮನವನ್ನು ಸ್ವಾಗತಿಸಲು ಸಿದ್ದತೆ ನಡೆಯುತ್ತಿದೆ. 2020ರ ಭಯಾನಕತೆ ಮರುಕಳಿಸದಿರಲಿ, 2021 ಎಲ್ಲರಿಗೂ ಶ್ರೇಯಸ್ಸು ತರಲಿ ಎಂಬ ಹಾರೈಕೆ ಎಲ್ಲರದ್ದೂ ಆಗಿದೆ. ಈ ನಡುವೆ, ವಿಶೇಷವಾಗಿ ಆಸ್ತಿಕರು ಹೊಸ ವರ್ಷಕ್ಕೆ ತಿರುಪತಿ ಬಾಲಾಜಿ ದರ್ಶನ ಮಾಡಿ, ಆಶೀರ್ವಾದ ಪಡೆಯುವುದು ಹೊಸತೇನಲ್ಲ. ಹೊಸವರ್ಷಕ್ಕೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಬೇಕೆನ್ನುವವರ ಸಂಖ್ಯೆ ಕಡಿಮೆ ಏನಿಲ್ಲ. ಆದರೆ, ಇದು ಕರೋನಾ ಕಾಲ. ತಿರುಪತಿಗೆ ತೆರಳುವ ಮೊದಲು ಕೆಲವೊಂದು ವಿಚಾರ ತಿಳಿದುಕೊಳ್ಳುವುದು ಅಗತ್ಯ.


COMMERCIAL BREAK
SCROLL TO CONTINUE READING

ಕರೋನಾ ಕಾಲದಲ್ಲಿ ತಿರುಪತಿಯಲ್ಲಿ ಬಾಲಾಜಿ ದರ್ಶನಕ್ಕೆ ಅವಕಾಶ ಇದೆಯಾ..?


ಕರೋನಾ (COVID-19) ಮಹಾಮಾರಿ ತಿರುಪತಿಯನ್ನೂ ಬಿಟ್ಟಿರಲಿಲ್ಲ. ಭಕ್ತರ ಹಾಗೂ ಟಿಟಿಡಿ (TTD) ಸಿಬ್ಬಂದಿ ವರ್ಗದ ಹಿತದೃಷ್ಟಿಯಿಂದ ಕರೋನಾ ಹಿನ್ನೆಲೆಯಲ್ಲಿ ತಿರುಪತಿ ಬಾಲಾಜಿ ದರ್ಶನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.  ಇದೀಗ ಡಿಸೆಂಬರ್ ತಿಂಗಳಿನಲ್ಲಿ ತಿರುಪತಿ (Tirupati) ಬಾಲಾಜಿ ದರ್ಶನಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದೆ.  ಅಂದರೆ ವೆಂಕಟೇಶ್ವರ ದರ್ಶನಕ್ಕಾಗಿ ತಿರುಪತಿ ಪ್ರವಾಸ ಮಾಡಬಹುದು. 
ದಿನವೊಂದಕ್ಕೆ ಎಷ್ಟು ಭಕ್ತರ ದರ್ಶನಕ್ಕೆ ಅವಕಾಶವಿದೆ.?
ಬಾಲಾಜಿ ದರ್ಶನಕ್ಕೆ (Balaji Darshan) ಅಪಾರ ಪ್ರಮಾಣದಲ್ಲಿ ಭಕ್ತರು ಬರುತ್ತಾರೆ. ಸಾಮಾನ್ಯ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ  50 ಸಾವಿರದಿಂದ ಒಂದು ಲಕ್ಷ ಜನ ಬಾಲಾಜಿ ದರ್ಶನ ಪಡೆಯುತ್ತಾರೆ. ಆದರೆ, ಗೊತ್ತಿರಲಿ. ಈಗ ಹಾಗಿಲ್ಲ. ದಿನವೊಂದಕ್ಕೆ ಹೆಚ್ಚುಕಡಿಮೆ 30 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ. ಹೊಸವರ್ಷದ ದಿನ ದರ್ಶನಕ್ಕೆ ಅತಿಹೆಚ್ಚು ಬೇಡಿಕೆ ಇರುತ್ತದೆ. ದರ್ಶನ ಟಿಕೆಟ್ (Darshan Ticket) ಮೊದಲೇ ಬುಕ್ ಆಗುವ  ಎಲ್ಲಾ ಸಾಧ್ಯತೆಗಳಿವೆ.  ಹಾಗಾಗಿ, ದರ್ಶನ ಟಿಕೆಟ್ ಮೊದಲೇ ಬುಕ್ ಮಾಡಿಟ್ಟುಕೊಳ್ಳಿ. 


ALSO READ :  ಇನ್ನು ಮುಂದೆ ಬೆಂಗಳೂರು, ಚೆನ್ನೈ, ಹೈದರಾಬಾದಿನಲ್ಲೇ ಸಿಗುತ್ತೆ ತಿರುಪತಿ ಲಡ್ಡು, ಅದೂ ಸಬ್ಸಿಡಿ ದರದಲ್ಲಿ...


ದರ್ಶನ ಟಿಕೆಟ್ ಹೇಗೆ ಬುಕ್ ಮಾಡಬಹುದು. ?
ಬಾಲಾಜಿ ದರ್ಶನಕ್ಕೆ ಟಿಟಿಡಿ ಶೀಘ್ರದರ್ಶನ ಟಿಕೆಟ್ (Sheegra Darshan Ticket) ವ್ಯವಸ್ಥೆ ಮಾಡಿದೆ. 300 ರೂಪಾಯಿ ಪಾವತಿಸಿ ಶೀಘ್ರ ದರ್ಶನ ಮಾಡಬಹುದು.  ಆನ್ ಲೈನ್ ಮೂಲಕ ಶೀಘ್ರದರ್ಶನದ ಟಿಕೆಟ್ ಖರೀದಿಸಬಹುದು. ಇದೇ ವೇಳೆ ಸರ್ವ ದರ್ಶನಕ್ಕೂ (Sarva Darshan) ಅವಕಾಶವಿದೆ.  ಇದು ಉಚಿತ ದರ್ಶನ ವ್ಯವಸ್ಥೆಯಾಗಿದೆ. ಅತ್ಯಂತ ಕಡಿಮೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದರಿಂದ ಸಾಧ್ಯವಾದಷ್ಟು ಬೇಗ ಟಿಕೆಟ್ ಬುಕ್ ಮಾಡುವುದು ಒಳ್ಳೆಯದು. ಟಿಕೆಟ್ ಬುಕ್ ಮಾಡಲು ಮತ್ತು ಇತರ ಮಾಹಿತಿಗಾಗಿ www.ttdsevaonline.com.  ಲಾಗ್ ಇನ್ ಆಗಬಹುದು..


ಕರೋನಾ ಕಾಲದಲ್ಲಿ ಎಲ್ಲಾ ವಯೋಮತಿಯವರು ದರ್ಶನ ಮಾಡಬಹುದೇ..?
ಸಾಮಾನ್ಯ ದಿನಗಳಲ್ಲಿ ತಿರುಮಲ ತಿರುಪತಿ (Tirupati) ಬಾಲಾಜಿಯ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಕರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಭಕ್ತರ ಹಿತದೃಷ್ಟಿಯಿಂದಾಗಿ ಕೆಲವೊಂದು ನಿರ್ಬಂಧ ಹೇರಲಾಗಿತ್ತು. ಅಂದರೆ, ಹತ್ತು ವರ್ಷದ ಒಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರು ಮತ್ತು ಗರ್ಭಿಣಿಯರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ,ಅವೆಲ್ಲಾ ನಿರ್ಬಂಧಗಳನ್ನು ರದ್ದು ಪಡಿಸಲಾಗಿದೆ. ಸರ್ವರಿಗೂ ಬಾಲಾಜಿ ದರ್ಶನಕ್ಕೆ ಅವಕಾಶ ಇದೆ.


ALSO READ : ವೆಂಕಟೇಶ್ವರ ದೇವಾಲಯದ ಆಸ್ತಿ ಹರಾಜಿಗೆ ತಡೆಒಡ್ಡಿದ ಆಂಧ್ರ ಸರ್ಕಾರ


ಕರೋನಾ ಮಾರ್ಗಸೂಚಿ ಏನೇನಿದೆ.?
ತಿರುಪತಿ ದರ್ಶನಕ್ಕೆ ಹೊರಡುವವರು ಕಟ್ಟು ನಿಟ್ಟಿನ ಕರೋನಾ ಮಾರ್ಗಸೂಚಿ ನಿಯಮಗಳನ್ನು ಪಾಲಿಸಲೇ ಬೇಕು. ಫೇಸ್ ಮಾಸ್ಕ್ (Mask) ಕಡ್ಡಾಯ. ಸೋಶಿಯಲ್ ಡಿಸ್ಟೆನ್ಸಿಂಗ್ ಪಾಲಿಸಲೇ ಬೇಕು. ಪದೇ ಪದೇ ಸಾನಿಟೈಸೇಶನ್ ಮಾಡಿಕೊಳ್ಳುತ್ತಿರಬೇಕು.  ದೇಹದ ತಾಪಮಾನ ಸೂಕ್ತವಾಗಿದ್ದರೆ ಮಾತ್ರ ಪ್ರವೇಶ. ಅದಕ್ಕಿಂತ ಮೊದಲು ತಮಗೆ ಯಾವುದೇ ಕರೋನಾ ಲಕ್ಷಣಗಳಿಲ್ಲ, ಕರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ ಎಂಬುದನ್ನು ಭಕ್ತರು ಪ್ರಮಾಣಿಸಬೇಕಾಗುತ್ತದೆ.
ಹಾಗಾದರೆ, ತಡವೇಕೆ..? ಬಾಲಾಜಿ ದರ್ಶನಕ್ಕೆ ತಯಾರಾಗಿ. ನಿಮ್ಮ ಯಾತ್ರೆ ಸುಖಕರ, ಕ್ಷೇಮಕರವಾಗಿರಲಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.