ಭೂ ವೈಕುಂಠ ವಾಸ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಅಪರೂಪದ ನೀಲಿ ನವ ರತ್ನಗಳೊಂದಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಿರೋ ಗಂಡಭೇರುಂಡ ವಜ್ರಮಾಲೆ ಹಾಗೂ ರುಬೀಗಳ ವೈಜಯಂತಿ ಮಾಲೆಯನ್ನು ಕೆ.ಎಂ. ಶ್ರೀನಿವಾಸಮೂರ್ತಿ ಅವರ ಕುಟುಂಬ ತಿಮ್ಮಪ್ಪನ ಸನ್ನಿಧಿಗೆ ಅರ್ಪಿಸಿದೆ...
ತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿಯಲ್ಲಿ ಇಂದು ಸಂಜೆಯಿಂದ
ಮೂರು ದಿನಗಳವರೆಗೆ ಪವಿತ್ರೋತ್ಸವ ನಡೆಯಲಿದೆ.
ತಿರುಮಲ ಪ್ರಾವಿತ್ರ್ಯತೆ ಕಾಪಾಡಲು ಮುಂದಾದ ಟಿಟಿಡಿ.ತಿಮ್ಮಪ್ಪನ ಸನ್ನಿಧಿಯಲ್ಲಿ ಶಾಂತಿ ಹೋಮ,ಶುದ್ಧೀಕರಣ.ಬೆಳಗ್ಗೆ 6 ಗಂಟೆಯಿಂದ ಶುರುವಾಗಿರುವ ಹೋಮ-ಹವನ. ರಾಮಕೃಷ್ಣ ದೀಕ್ಷಿತ್ ನೇತೃತ್ವದಲ್ಲಿ ನಡೆಯುತ್ತಿರುವ ಹೋಮ.ಭಕ್ತರಲ್ಲಿ ನಂಬಿಕೆ ಮೂಡಿಸಲು ತಿರುಪತಿಯಲ್ಲಿ ಹೋಮ-ಹವನ. ಬಂಗಾರ ಬಾವಿ ಯಾಗ ಶಾಲೆಯಲ್ಲಿ ಹೋಮ, ಶುದ್ಧೀಕರಣ.
TTD News : ತಿರುಮಲ ಶ್ರೀವಾರಿಯ ಭಕ್ತರಿಗೆ ಒಂದು ಕೆಟ್ಟ ಸುದ್ದಿ ಇದೆ. ಇನ್ನು ಮುಂದೆ ಲಡ್ಡು ನೀಡುವ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಬಹಿರಂಗಪಡಿಸಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ಲಡ್ಡುಗಳನ್ನು ನೀಡಲಾಗುವುದು. ಅದು ಪ್ರತಿ ಭಕ್ತನಿಗೆ ಕೇವಲ ಒಂದು ಲಡ್ಡು ಮಾತ್ರ.. ಹೆಚ್ಚಿನ ವಿವರ ಈ ಕೆಳಗಿದೆ..
Astrology : ಕೆಲವು ರಾಶಿಚಕ್ರದವರು ತಿರುಪತಿಗೆ ದರ್ಶನಕ್ಕೆ ಹೋಗಬಾರದು ಅಂತ ಹಿಂದೂ ಧರ್ಮಗ್ರಂಥಗಳು ಹೇಳುತ್ತವೆ. ಜನರು ತಮ್ಮ ಸಂಕಷ್ಟಗಳಿಗೆ ಪರಿಹಾರ, ಮನಃಶಾಂತಿಯನ್ನು ಹುಡುಕಿಕೊಂಡು, ಇಲ್ಲವೇ ಆರ್ಥಿಕ ಪ್ರಗತಿಯನ್ನು ಪಡೆಯಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಅಲ್ಲಿಗೆ ಹೋಗಿ ದರ್ಶನ ಪಡೆದ ನಂತರ ಅವರ ಜೀವನದಲ್ಲಿ ಅನೇಕ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ ಎಂದು ನಂಬಲಾಗಿದೆ.
Good News For Senior Citizens: ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು (Chandrababu Naidu) ಆಡಳಿತವು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಗಳು) ಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ.
Tirupati special entry darshan tickets : ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಯಾವುದೇ ತೊಂದರೆಯಿಲ್ಲದೆ ನಿಗದಿತ ಸಮಯದಲ್ಲಿ ದರ್ಶನವನ್ನು ಮಾಡಲು ದೇವಸ್ಥಾನವು ಪ್ರತಿ ತಿಂಗಳು ಆನ್ಲೈನ್ ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ, ಏಪ್ರಿಲ್ ತಿಂಗಳ ವಿಶೇಷ ದರ್ಶನ ಟಿಕೆಟ್ ಬುಕ್ಕಿಂಗ್ ಇಂದು ಬೆಳಿಗ್ಗೆ 10 ಗಂಟೆಯಿಂದಲೇ ಪ್ರಾರಂಭವಾಗಿವೆ.
Tirumala Temple close : ಈ ತಿಂಗಳ 28ರ ರಾತ್ರಿ ಭಾಗಶಃ ಚಂದ್ರಗ್ರಹಣದಿಂದಾಗಿ ತಿರುಮಲ ಶ್ರೀವಾರಿ ದೇವಸ್ಥಾನವನ್ನು ಮುಚ್ಚಲಾಗುವುದು. 29ರಂದು ಚಂದ್ರಗ್ರಹಣ ಮುಗಿದ ಬಳಿಕ ಮತ್ತೆ ತೆರೆಯಲಿದೆ. ಭಕ್ತರು ಇದನ್ನು ಪಾಲಿಸುವಂತೆ ಟಿಟಿಡಿ ಅಧಿಕಾರಿಗಳು ಕೋರಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಯಾವುದೇ ಟಿಕೆಟ್ ತೆಗೆದುಕೊಳ್ಳದೆ ದೇವರ ದರ್ಶನಕ್ಕೆ ಹೋದರೆ ಗಂಟೆ ಗಂಟೆ ಕಾಲ ಕಾಯಬೇಕಾಗುತ್ತದೆ. ಟೈಮ್ ಸ್ಲಾಟ್ ಟಿಕೆಟ್, ದಿವ್ಯಾ ದರ್ಶನ ಟಿಕೆಟ್ ತೆಗೆದುಕೊಂಡು ಬಂದರೆ ದೇವರ ದರ್ಶನಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಹಲವು ಭಕ್ತರು ದೇವರ ದರ್ಶನ ಪಡೆಯಲು 300 ರೂಪಾಯಿಯ ವಿಶೇಷ ದರ್ಶನ ಟಿಕೆಟ್ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ತಿಂಗಳಿಗೆ ಸಂಬಂಧಿಸಿದ 300 ರೂಪಾಯಿ ಟಿಕೆಟ್ಗಳನ್ನು ಒಂದು ವಾರದ ಮುನ್ನ ಆನ್ಲೈನ್ನಲ್ಲಿ ಬಿಡುಗಡೆ ಮಾಡುತ್ತಾರೆ. ಇದೀಗ ಮೇ ಮತ್ತು ಜೂನ್ ತಿಂಗಳ ವಿಶೇಷ ಪ್ರವೇಶ ಟಿಕೆಟ್ಗಳನ್ನು ಬಿಡುಗಡೆ ಮಾಡಿದೆ.
TTD News : ಅಲಿಪಿರಿಯಿಂದ ಕಾಲ್ನಡಿಗೆಯ ಮೂಲಕ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಗಾಲಿ ಗೋಪುರದಲ್ಲಿ ದಿವ್ಯ ದರ್ಶನ ಟೋಕನ್ಗಳನ್ನು ನೀಡಲಾಗುತ್ತಿತ್ತು. ಇದೀಗ ಶುಕ್ರವಾರದಿಂದ ದಿವ್ಯ ದರ್ಶನ ಟೋಕನ್ಗಳ ವಿತರಣಾ ಕೇಂದ್ರವನ್ನು ಬದಲಾಯಿಸಲಾಗಿದೆ. ಸದ್ಯ ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್ನಲ್ಲಿಯೇ ದರ್ಶನದ ಟೋಕನ್ ವಿತರಿಸಲಾಗುತ್ತಿದೆ.
Tirupati online tickets booking : ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಬೇಕೆಂದು ಕಾಯುತ್ತಿದ್ದ ಭಕ್ತಾಧಿಗಳಿಗೆ ಖುಷಿ ಸುದ್ದಿಯೊಂದಿದೆ. ಟಿಟಿಡಿ ಆಡಳಿತ ಮಂಡಳಿ ಏಪ್ರಿಲ್ ತಿಂಗಳ 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್ ಬಿಡುಗಡೆಗೆ ದಿನಾಂಕವನ್ನು ಪ್ರಕಟಿಸಿದೆ. ಭಕ್ತರು ಮುಂಗಡವಾಗಿ ಈ ಕೆಳಗೆ ನೀಡಿರುವ ದಿನಾಂಕದಂದು ಟಿಕೆಟ್ ಬುಕ್ ಮಾಡಿ ದರ್ಶನ್ ಪಡೆಯಬಹುದಾಗಿದೆ.
ತಿರುಪತಿಗೆ ಹೋಗಬೇಕು ಎಂದುಕೊಂಡಿರುವ ಭಕ್ತರು ದಯವಿಟ್ಟು ಇಲ್ಲಿ ಗಮನಿಸಿ. ಚಂದ್ರಗ್ರಹಣ ನಿಮಿತ್ತವಾಗಿ ಇದೇ 8ರಂದು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಾಗಿಲನ್ನು 12 ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಎಲ್ಲಾ ರೀತಿಯ ದರ್ಶನ ಸೌಲಭ್ಯಗಳನ್ನು ಮತ್ತು ಆರ್ಜಿತ ಸೇವೆಗಳನ್ನು ರದ್ದುಗೊಳಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿ ಮದುವೆಯ ಸಂಭ್ರಮದಲ್ಲಿಯೇ ಇದ್ದಾರೆ. ಈ ಸಂದರ್ಭದಲ್ಲಿ ಕಳೆದ ದಿನ ನವ ದಂಪತಿಗಳು ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
TTD Sarvadarshan Tickets- ಏಕಾದಶಿ ನಿಮಿತ್ತ ವೈಕುಂಠ ದ್ವಾರ ದರ್ಶನಕ್ಕಾಗಿ ಜನವರಿ 13 ರಿಂದ ಜನವರಿ 22ರವರೆಗೆ ದಿನಕ್ಕೆ 5 ಸಾವಿರ ಟೋಕನ್ ನೀಡಲಾಗುವುದು. ಉಳಿದ ದಿನಗಳಲ್ಲಿ ದಿನಕ್ಕೆ 10 ಸಾವಿರ ಟೋಕನ್ ನೀಡಲಾಗುವುದು. ಭಕ್ತರು ಈ ಬಗ್ಗೆ ಗಮನಹರಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Tirumala Tirupati Temple Sarva Darshan Tickets: ಸಾಮಾನ್ಯ ಯಾತ್ರಿಕರಿಗೆ ಪ್ರಮುಖ ಪರಿಹಾರವಾಗಿ, ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಬುಧವಾರ ಸೆಪ್ಟೆಂಬರ್ 26 ರಿಂದ ವಿಶೇಷ ಪ್ರವೇಶ ದರ್ಶನ (ಎಸ್ಇಡಿ) ಟೋಕನ್ಗಳಿಗೆ ಸಮನಾಗಿ ದಿನಕ್ಕೆ 8,000 ಸ್ಲಾಟ್ ಸರ್ವ ದರ್ಶನ (ಎಸ್ಎಸ್ಡಿ) ಟೋಕನ್ಗಳನ್ನು ನೀಡಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.