Monthly Love Horoscope: ಫೆಬ್ರವರಿ ತಿಂಗಳು ರಾಶಿಗಳ ಜನರ ಪಾಲಿಗೆ ಅದ್ಭುತವಾಗಿದೆ, ಬಿಂದಾಸ್ ಪ್ರಪೋಸ್ ಮಾಡಿ!
Love Horoscope: ಪ್ರೀತಿ ಪ್ರೇಮದ ವಿಷಯದಲ್ಲಿ ಫೆಬ್ರವರಿ ತಿಂಗಳು ತುಂಬಾ ವಿಶೇಷವಾಗಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳು ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಗ್ರಹಗಳ ರಾಶಿ ಪರಿವರ್ತನೆ ಕೆಲವು ರಾಶಿಗಳ ಮೇಲೆ ಮೇಲೆ ಶುಭ ಪರಿಣಾಮಗಳನ್ನು ಬೀರಿದರೆ ಮತ್ತು ಕೆಲವರಿಗೆ ಅಶುಭಕರವಾಗಿರುತ್ತದೆ.
Love Horoscope February 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ ತಿಂಗಳಿನಲ್ಲಿ ಕೆಲವು ರಾಶಿ ಜನರಿಗೆ ಲವ್ ಪ್ರಪೋಸಲ್ ಬಂದರೆ ಬೇರೆ ರಾಶಿಯವರಿಗೆ ಹೊಸ ಸಂಗಾತಿಯೊಂದಿಗೆ ಪ್ರೇಮ ಸಂಬಂಧ ಕುದುರಲಿದೆ. ಕೆಲವರಿಗೆ ಪ್ರೇಮ ಸಂಬಂಧ ಕೂಡಿ ಬರಬಹುದು ಅಥವಾ ಕೆಲವರ ಸಂಬಂಧವೂ ಮುರಿದು ಬೀಳಬಹುದು. ಫೆಬ್ರವರಿ ತಿಂಗಳು ಯಾರ ಪ್ರೇಮ ಜೀವನಕ್ಕೆ ಉತ್ತಮ ತಿಂಗಳು ಎಂಬುದನ್ನು ತಿಳಿದುಕೊಳ್ಳೋಣ. ಜೊತೆಗೆ ಪ್ರೇಮಿ ಮತ್ತು ಗೆಳತಿಯ ನಡುವೆ ಪರಸ್ಪರ ಸಾಮರಸ್ಯ ಹೇಗೆ ಹೆಚ್ಚಾಗಲಿದೆ ತಿಳಿದುಕೊಳ್ಳೋಣ.
ಮೇಷ ರಾಶಿ : ಫೆಬ್ರವರಿ ತಿಂಗಳು ಈ ರಾಶಿಯವರಿಗೆ ಪ್ರೀತಿಯಿಂದ ತುಂಬಿರುತ್ತದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಈ ರಾಶಿಗಳ ಪ್ರೇಮಿಗಳು ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾರೆ.
ವೃಷಭ ರಾಶಿ : ಈ ರಾಶಿಯವರಿಗೆ ಫೆಬ್ರವರಿ ತಿಂಗಳು ಪ್ರೀತಿಯ ವಸಂತವನ್ನು ತರಲಿದೆ. ಪ್ರೀತಿಯ ಪ್ರಸ್ತಾಪದ ಸಾಧ್ಯತೆ ಇದೆ. ಪ್ರೀತಿಯಲ್ಲಿರುವ ಯುವಕರು ಅಥವಾ ಯುವತಿಯರಿಗೆ ತಮ್ಮ ಪ್ರೀತಿಪಾತ್ರರಿಂದ ಮದುವೆಯ ಪ್ರಸ್ತಾಪವೂ ಸಿಗಬಹುದು.
ಮಿಥುನ ರಾಶಿ : ಈ ರಾಶಿಯ ಜನರು ಯಾರನ್ನಾದರೂ ಪ್ರಸ್ತಾಪಿಸಲು ಬಯಸಿದರೆ, ಈ ತಿಂಗಳು ಅವರಿಗೆ ತುಂಬಾ ಅದ್ಭುತ ತಿಂಗಳು ಸಾಬೀತಾಗಲಿದೆ.
ಕರ್ಕ ರಾಶಿ : ಫೆಬ್ರವರಿ ತಿಂಗಳಲ್ಲಿ ಈ ರಾಶಿಯವರಿಗೆ ತಮ್ಮ ಸಂಗಾತಿಯಿಂದ ಅಪಾರ ಪ್ರೀತಿ ಸಿಗಲಿದೆ ಜೊತೆಗೆ ಪ್ರೇಮಿಯ ಬೆಂಬಲ ಕೂಡ ಸಿಗಲಿದೆ.
ಸಿಂಹ ರಾಶಿ : ಈ ರಾಶಿಯ ಜನರು ಫೆಬ್ರವರಿ ತಿಂಗಳಲ್ಲಿ ಪಿಕ್ನಿಕ್ ಹೋಗುವ ಸಾಧ್ಯತೆ ಇದೆ. ಪ್ರೇಮಿಗಳು ಪಿಕ್ನಿಕ್ಗಾಗಿ ದೀರ್ಘ ಪ್ರವಾಸಕ್ಕೆ ಹೋಗಬಹುದು. ಹೊಸ ಪ್ರೇಮ ಸಂಬಂಧಗಳೂ ಏರ್ಪಡುವ ಸಾಧ್ಯತೆ ಇದೆ.
ಕನ್ಯಾ ರಾಶಿ : ಈ ರಾಶಿಯ ಜನರು ಫೆಬ್ರವರಿ ತಿಂಗಳಲ್ಲಿ ಪ್ರೀತಿಯ ಸಂಗಾತಿಯ ಜೊತೆಗೆ ಸುತ್ತಾಡಲು ಯೋಜಿಸಬಹುದು. ಫೆಬ್ರವರಿ ಮೊದಲ ವಾರ ಪ್ರಪೋಸ್ ಮಾಡಲು ಉತ್ತಮವಾಗಿದೆ.
ತುಲಾ ರಾಶಿ : ಫೆಬ್ರವರಿ ತಿಂಗಳು ಸಂಗಾತಿಗೆ ಉತ್ತಮವಾಗಿರುತ್ತದೆ. ನೀವು ಯಾರನ್ನಾದರೂ ಪ್ರಪೋಸ್ ಬಯಸಿದರೆ, ನೀವು ಈ ತಿಂಗಳು ಪ್ರಸ್ತಾಪಿಸಬಹುದು. ಪ್ರೇಮಿಗಳಿಗೆ ತಮ್ಮ ಪ್ರಿಯಕರನ ಬೆಂಬಲ ಸಿಗಲಿದೆ.
ವೃಶ್ಚಿಕ ರಾಶಿ : ಈ ರಾಶಿಯವರಿಗೆ ಫೆಬ್ರವರಿ ತಿಂಗಳು ಪ್ರೀತಿಯ ವಿಷಯದಲ್ಲಿ ಅತ್ಯುತ್ತಮವಾಗಿರುತ್ತದೆ. ಪ್ರಪೋಸ್ ಮಾಡುವುದು ಸಹಾಯ ಮಾಡುತ್ತದೆ. ಸಂಗಾತಿಯೊಂದಿಗೆ ಪ್ರೀತಿಯ ಸಂಬಂಧ ಉಳಿಯುತ್ತದೆ.
ಧನು ರಾಶಿ : ಫೆಬ್ರವರಿ ಮೊದಲ ವಾರ ಈ ರಾಶಿಯ ಜನರ ಪ್ರೇಮ ಸಂಬಂಧಗಳಲ್ಲಿ ಏರುಪೇರುಗಳನ್ನು ತರಬಹುದು. ತಿಂಗಳ ಎರಡನೇ ವಾರದಲ್ಲಿ ಪ್ರೇಮ ಸಂಬಂಧಗಳು ಸುಧಾರಿಸುತ್ತವೆ.
ಮಕರ ರಾಶಿ : ಈ ರಾಶಿಯ ಜನರು ಫೆಬ್ರವರಿ ತಿಂಗಳಲ್ಲಿ ಪ್ರಣಯವನ್ನು ಆನಂದಿಸಬಹುದು. ಫೆಬ್ರವರಿ ತಿಂಗಳಲ್ಲಿ, ನೀವು ಗೆಳೆಯ ಮತ್ತು ಗೆಳತಿಯ ನಡುವಿನ ಸಂಬಂಧದಲ್ಲಿ ಮಾಧುರ್ಯವನ್ನು ಅನುಭವಿಸುವಿರಿ.
ಕುಂಭ ರಾಶಿ : ಈ ರಾಶಿಯ ಜನರು ಫೆಬ್ರವರಿ ತಿಂಗಳಲ್ಲಿ ತಮ್ಮ ಪ್ರೀತಿಪಾತ್ರರ ಜೊತೆ ಪ್ರವಾಸ ಕೈಗೊಂಡು ಆನಂದಿಸಬಹುದು. ಇದಲ್ಲದೆ, ಫೆಬ್ರವರಿ ಎರಡನೇ ವಾರದಲ್ಲಿ, ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗಲಿದೆ.
ಇದನ್ನೂ ಓದಿ-Mars Transit 2023: ಈ ವರ್ಷದಲ್ಲಿ 7 ಬಾರಿ ಮಂಗಳನ ಗೋಚರ, 3 ರಾಶಿಗಳ ಜನರಿಗೆ ಭಾರಿ ಅದೃಷ್ಟ
ಮೀನ ರಾಶಿ : ಈ ರಾಶಿಯವರಿಗೆ ಫೆಬ್ರವರಿ ತಿಂಗಳು ಪ್ರೀತಿಯ ವಿಷಯದಲ್ಲಿ ಭಾರಿ ಬಂಬಾಟಾಗಿದೆ. ಪ್ರೇಮಿ-ಗೆಳತಿ ಪರಸ್ಪರ ಪ್ರಪೋಸ್ ಮಾಡಬಹುದು.
ಇದನ್ನೂ ಓದಿ-ಶೀಘ್ರದಲ್ಲಿಯೇ ಮಕರ ರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಅದೃಷ್ಟಕ್ಕೆ ಸಿಗಲಿದೆ ಭಾರಿ ಮೆರಗು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.