Shani Udaya 2023: ಶನಿ ಉದಯಿಸುತ್ತಿದ್ದಂತೆ ನಿರ್ಮಾಣಗೊಳ್ಳಲಿದೆ 'ಧನ ರಾಜಯೋಗ' ಈ ರಾಶಿಗಳ ಮೇಲೆ ಶುಭ ದೃಷ್ಟಿ

Saturn Rise 2023: ಇಂದು ಜನವರಿ 30, ಶನಿ ಅಸ್ತನಾಗಿದ್ದಾನೆ. ಯಾವುದೇ ಒಂದು ಗ್ರಹ ಅಸ್ತಮಿಸಿದರೆ, ಅದರ ಅಶುಭ ಪ್ರಭಾವಗಳು ಕೆಲ ರಾಶಿಗಳ ಮೇಲೆ ಕಂಡು ಬರುತ್ತದೆ. ಹೀಗಿರುವಾಗ ಈ ಗ್ರಹಗಳು ಉದಯಿಸಿದಾಗ ಶುಭ ಫಲಿತಾಂಶಗಳನ್ನು ನೀಡುತ್ತವೆ. ಇಂದು ಅಸ್ತಮಿಸಿರುವ ಶನಿಯ ಉದಯ ಯಾವಾಗ ಮತ್ತು ಯಾವ ರಾಶಿಗಳಿಗೆ ಅದರಿಂದ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 30, 2023, 07:26 PM IST
  • ಈಗ ಶನಿಯು ಮಾರ್ಚ್ 09 ರಂದು ಮತ್ತೆ ಕುಂಭ ರಾಶಿಯಲ್ಲಿ ಉದಯಿಸುತ್ತಾನೆ
  • ಮತ್ತು ಕೆಲವು ರಾಶಿಗಳ ಸ್ಥಳೀಯರಿಗೆ ಶುಭ ಫಲಿತಾಂಶಗಳನ್ನು ನೀಡಲಿದ್ದಾನೆ.
  • ಈ ಸಮಯದಲ್ಲಿ ಶಶ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ,
Shani Udaya 2023: ಶನಿ ಉದಯಿಸುತ್ತಿದ್ದಂತೆ ನಿರ್ಮಾಣಗೊಳ್ಳಲಿದೆ 'ಧನ ರಾಜಯೋಗ' ಈ ರಾಶಿಗಳ ಮೇಲೆ ಶುಭ ದೃಷ್ಟಿ title=
ಶನಿ ಉದಯ 2023-ಶಶ ಮಹಾಪುರುಷ ರಾಜಯೋಗ ನಿರ್ಮಾಣ

Saturn Rise 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಕಾಲಾಂತರದಲ್ಲಿ ಅಸ್ತಮಿಸುತ್ತದೆ ಮತ್ತು ಪುನಃ ಉದಯಿಸುತ್ತದೆ. ಹೀಗಿರುವಾಗ ಇಂದು ಜನವರಿ 30, ಶನಿಯು ಅಸ್ತಮಿಸಿದ್ದು ಈ ಬಾರಿ ಕೆಲವರಿಗೆ ಕಷ್ಟಗಳು ಎದುರಾಗಲಿವೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯು ಮತ್ತೆ ಯಾವಾಗ ಉದಯಿಸುತ್ತಾನೆ ಎಂದು ಎಲ್ಲರೂ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಯಾವುದೇ ಗ್ರಹದ ಉದಯ ಕಾಲದಲ್ಲಿ, ಒಬ್ಬ ವ್ಯಕ್ತಿಯು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ. ಮಾರ್ಚ್ 09 ರಂದು ಶನಿಯು ಉದಯಿಸಲಿದ್ದಾನೆ ಮತ್ತು ಈ ಕೆಳಗೆ ನೀಡಲಾದ ರಾಶಿಗಳ ಜನರಿಗೆ ಶುಭ ಫಲಿತಾಂಶಗಳನ್ನು ನೀಡಲಿದ್ದಾನೆ.

ಶನಿಯ ಉದಯ ಯಾವ ರಾಶಿಯಲ್ಲಿ ನೆರವೇರಲಿದೆ
ಶನಿದೇವನು ಜನವರಿ 17, 2023 ರಂದು ಕುಂಭ ರಾಶಿಯಲ್ಲಿ ಪ್ರವೇಶಿಸಿದ್ದಾನೆ ಮತ್ತು ಜನವರಿ 30 ರಂದು ಕುಂಭ ರಾಶಿಯಲ್ಲಿಯೇ ಅಸ್ತಮಿಸಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತೊಂದರೆಗಳಿಂದ ತುಂಬಿರುತ್ತದೆ. ಈಗ ಶನಿಯು ಮಾರ್ಚ್ 09 ರಂದು ಮತ್ತೆ ಕುಂಭ ರಾಶಿಯಲ್ಲಿ ಉದಯಿಸುತ್ತಾನೆ ಮತ್ತು ಕೆಲವು ರಾಶಿಗಳ  ಸ್ಥಳೀಯರಿಗೆ ಶುಭ ಫಲಿತಾಂಶಗಳನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಶಶ ಮಹಾಪುರುಷ ಯೋಗವು ರೂಪುಗೊಳ್ಳುತ್ತದೆ, ಯಾವ ರಾಶಿಗಳ ಜನರು ಇದರ  ಲಾಭವನ್ನು ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಕುಂಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಜನವರಿ 17 ರಂದು ಕುಂಭ ರಾಶಿಯಲ್ಲಿ ಪ್ರವೇಶಿಸಿದ್ದಾನೆ ಮತ್ತು ಮುಂದಿನ ಎರಡೂವರೆ ವರ್ಷಗಳ ಕಾಲ ಈ ರಾಶಿಯಲ್ಲಿ ಇರಲಿದ್ದಾನೆ. ಕುಂಭ ರಾಶಿಯಲ್ಲಿ ಶನಿಯ ಉದಯವು ಈ ರಾಶಿಯ ಸ್ಥಳೀಯರಿಗೆ ಪ್ರಯೋಜನಕಾರಿಯಾಗಲಿದೆ. ಈ ರಾಶಿಯಲ್ಲಿ ಶನಿಯ ಉದಯದಿಂದ ಶಶ ಮಹಾಪುರುಷ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ, ರಾಜಕೀಯಕ್ಕೆ ಸಂಬಂಧಿಸಿದ ಜನರ ಗೌರವವು ಹೆಚ್ಚಾಗಲಿದೆ. ಇದೇ ವೇಳೆ ಅವರಿಗೆ ಉನ್ನತ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ, ಉದ್ಯಮಿಗಳು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ರಾಶಿಯ ಲಗ್ನ ಭಾವದಲ್ಲಿ  ಶನಿಯು ಸಂಚಾರ ಮಾಡಲಿರುವುದರಿಂದ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವ ಸಾಧ್ಯತೆ ಇದೆ.

ಇದನ್ನೂ ಓದಿ-ನವಾಂಶ ಜಾತಕದ ಉಚ್ಛ ಭಾವದಲ್ಲಿ ಶನಿಯ ಸಂಚಾರ, 4 ರಾಶಿಗಳ ಜಾತಕದವರಿಗೆ ಭಾರಿ ಧನಲಾಭ

ಸಿಂಹ ರಾಶಿ
ಶನಿಯ ಉದಯವು ಈ ರಾಶಿಯವರಿಗೆ ವಿಶೇಷವಾಗಿ ಫಲಕಾರಿಯಾಗಲಿದೆ. ನಿಮ್ಮ ಜಾತಕದ ಏಳನೇ ಭಾವದಲ್ಲಿ ಶನಿಯ ಸಂಕ್ರಮಣ ನಡೆಯಲಿದೆ. ಪಿತ್ರಾರ್ಜಿತ ಆಸ್ತಿಯಿಂದ ನಿಮಗೆ ಲಾಭ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ, ನೀವು ಪಾರ್ಟ್ನರ್ ಶಿಪ್ ನಲ್ಲಿ ವ್ಯಾಪಾರ ಮಾಡುತ್ತಿದ್ದರೆ, ನಿಮಗೆ ಲಾಭ ಉಂಟಾಗಲಿದೆ. ದೊಡ್ಡ ವ್ಯಾಪಾರ ಒಪ್ಪಂದಕ್ಕೆ ನೀವು ಸಹಿ ಹಾಕಬಹುದು. ಈ ಸಮಯದಲ್ಲಿ ಸಾಕಷ್ಟು ಲಾಭ ಇರುತ್ತದೆ. ಜೀವನ ಸಂಗಾತಿಯ ಬೆಂಬಲ ಸಿಗಲಿದೆ.

ಇದನ್ನೂ ಓದಿ-ಅಶ್ವಿನಿ ನಕ್ಷತ್ರದಲ್ಲಿ ರಾಹು ಪ್ರವೇಶ, ಈ ಮೂರು ರಾಶಿಗಳ ಜನರಿಗೆ ಅಪಾರ ಧನ, ಸ್ಥಾನಮಾನ ಪ್ರಾಪ್ತಿ!

ವೃಷಭ ರಾಶಿ
ವೃಷಭ ರಾಶಿಯವರ  ಜಾತಕದ ಹತ್ತನೇ ಭಾವದಲ್ಲಿ ಶನಿಯು ಉದಯಿಸಲಿದ್ದಾನೆ.  ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಭಾವವನ್ನು ಉದ್ಯೋಗ ಮತ್ತು ವ್ಯಾಪಾರದ ಮನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಅವಧಿಯಲ್ಲಿ ಕೆಲಸ-ವ್ಯವಹಾರದಲ್ಲಿ ವಿಶೇಷ ಪ್ರಯೋಜನಗಳಿರಲಿವೆ. ಧೈರ್ಯ ಮತ್ತು ಶೌರ್ಯ ಹೆಚ್ಚಾಗಲಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಸಮಯದಲ್ಲಿ ಆಫರ್‌ಗಳು ಬರಬಹುದು. ಮತ್ತೊಂದೆಡೆ, ನೀವು ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ.

ಇದನ್ನೂ ಓದಿ-Holi 2023: ಹೋಳಿ ಹಬ್ಬದ ಬಳಿಕ ಈ ಮೂರು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ, ಕಾರಣ ಇಲ್ಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News