Fengshui Tips: ಫೆಂಗ್‌ಶುಯಿ ಆಮೆಯನ್ನು ಮನೆಯಲ್ಲಿಟ್ಟರೆ ಹಣದ ಮಳೆಯಾಗುತ್ತದೆ..!
ಫೆಂಗ್ಶುಯಿಯಲ್ಲಿ ಆಮೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮನೆ ಅಥವಾ ಕಚೇರಿಯಲ್ಲಿ ಆಮೆಯ ಪ್ರತಿಮೆ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಇದನ್ನು ಇಡಲು ಕೆಲವು ವಿಶೇಷ ನಿಯಮಗಳನ್ನು ಅನುಸರಿಸಬೇಕು.
ನವದೆಹಲಿ: ವಾಸ್ತುವಿನಂತೆಯೇ ಫೆಂಗ್‌ಶುಯಿಯಲ್ಲಿಯೂ ಸಹ ಮನೆಯಲ್ಲಿ ಇರಿಸುವ ವಸ್ತುಗಳು ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ. ಫೆಂಗ್ ಶೂಯಿ ಪ್ರಕಾರ, ಕೆಲವು ವಸ್ತುಗಳು ಮನೆಯಲ್ಲಿ ಧನಾತ್ಮಕ ಶಕ್ತಿಯ ವಾತಾವರಣವನ್ನು ಸೃಷ್ಟಿಸುತ್ತವೆ. ಈ ಪೈಕಿ ಆಮೆಯೂ ಒಂದು.
ಹಿಂದೂ ಧರ್ಮದಲ್ಲಿ ಆಮೆಯನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ. ಎಲ್ಲಿ ಏನಿರುತ್ತದೋ ಎನ್ನುವುದನ್ನು ನೋಡಿಕೊಂಡು ಅಲ್ಲಿಗೆ ಲಕ್ಷ್ಮಿದೇವಿ ಬರುತ್ತಾಳಂತೆ. ಆಮೆ ವಾಸಿಸುವ ಮನೆಗಳಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಗೆ ಕೊರತೆಯಿರುವುದಿಲ್ಲವಂತೆ. ಆದರೆ ಇದನ್ನು ಇಡಲು ಕೆಲವು ನಿಯಮಗಳಿವೆ, ಅದನ್ನು ನೀವು ಮುಖ್ಯವಾಗಿ ತಿಳಿದುಕೊಳ್ಳಬೇಕು. ಮನೆ ಅಥವಾ ಕಚೇರಿಯಲ್ಲಿ ಆಮೆಯನ್ನು ಇಡುವುದು ಮಂಗಳಕರ ಎಂದು ಫೆಂಗ್ ಶೂಯಿಯಲ್ಲಿ ಹೇಳಲಾಗಿದೆ. ಆದರೆ ಅದನ್ನು ಇಡಲು ವಿಶೇಷ ನಿಯಮಗಳಿವೆ, ಹೀಗಾಗಿ ಆ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ.
ಇದನ್ನೂ ಓದಿ: Lucky Zodiac Signs: ಈ ರಾಶಿಯವರ ಜೀವನದಲ್ಲಿ ಶುಭಕಾಲ ಆರಂಭ! ಹಣದ ಹೊಳೆಯೇ ಹರಿಯಲಿದೆ
ಸಕಾರಾತ್ಮಕ & ದೀರ್ಘಾಯುಷ್ಯದ ಸಂಕೇತ
ಫೆಂಗ್ ಶೂಯಿಯಲ್ಲಿ ಆಮೆಯನ್ನು ಸಕಾರಾತ್ಮಕ ಶಕ್ತಿ ಮತ್ತು ದೀರ್ಘಾಯುಷ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿ ಆಮೆಯನ್ನು ಮನೆ ಅಥವಾ ಕಚೇರಿಯಲ್ಲಿ ಇರಿಸಿದರೆ ಸಮಾಜದಲ್ಲಿ ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ಹೊಸ ವ್ಯಾಪಾರ ಪ್ರಾರಂಭಿಸುವ ಜನರು ತಮ್ಮ ಕಚೇರಿ ಅಥವಾ ಅಂಗಡಿಯಲ್ಲಿ ಬೆಳ್ಳಿಯ ಫೆಂಗ್‌ಶುಯಿ ಆಮೆಯನ್ನು ಇಟ್ಟುಕೊಳ್ಳಬೇಕು. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಅಂಗಡಿಯಲ್ಲಿಟ್ಟರೆ ವ್ಯಾಪಾರವು ವೇಗವಾಗಿ ಬೆಳೆಯುತ್ತದೆ ಎಂದು ಹೇಳಲಾಗುತ್ತ
ಉತ್ತರ ದಿಕ್ಕಿನಲ್ಲಿ ಕಪ್ಪು ಆಮೆ ಇರಿಸಿ
ವೃತ್ತಿಜೀವನದಲ್ಲಿ ನೀವು ಪದೇ ಪದೇ ವೈಫಲ್ಯಗಳನ್ನು ಅನುಭವಿಸುತ್ತಿದ್ದರೆ, ಇದರಿಂದ ನೀವು ಅಸಮಾಧಾನಗೊಂಡಿದ್ದರೆ ನಿಮ್ಮ ಕೆಲಸದ ಸ್ಥಳದಲ್ಲಿ ಕಪ್ಪು ಆಮೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಬೇಕು. ಇದು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಫೆಂಗ್ ಶೂಯಿಯಲ್ಲಿ ಆಮೆಯನ್ನು ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಫೆಂಗ್ ಶೂಯಿ ಆಮೆಯನ್ನು ಮನೆಯ ಪಶ್ಚಿಮ ದ್ವಾರದಲ್ಲಿ ಇರಿಸಿದ್ರೆ, ಮನೆಯು ಯಾವಾಗಲೂ ಸುರಕ್ಷಿತವಾಗಿರುತ್ತದೆ ಮತ್ತು ಮನೆ ಮೇಲೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಬೀಳುವುದಿಲ್ಲವಂತೆ.
ಇದನ್ನೂ ಓದಿ: Astrology : ಈ ಕೈಯಲ್ಲಿ ತುರಿಕೆ ಬಿಟ್ಟರೆ ಧನಾಗಮನ ಆಗುತ್ತದೆ!
ಮಗುವಿನ ಸಂತೋಷಕ್ಕೆ ಹೀಗೆ ಮಾಡಿ
ನಿಮ್ಮ ಮಕ್ಕಳು ಯಾವಾಗಲೂ ಸಂತೋಷದಿಂದ ಇರಬೇಕೆಂದರೆ ಹೆಣ್ಣು ಆಮೆಯನ್ನು ಮನೆಯಲ್ಲಿ ಇಡಬೇಕಂತೆ. ಇದರಿಂದ ನಿಮಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗುತ್ತದಂತೆ. ಫೆಂಗ್ ಶೂಯಿ ಆಮೆಯನ್ನು ಡ್ರಾಯಿಂಗ್ ರೂಂನಲ್ಲಿ ಇಡುವುದರಿಂದ ಮನೆಯ ವಾತಾವರಣವು ಉತ್ತಮವಾಗಿರುತ್ತದೆ ಮತ್ತು ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ. ಫೆಂಗ್ ಶೂಯಿ ಆಮೆ ವಾಸಿಸುವ ಮನೆಗಳಲ್ಲಿ ಎಂದಿಗೂ ಉದ್ವಿಗ್ನತೆ ಇರುವುದಿಲ್ಲವೆಂದು ನಂಬಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.