ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology)ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೂ ಆಗುತ್ತದೆ. ಗ್ರಹಗಳ ರಾಶಿಚಕ್ರದಲ್ಲಿನ (Zodiac Sign) ಬದಲಾವಣೆಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತವೆ. ಇದೇ ರೀತಿಯ ಬದಲಾವಣೆ ಮಾರ್ಚ್ 31 ರಂದು ನಡೆಯಲಿದೆ. ಈ ದಿನ ಶುಕ್ರನ ರಾಶಿಚಕ್ರವು ಬದಲಾಗಲಿದೆ (Venus transit). ಮಾರ್ಚ್ 31 ರಂದು ಶುಕ್ರ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದೆ. 


COMMERCIAL BREAK
SCROLL TO CONTINUE READING

ಈ ರಾಶಿಚಕ್ರದ ಚಿಹ್ನೆಗಳಿಗೆ ಆಗಲಿದೆ ಭಾರೀ ಲಾಭ : 
ಮೇಷ: ಈ ರಾಶಿಯವರಿಗೆ ಶುಕ್ರನ ಬದಲಾವಣೆಯು ಶುಭ ಫಲವನ್ನು ನೀಡಲಿದೆ (Venus transit 2022). ಶುಕ್ರ ಸಂಕ್ರಮಣದ ಸಮಯದಲ್ಲಿ ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸ ಮಾಡುವವರಿಗೆ ವಿಶೇಷ ಯಶಸ್ಸು ಸಿಗಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಸಾಧನೆಯನ್ನು ಕಾಣಬಹುದು. ಅಲ್ಲದೆ, ಕೆಲಸದ ಸ್ಥಳದಲ್ಲಿ ಪ್ರಶಂಸೆ ಇರುತ್ತದೆ. ವ್ಯಾಪಾರದಲ್ಲಿ ಸಿಕ್ಕಿಹಾಕಿಕೊಂಡಿರುವ ಹಣ ಮತ್ತೆ ಕೈ ಸೇರುತ್ತದೆ (venus transit effects).  


ಇದನ್ನೂ ಓದಿ : ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸುತ್ತದೆ ಈ ಕೆಂಪು ಬಣ್ಣದ ರತ್ನ ; ಮಹಿಳೆಯರಿಗೆ ವರದಾನವಿದ್ದಂತೆ ..!


ವೃಷಭ : ಶುಕ್ರನ ರಾಶಿ ಬದಲಾವಣೆಯು ವೃಷಭ ರಾಶಿಯವರಿಗೆ ಶುಭವಾಗಲಿದೆ (Shukra rashi parivarthane). ಹಿಂದೆ ಮಾಡಿದ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ. ಸರ್ಕಾರಿ ಕೆಲಸ ಮಾಡುವವರಿಗೆ ವಿಶೇಷ ಲಾಭ ದೊರೆಯಲಿದೆ. ಈ ಸಂಕ್ರಮಣ ಪ್ರೀತಿಯ ಜೀವನಕ್ಕೆ ಉತ್ತಮವೆಂದು ಸಾಬೀತಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. 


ತುಲಾ : ಆರ್ಥಿಕ ಮತ್ತು ವ್ಯಾಪಾರದ ಕಡೆಯಿಂದ ಲಾಭವಾಗಲಿದೆ. ವೈಯಕ್ತಿಕ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಹೆಚ್ಚುವರಿ ಲಾಭ ದೊರೆಯಲಿದೆ. ವೈವಾಹಿಕ ಜೀವನದಲ್ಲಿಯೂ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. 


ಇದನ್ನೂ ಓದಿ : ಒಂದೂವರೆ ವರ್ಷ ಈ 3 ರಾಶಿಯವರನ್ನು ಬಿಡದೇ ಕಾಡಲಿದ್ದಾನೆ ರಾಹು, ಜೀವನದಲ್ಲಿ ಆಗಲಿದೆ ಬದಲಾವಣೆ


ಧನು ರಾಶಿ : ಶುಕ್ರನ ಸಂಕ್ರಮವು (Shikara rashi) ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.  ಈ  ಅವಧಿಯಲ್ಲಿ ಹಣಕಾಸಿನ ಲಾಭವಾಗಲಿದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಯಾವುದೇ ಪ್ರಕರಣದ ತೀರ್ಪು ನಿಮ್ಮ ಪರವಾಗಿ ಬರುತ್ತದೆ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಪ್ರತಿಷ್ಠೆ ಹೆಚ್ಚಾಗುತ್ತದೆ. ಇದಲ್ಲದೇ ವ್ಯವಹಾರದಲ್ಲಿ ವಿಸ್ತರಣೆಯೂ ಆಗಬಹುದು. 


ಶುಕ್ರ ಸಂಚಾರದ ಸಮಯದಲ್ಲಿ ಶುಭ ಫಲಕ್ಕಾಗಿ ಏನು ಮಾಡಬೇಕು?
1. ಶುಕ್ರ (Venus)ಸಂಚಾರದ ಸಮಯದಲ್ಲಿ ಬಿಳಿ ವಸ್ತುಗಳನ್ನು ಬಳಸುವುದು ಉತ್ತಮ. 
2. ಶುಕ್ರ ಗ್ರಹವನ್ನು ಬಲಪಡಿಸಲು, ಶುಕ್ರವಾರದಂದು ಉಪವಾಸ ಕೈಗೊಳ್ಳಬೇಕು. ಅಲ್ಲದೆ, ಲಕ್ಷ್ಮೀ ದೇವಿಗೆ (Godess Lakshmi)ಬಿಳಿ ಬಣ್ಣದ  ಸಿಹಿತಿಂಡಿಗಳನ್ನು ಅರ್ಪಿಸಿ.   
3. ಶುಕ್ರವಾರದಂದು ಅಗತ್ಯವಿರುವವರಿಗೆ ಅಕ್ಕಿ, ಹಾಲು, ಬಿಳಿ ಸಿಹಿತಿಂಡಿಗಳು, ಬಿಳಿ ಬಟ್ಟೆ, ಸಕ್ಕರೆ ಇತ್ಯಾದಿಗಳನ್ನು ದಾನ ಮಾಡಿ.

 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.