ಬೆಂಗಳೂರು : ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಜೀವನದ ಪ್ರತಿಯೊಂದು ಹಂತವನ್ನು ಸುಧಾರಿಸಲು ಇಲ್ಲಿ  ಮಾರ್ಗದರ್ಶನ ನೀಡಲಾಗಿದೆ. ಆಚಾರ್ಯ ಚಾಣಕ್ಯರು ಬರೆದ ನೀತಿ ಶಾಸ್ತ್ರ ಚಾಣಕ್ಯ ನೀತಿಯಲ್ಲಿ ಪ್ರೇಮ ಜೀವನ ಮತ್ತು ವೈವಾಹಿಕ ಜೀವನ ಸುಖಮಯವಾಗಿಡುವ ಬಗ್ಗೆ ಕೂಡಾ ಹೇಳಲಾಗಿದೆ. ಇದಕ್ಕಾಗಿ ಕೆಲವೊಂದು ಸೂತ್ರಗಳನ್ನು ಅನುಸರಿಸುವಂತೆ ಸೂಚನೆ ನೀಡಿದ್ದಾರೆ. ಪತಿ ಅಥವಾ ಪ್ರೇಮಿ ಈ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಅವನ ಮತ್ತು ಅವನ ಸಂಗಾತಿಯ ಜೀವನವು ಸುಖಮಯವಾಗಿರುತ್ತದೆ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಸಂಗಾತಿಯನ್ನು ಸಂತೋಷವಾಗಿಡಬೇಕಾದರೆ ಈ ವಿಷಯಗಳು ನೆನಪಿರಲಿ : 
ಕೋಪ ಬೇಡವೇ ಬೇಡ : 
ನಿಮ್ಮ ಗೆಳತಿ ಅಥವಾ ಪತ್ನಿಯ ಮೇಲೆ ಎಂದಿಗೂ ಕೋಪಗೊಳ್ಳಬೇಡಿ. ಕೋಪಗೊಂಡಾಗ ವ್ಯಕ್ತಿಯ ಬಾಯಿಯಿಂದ ಎದುರಿಗಿರುವವರ ಮನಸ್ಸಿಗೆ ಘಾಸಿ ಮಾಡುವಂಥಹ ಮಾತುಗಳು ಬರುತ್ತವೆ. ಹೀಗಾದಾಗ ಆ ನೋವು ಮನಸ್ಸಿನಿಂದ ಸುಲಭವಾಗಿ ಮಾಸುವುದಿಲ್ಲ. ಆದ್ದರಿಂದ ಸಂಗಾತಿಯ ಮೇಲೆ ಎಂದಿಗೂ ಕೋಪಗೊಳ್ಳಬೇಡಿ.  


ಇದನ್ನೂ ಓದಿ : ನೀವು ಮಲಗುವ ಶೈಲಿ ನಿಮ್ಮ ವ್ಯಕ್ತಿತ್ವದ ಗುಟ್ಟು ಬಹಿರಂಗಪಡಿಸುತ್ತದೆ... ಎಚ್ಚರ!


ಗೌರವ ಬಹಳ ಮುಖ್ಯ :
ಪತ್ನಿಯಾಗಿರಲಿ ಅಥವಾ ಪ್ರೇಯಸಿಯಾಗಿರಲಿ ಗೌರವ ನೀಡುವುದನ್ನು ಮರೆಯಬೇಡಿ. ಸಂಗಾತಿಯನ್ನು ಅವಮಾನಿಸುವಂತಹ ಕೆಲಸ ತಪ್ಪಿಯೂ ಮಾಡದಿರಿ. ಹೆಂಡತಿಯನ್ನು ಪ್ರೀತಿಸುವುದರ ಜೊತೆಗೆ ಅವಳಿಗೆ ಗೌರವವನ್ನು ನೀಡುವುದು ಕೂಡಾ ಬಹಳ ಅವಶ್ಯಕ. ಪತ್ನಿಯಾಗಿರಲಿ ಅಥವಾ ಪ್ರೇಯಸಿಯಾಗಿರಲಿ ಅವರ ನ್ಯೂನತೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ಸಂಬಂಧದ ನೆಲೆಯೇ ಅಲುಗಾಡಲು ಆರಂಭವಾಗುತ್ತದೆ. ಇನ್ನೊಬ್ಬರ ಮುಂದೆ ನಿಮ್ಮ ಸಂಬಂಧ ಅಪಹಾಸ್ಯಕ್ಕೆ ಗುರಿಯಾಗುತ್ತದೆ. 


ಸುಳ್ಳಿನಿಂದ ದೂರ ಉಳಿಯಿರಿ : 
ಸುಳ್ಳಿನಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳಿ. ನಿಮ್ಮ ಸಂಗಾತಿಗೆ ಎಂದಿಗೂ ಸುಳ್ಳು ಹೇಳಬೇಡಿ ಅಥವಾ ಏನನ್ನೂ ಮುಚ್ಚಿಡಬೇಡಿ.  ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಪಾರದರ್ಶಕತೆ ಇರುವುದು ಅಗತ್ಯ. ಯಾವಾಗಲೂ ಪರಸ್ಪರ ಪ್ರಾಮಾಣಿಕವಾಗಿರಿ. 


ಇದನ್ನೂ ಓದಿ :  ಈ ಕೆಲಸಗಳಿಂದ ನಿಮ್ಮ ದಿನವನ್ನು ಆರಂಭಿಸಿ, ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಕ್ಕುತ್ತದೆ


ಪತ್ನಿಯ ಆಸೆಯನ್ನು ಗೌರವಿಸಿ : 
ಸಂಗಾತಿಯ ಆಸೆಯನ್ನು  ನೆರವೇರಿಸುವುದು ಕೂಡಾ ಮುಖ್ಯ.  ನಿಮ್ಮ ಹೆಂಡತಿಯ ಪತ್ನಿ ಅಥವಾ ಪ್ರೇಯಸಿಯ ಆಸೆಗಳನ್ನು ಗೌರವಿಸಿ ಮತ್ತು ಅವುಗಳನ್ನು ಪೂರೈಸಲು ಪ್ರಯತ್ನಿಸಿ. ಇದಲ್ಲದೆ,  ಅವರ ಹೆತ್ತವರು, ಒಡಹುಟ್ಟಿದವರನ್ನೂ ಗೌರವಿಸಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.