Tips For Good Luck: ಅದೃಷ್ಟದ ಬೆಂಬಲ ಸಿಗುತ್ತಿಲ್ಲವೇ, ಮನೆಯಲ್ಲಿನ ಅಕ್ಕಿಯನ್ನು ಬಳಸಿ ಈ ಉಪಾಯ ಮಾಡಿ
Tips For Good Luck: ಜೀವನದಲ್ಲಿ ಹಲವು ಬಾರಿ ಸಾಕಷ್ಟು ಕಷ್ಟ ಪಟ್ಟರೂ ಕೂಡ ಯಶಸ್ಸು ಸಿಗುವುದಿಲ್ಲ. ಹೀಗಿರುವಾಗ ಭಾಗ್ಯ ಎಚ್ಚೆತ್ತುಕೊಳ್ಳುವುದೇ ಇಲ್ಲ. ಹೀಗಿರುವಾಗ ಜೋತಿಷ್ಯ ಶಾಸ್ತ್ರದಲ್ಲಿ ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಅಂತಹುದೇ ಒಂದು ಸುಲಭ ಉಪಾಯದ ಕುರಿತು ತಿಳಿದುಕೊಳ್ಳೋಣ ಬನ್ನಿ,
Tips For Good Luck: ತಮ್ಮ ಜೀವನ ಸುಖವಾಗಿರಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಇರಬಾರದು ಎಂಬುದನ್ನು ಎಲ್ಲರೂ ಬಯಸುತ್ತಾರೆ. ಕುಟುಂಬದ ಎಲ್ಲಾ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕೆಲವೊಮ್ಮೆ ವ್ಯಕ್ತಿ ಎಷ್ಟೇ ಕಷ್ಟಪಟ್ಟರು ಕೂಡ ತಕ್ಕ ಫಲ ಸಿಗುವುದಿಲ್ಲ. ಇದರ ಹಿಂದೆ ಅವರ ದುರಾದೃಷ್ಟ ಕಾರಣವಾಗಿರಬಹುದು. ಅನೇಕ ಬಾರಿ, ಅದೃಷ್ಟದ ಕೊರತೆಯಿಂದಾಗಿ, ವ್ಯಕ್ತಿಯ ಕನಸುಗಳು ನನಸಾಗುವುದಿಲ್ಲ, ಅವರು ಮಾಡುವ ಕೆಲಸ-ಕಾರ್ಯಗಳಲ್ಲಿ ಅವರಿಗೆ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ಇದಕ್ಕೆ ಜ್ಯೋತಿಷ್ಯದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಅಂತಹ ಒಂದು ಸುಲಭ ಪರಿಹಾರವೆಂದರೆ ಅದು ಮನೆಯಲ್ಲಿರುವ ಅಕ್ಕಿಯನ್ನು ಬಳಸಿ ಮಾಡಲಾಗುವ ಉಪಾಯ. ಇದನ್ನು ಮಾಡುವುದರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ.
ಅಕ್ಕಿ ಉಪಾಯ
ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಅತ್ಯಂತ ಪವಿತ್ರವಾದ ಧಾನ್ಯವೆಂದು ಪರಿಗಣಿಸಲಾಗಿದೆ. ಇದನ್ನು ದೇವರಿಗೆ ಅರ್ಪಿಸುವ ಅಕ್ಷತೆ ಎಂದೂ ಕೂಡ ಕರೆಯುತ್ತಾರೆ. ಇದೇ ವೇಳೆ, ಅಕ್ಕಿಯನ್ನು ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಆಕಿಯಿಂದ ಮಾಡಲಾಗುವ ಕೆಲ ಸಣ್ಣ ಉಪಾಯದಿಂದ ನಿಮ್ಮ ಅದೃಷ್ಟ ನಿಮಗೆ ಸಾಥ್ ನೀಡಲು ಪ್ರಾರಂಭಿಸುತ್ತದೆ.
ತಿಲಕ
ಹಣೆಯ ಮೇಲೆ ಕುಂಕುಮವನ್ನಿಟ್ಟು, ಅದರ ಮೇಲೆ ಕೆಲ ಅಖಂಡ ಅಂದರೆ ತುಂದಾಗದ ಅಕ್ಷತೆಯನ್ನು ಒತ್ತಬೇಕು. ಹೀಗೆ ಮಾಡುವುದರಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮತ್ತೊಂದೆಡೆ, ತಾಮ್ರದ ಪಾತ್ರೆಯಲ್ಲಿ ಕುಂಕುಮದ ಜೊತೆಗೆ ಸ್ವಲ್ಪ ಅಕ್ಕಿಯನ್ನು ಬೆರೆಸಿ ಅದರಿಂದ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ನಿಮ್ಮ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳುತ್ತದೆ.
ಕೆಂಪು ಬಟ್ಟೆಯ ಮೂಟೆ
ಹುಣ್ಣಿಮೆಯ ದಿನ ಬೆಳಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ ಕೆಂಪು ರೇಷ್ಮೆ ಬಟ್ಟೆಯನ್ನು ತೆಗೆದುಕೊಳ್ಳಿ. ಅದರಲ್ಲಿ 21 ಅಖಂಡ ಅಕ್ಕಿಯ ಕಾಳುಗಳನ್ನು ಹಾಕಿ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿ. ಈಗ ಈ ಬಟ್ಟೆಯ ಒಂದು ಮೂಟೆಯನ್ನು ತಯಾರಿಸಿ ಮತ್ತು ಅದನ್ನು ಹಣವನ್ನು ಇಡುವ ತಿಜೋರಿ ಅಥವಾ ಸ್ಥಳದಲ್ಲಿ ಇರಿಸಿ. ಇದರಿಂದ ನಿಮ್ಮ ಜೀವನದಲ್ಲಿ ನಿಮಗೆ ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಎದುರಾಗುವುದಿಲ್ಲ.
ಇದನ್ನೂ ಓದಿ-Good News Indications: ಕನಸಲ್ಲಿ ಈ ವಸ್ತುಗಳು ಕಾಣುವುದು ಶುಭ ಸಂಕೇತ, ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗುತ್ತೆ ಎಂದರ್ಥ
ದಾನ
ಸೋಮವಾರದ ದಿನ ಅರ್ಧ ಕಿಲೋ ಅಖಂಡ ಅಕ್ಕಿಯನ್ನು ತೆಗೆದುಕೊಂಡು ಶಿವ ದೇವಾಲಯಕ್ಕೆ ಹೋಗಿ. ಅದರಿಂದ ಒಂದು ಹಿಡಿ ಅಕ್ಕಿಯನ್ನು ತೆಗೆದು ದೇವಾಧಿದೇವನಿಗೆ ಅರ್ಪಿಸಿ. ಇದರ ನಂತರ, ಉಳಿದ ಅಕ್ಕಿಯನ್ನು ಬಡ ಅಥವಾ ನಿರ್ಗತಿಕರಿಗೆ ದಾನ ಮಾಡಿ. ಈ ಪ್ರಕ್ರಿಯೆಯನ್ನು ಐದು ದಿನಗಳವರೆಗೆ ನಿರಂತರವಾಗಿ ಮಾಡಿ. ಇದು ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.