ನವದೆಹಲಿ : ಆಚಾರ್ಯ ಚಾಣಕ್ಯರ ನೀತಿಗಳು ಜೀವನಕ್ಕೆ ಬಹಳ ಉಪಯುಕ್ತವಾಗಿವೆ (Chanakya niti). ಇದನ್ನು  ಯಾರು ಅಳವಡಿಸಿಕೊಂಡರೂ ಜೀವನದಲ್ಲಿ  ಬರುವ ಸಮಸ್ಯೆಗಳನ್ನು ಸುಲಭವಾಗಿ ಜಯಿಸಬಹುದು ಎಂದು ಹೇಳಲಾಗುತ್ತದೆ. ಅಲ್ಲದೆ, ಈ ನೀತಿಗಳನ್ನು ಅಳವಡಿಸಿಕೊಂಡ ವ್ಯಕ್ತಿಯು ಯಾವಾಗಲೂ ಜೀವನದಲ್ಲಿ ಪ್ರಗತಿ, ಸಂಪತ್ತು ಮತ್ತು ಸಂತೋಷವನ್ನು ಪಡೆಯುತ್ತಾನೆ ಎನ್ನಲಾಗಿದೆ (Chanakya niti for Success) . ಆಚಾರ್ಯ ಚಾಣಕ್ಯನ ನೀತಿಗಳ ಆಧಾರದ ಮೇಲೆ ಚಂದ್ರಗುಪ್ತ ಮೌರ್ಯನು ನಂದ ಸಾಮ್ರಾಜ್ಯದ ಚಕ್ರವರ್ತಿಯಾದನು ಮಾತ್ರವಲ್ಲ ಅವನಿಗೆ ಶತ್ರುಗಳನ್ನು ಸೋಲಿಸುವುದು ಸುಲಭವಾಗಿ ಸಾಧ್ಯವಾಯಿತು.  ಆಚಾರ್ಯ  ಚಾಣಕ್ಯ ಹೇಳಿರುವ ನೀತಿಯನ್ನು ಜೀವನದಲ್ಲಿ ಅನುಸರಿಸಿದರೆ ಯಾವಾಗಲೂ  ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬಹುದು (Godess Lakshmi). 


COMMERCIAL BREAK
SCROLL TO CONTINUE READING

ಲಕ್ಷ್ಮೀ ಯ ಆಶೀರ್ವಾದ ಪಡೆಯಲು ಏನು ಮಾಡಬೇಕು ? 
ನೀವು ಯಾವಾಗಲೂ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬೇಕಾದರೆ ಆಹಾರವನ್ನು ವ್ಯರ್ಥ ಮಾಡಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ (Chanakya niti for money). ಆಹಾರವನ್ನು ಬಿಸಾಡಿದರೆ ತಾಯಿ ಅನ್ನಪೂರ್ಣೆ ಸಿಟ್ಟಾಗುತ್ತಾಳೆ.  ಅನ್ನಪೂರ್ಣೆಯನ್ನು  ಲಕ್ಷ್ಮೀ ದೇವಿಯ (Godess Lakshmi) ಸ್ವರೂಪ ಎಂದೇ ಹೇಳಲಾಗುತ್ತದೆ. 


ಇದನ್ನೂ ಓದಿ : ಪ್ರೀತಿಯಲ್ಲಿ ಬಿದ್ದರೂ, ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಈ ರಾಶಿಯವರು


ಯಾವಾಗಲೂ ಇತರರಿಗೆ ಸಹಾಯ ಮಾಡುವ, ತಮ್ಮ ಹಣವನ್ನು ಸದುಪಯೋಗಪಡಿಸಿಕೊಳ್ಳುವ ಮತ್ತು ಇತರರ ಬಗ್ಗೆ ಕೃತಜ್ಞತೆಯ ಭಾವನೆಯನ್ನು ಹೊಂದಿರುವಂತಹವರಿಗೆ ತಾಯಿ ಲಕ್ಷ್ಮೀ ದಯೆ ತೋರುತ್ತಾಳೆ (how to get lakshmi blessings). 


ಪ್ರೀತಿ ತುಂಬಿರುವ ಮನೆಯಲ್ಲಿ ಲಕ್ಷ್ಮೀ ತನ್ನ ಕೃಪೆಯನ್ನು ಹರಿಸುತ್ತಾಳೆ. ಎಲ್ಲಿ ಜನರು ಪರಸ್ಪರ ಪ್ರೀತಿಯಿಂದ ಬದುಕುತ್ತಾರೆಯೋ ಅಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಆದ್ದರಿಂದ, ಗಂಡ ಮತ್ತು ಹೆಂಡತಿ ಯಾವಾಗಲೂ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು (Chanakya niti for success). ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಡ ಬಾರದು. ಇಲ್ಲದಿದ್ದರೆ ಲಕ್ಷ್ಮೀ ಮುನಿಸಿಕೊಳ್ಳಲು ತಡ ಮಾಡುವುದಿಲ್ಲ. ಮನೆಯಿನದ ಹೊರ ನಡೆಯಲು ಕೂಡಾ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 


ಇದನ್ನೂ ಓದಿ:  Planet Transit: ಮಾರ್ಚ್ 31 ರ ವೇಳೆಗೆ ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಸಾಕಷ್ಟು ಸಂತೋಷ , ಹಣದ ಸುರಿಮಳೆ!


ಗಳಿಸಿದ ಹಣಕ್ಕೆ ಗೌರವ ನೀಡಬೇಕು. ಅನಗತ್ಯವಾಗಿ ಹಣವನ್ನು ಖರ್ಚು ಮಾಡಬಾರದು.  ಆದ್ದರಿಂದ ಯಾವಾಗಲೂ ಆರಾಮದಾಯಕ ಜೀವನವನ್ನು ನಡೆಸಲು ಬಜೆಟ್ ಅನ್ನು ರೂಪಿಸಿಕೊಳ್ಳಬೇಕು. ಅದರ ಪ್ರಕಾರವೇ ಖರ್ಚು ಇರಬೇಕು.  ಅನಗತ್ಯವಾಗಿ ಖರ್ಚು ಮಾಡಿದರೆ ದರಿದ್ರ ಬಂದೊದಗುತ್ತದೆ.  


ಇನ್ನು ಜೀವನದಲ್ಲಿ ಕಷ್ಟಪಟ್ಟು ದುಡಿಯುವವರ ಮೇಲೆ ಲಕ್ಷ್ಮೀ  ಸದಾ ದಯೆ ತೋರುತಇವರ ಜೀವನದಲ್ಲಿ ಯಾವತ್ತೂ ಹಣದ ಕೊರತೆ  ಎದುರಾಗುವುದಿಲ್ಲ.  


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.