ಪ್ರೀತಿಯಲ್ಲಿ ಬಿದ್ದರೂ, ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಈ ರಾಶಿಯವರು

ರಾಶಿಚಕ್ರಕ್ಕನುಗುಣವಾಗಿ ಮನುಷ್ಯನ ಸ್ವಭಾವ ಬದಲಾಗುತ್ತಿರುತ್ತದೆ (ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ, ಕೆಲವರು ಪದೇ ಪದೇ  ಪ್ರೀತಿಯಲ್ಲಿ ಬೀಳುತ್ತಾರೆ. ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ.

Written by - Zee Kannada News Desk | Last Updated : Mar 9, 2022, 10:29 AM IST
  • ಈ 4 ರಾಶಿಚಕ್ರದವರು ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಾರೆ
  • ಎಲ್ಲರೊಂದಿಗೆ ಸುಲಭವಾಗಿ ಬೆರೆತುಕೊಳ್ಳುತ್ತಾರೆ
  • ಕೆಲವೊಮ್ಮೆ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಪ್ರೀತಿಯಲ್ಲಿ ಬಿದ್ದರೂ, ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಈ ರಾಶಿಯವರು title=
ಈ 4 ರಾಶಿಚಕ್ರದವರು ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಾರೆ (file photo)

ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯು ಕೆಲವು ಅಭ್ಯಾಸಗಳು ಮತ್ತು ಅದೃಷ್ಟದೊಂದಿಗೆ ಹುಟ್ಟುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ವ್ಯಕ್ತಿಯ ಗುಣ ನಡತೆ, ಸ್ವಭಾವಕ್ಕೆ ಜಾತಕದ ಗ್ರಹಗಳ ಸ್ಥಿತಿಯೂ ಕಾರಣವಾಗಿರುತ್ತದೆ. ಮಾತ್ರವಲ್ಲ ರಾಶಿಚಕ್ರಕ್ಕನುಗುಣವಾಗಿ ಮನುಷ್ಯನ ಸ್ವಭಾವ ಬದಲಾಗುತ್ತಿರುತ್ತದೆ (Nature By Zodiac sign) ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ, ಕೆಲವರು ಪದೇ ಪದೇ  ಪ್ರೀತಿಯಲ್ಲಿ ಬೀಳುತ್ತಾರೆ. ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ ಜೀವನದಲ್ಲಿ ಅನೇಕ ಬಾರಿ ಪ್ರೀತಿಯಲ್ಲಿ ಬೀಳುವ ರಾಶಿಚಕ್ರ ಚಿಹ್ನೆಗಳ ಬಗ್ಗೆ  ಹೇಳಲಾಗಿದೆ. 

ವೃಷಭ ರಾಶಿ : ವೃಷಭ ರಾಶಿಯ (Taurus) ಜನರು ಎದುರಿಗಿರುವವರಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಎದುರಿಗಿರುವ ವ್ಯಕ್ತಿ ಸಲುಗೆಯಿಂದ ನಡೆದುಕೊಂಡರೆ ಅದನ್ನೇ ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಇದರಿಂದಾಗಿ ಯಾರೊಂದಿಗೂ ದೀರ್ಘಕಾಲ ಸಂಪರ್ಕದಲ್ಲಿರಲು ಈ ರಾಶಿಯವರಿಗೆ ಸಾಧ್ಯವಾಗುವುದಿಲ್ಲ (Relationship by zodiac). ಈ ರಾಶಿಯವರು ತಮ್ಮ ಸಂಗಾತಿಯನ್ನು ಬಹಳವಾಗಿ ಪ್ರೀತಿಸುತ್ತಾರೆ ಮತ್ತು ಯಾವಾಗಲೂ ಅವರಿಗೆ ನಿಷ್ಠರಾಗಿರುತ್ತಾರೆ. 

ಇದನ್ನೂ ಓದಿ : Astrology: ತುಂಬಾ ಅಸಡ್ಡೆ ಸ್ವಾಭಾವದವರಾಗಿರುತ್ತಾರಂತೆ ಈ 5 ರಾಶಿಯ ಜನ!

ಮಿಥುನ: ಮಿಥುನ ರಾಶಿಯ (Gemini) ಜನರು ಸಂತೋಷ ಮತ್ತು ಲವಲವಿಕೆ ಸ್ವಭಾವದವರು. ಅವರು ಜನರೊಂದಿಗೆ ಬೇಗನೇ ಬೆರೆಯುತ್ತಾರೆ. ಮತ್ತು ಇತರರ ಸ್ನೇಹವನ್ನು ಸಂಪಾದಿಸುತ್ತಾರೆ. ಇವರು ಬಹಳ ಬೇಗನೇ ಒಬ್ಬರನ್ನು  ಪ್ರೀತಿಸಲು ಆರಂಭಿಸುತ್ತಾರೆ.  ಈ ರಾಶಿಯವರು  (Zodiac sign) ಯಾವಾಗಲೂ  ಒಂದೇ ಸ್ಥಳದಲ್ಲಿ ನೆಲೆಯಾಗುವುದು ಸಾಧ್ಯವಾಗುವುದಿಲ್ಲ . ಇದರಿಂದಾಗಿ ಅವರು ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದುತ್ತಾರೆ ಎಂದು ಹೇಳಲಾಗಿದೆ. ಆದರೆ ಮದುವೆಯ ನಂತರ, ಈ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ಪ್ರಾಮಾಣಿಕ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. 

ತುಲಾ ರಾಶಿ : ತುಲಾ ರಾಶಿಯ (Libra) ಜನರು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಸದಾ ಮುಂದಿರುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಅವರು ಜನರನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಸಂಬಂಧವು ದುರ್ಬಲವಾಗುತ್ತದೆ. ಇದರ ನಂತರ, ಅವರು ಸುಲಭವಾಗಿ ಹೊಸ  ಸಂಗಾತಿಯ ಕಡೆಗೆ ಆಕರ್ಷಿತರಾಗಿ ಬಿಡುತ್ತಾರೆ. 

ಇದನ್ನೂ ಓದಿ: Rahu-Ketu Transit-2022: ರಾಹು-ಕೇತುಗಳ ನಡೆ ಬದಲಾವಣೆ ಈ ರಾಶಿಗಳ ಮೇಲೆ ನೇರ ಪ್ರಭಾವ, ಪಾಪಿ ಗ್ರಹಗಳಿಂದ ಸಂಕಷ್ಟದಲ್ಲಿ ಹೆಚ್ಚಳ

ಕುಂಭ ರಾಶಿ : ಕುಂಭ ರಾಶಿಯವರು (Aquarius) ಯಾರೊಂದಿಗಾದರೂ ಬಂಧನದಲ್ಲಿ ಇರಲು ಇಷ್ಟ ಪಡುವುದಿಲ್ಲ.  ಈ ರಾಶಿಯವರು ಪ್ರೀತಿ ಮಾಡುತ್ತಾರೆ. ಬ್ರೇಕ್ ಅಪ್ ಕೂಡಾ ಅಷ್ಟೇ ಬೇಗೆ ಮಾಡಿಕೊಳ್ಳುತ್ತಾರೆ. ಇವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದಾಗ ಮಾತ್ರ ಅವರು ತಮ್ಮ ಸಂಗಾತಿಯೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News