Astro Tips: 5 ರೂ. ನಾಣ್ಯದ ಈ ಉಪಾಯ ಮಾಡಿ, ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ!
Astro Tips: ಜೋತಿಷ್ಯ ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಹಲವು ಕ್ರಮಗಳನ್ನು ಸೂಚಿಸಲಾಗಿದೆ. ಈ ಕ್ರಮಗಳಲ್ಲಿ ಐದು ರೂ.ಗಳ ನಾಣ್ಯದ ಉಪಾಯ ಕೂಡ ಒಂದು. ಈ ಪರಿಹಾರ ಅನುಸರಿಸುವುದರಿಂದ ನೀವು ತ್ವರಿತ ಫಲಿತಾಂಶಗಳನ್ನು ಪಡೆಯಬಹುದು ಮತ್ತು ನಿಮ್ಮ ಮನೆಗೆ ತಾಯಿ ಲಕ್ಷ್ಮಿಯ ಆಗಮನವಾಗುತ್ತದೆ.
Five Rupee Coin Upay: ಪ್ರತಿಯೊಬ್ಬ ವ್ಯಕ್ತಿಗೂ ತಾನು ಜೀವನದಲ್ಲಿ ಶ್ರೀಮಂತನಾಗುವ ಬಯಕೆ ಇರುತ್ತದೆ. ತನ್ನ ಜೀವನದಲ್ಲಿ ಅಪಾರ ಸಿರಿ-ಸಂಪತ್ತು ಇರಬೇಕು ಮತ್ತು ಅದರಿಂದ ತಾನು ತನ್ನ ಕುಟುಂಬದ ಪ್ರತಿಯೊಂದು ಸಂತೋಷ ಮತ್ತು ದುಃಖವನ್ನು ನಿಭಾಯಿಸಬೇಕು ಎಂಬ ಬಯಕೆ ಇರುತ್ತದೆ. ಆದರೆ ಕೆಲವೊಮ್ಮೆ ವ್ಯಕ್ತಿಯ ದುರದೃಷ್ಟವು ಆತನ ಬೆನ್ನು ಬಿಡುವುದೇ ಇಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ, ಒಬ್ಬ ವ್ಯಕ್ತಿಯು ಫಲಿತಾಂಶವನ್ನು ಪಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶ್ರೀಮಂತರಾಗುವ ಕನಸು ಎಲ್ಲೋ ಉಳಿದ್ಹೋಗುತ್ತದೆ. ಆದರೆ ಇದೀಗ ನೀವು ನಿಮ್ಮ ಈ ಕನಸನ್ನು ಬಿಟ್ಟುಕೊಡುವ ಅವಶ್ಯಕತೆ ಇಲ್ಲ.
ಜ್ಯೋತಿಷ್ಯದಲ್ಲಿ, ಐದು ರೂಪಾಯಿ ನಾಣ್ಯದಿಂದ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ, ಅವುಗಳನ್ನು ಅನುಸರಿಸಿದರೆ ವ್ಯಕ್ತಿಯ ಆದಾಯವು ಹೆಚ್ಚಾಗುತ್ತದೆ. ಮತ್ತು ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುತ್ತದೆ. ತಾಯಿ ಲಕ್ಷ್ಮಿ ಈ 5 ರೂಪಾಯಿ ನಾಣ್ಯದಿಂದ ಮಾಡಲಾಗುವ ಈ ಪರಿಹಾರದಿಂದ ಪ್ರಸನ್ನಳಾಗುತ್ತಾಳೆ ಮತ್ತು ವ್ಯಕ್ತಿಯು ಅದರ ಫಲಿತಾಂಶವನ್ನು ತಕ್ಷಣವೇ ಪಡೆಯುತ್ತಾನೆ. ರಾತ್ರೋರಾತ್ರಿ ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡುವ 5 ರೂಪಾಯಿ ನಾಣ್ಯದ ಈ ಪರಿಹಾರಗಳ ಬಗ್ಗೆ ತಿಳಿಯೋಣ ಬನ್ನಿ.
5 ರೂಪಾಯಿ ನಾಣ್ಯದ ಈ ಕ್ರಮಗಳನ್ನು ಮಾಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜಾ ಮನೆಯ ಬಳಿ ಅಕ್ಷತೆ ಅಥವಾ ದೂರ್ವ ತುಂಬಿದ ಕಲಶವನ್ನು ಪ್ರತಿಷ್ಠಾಪಿಸಿ ಮತ್ತು ಆ ಕಲಶದಲ್ಲಿ 5 ರೂಪಾಯಿಯ ನಾಣ್ಯವನ್ನು ಇರಿಸಿ. ಈಗ ಈ ಕಲಶವನ್ನು ನಿಯಮಿತವಾಗಿ ಪೂಜಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಇದನ್ನೂ ಓದಿ-Mars Transit 2023: ಈ ವರ್ಷದಲ್ಲಿ 7 ಬಾರಿ ಮಂಗಳನ ಗೋಚರ, 3 ರಾಶಿಗಳ ಜನರಿಗೆ ಭಾರಿ ಅದೃಷ್ಟ
ಇದಲ್ಲದೆ, 5 ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಸಿಂಧೂರದಿಂದ ಬರೆಯಿರಿ. ಈಗ ಈ ನಾಣ್ಯವನ್ನು ಟೆರೇಸ್ ಮೇಲೆ ಅಥವಾ ನೀರಿನ ಟ್ಯಾಂಕ್ ಬಳಿ ಇರಿಸಿ. ರಾತ್ರಿಯಿಡೀ ನಾಣ್ಯವನ್ನು ಅಲ್ಲಿಯೇ ಬಿಡಿ. ಮಾರನೆ ದಿನ ಆ ನಾಣ್ಯವನ್ನು ತಂದು ಪೂಜಾ ಮನೆಯಲ್ಲಿ ಇಡಿ. ಇದರ ನಂತರ, ತಾಯಿ ಲಕ್ಷ್ಮಿಯನ್ನು ಆಹ್ವಾನಿಸುವಾಗ, ಈ ನಾಣ್ಯವನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮತ್ತು ಅದನ್ನು ನಿಮ್ಮ ಪರ್ಸ್ ಅಥವಾ ತಿಜೋರಿಯಲ್ಲಿರಿಸಿ. ಇದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಉಳಿಯುತ್ತದೆ.
ಇದನ್ನೂ ಓದಿ-ಶೀಘ್ರದಲ್ಲಿಯೇ ಮಕರ ರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಅದೃಷ್ಟಕ್ಕೆ ಸಿಗಲಿದೆ ಭಾರಿ ಮೆರಗು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.