Hair Care Tips: ಇತ್ತೀಚೆಗೆ ತುಂಬಾ ಚಿಕ್ಕ ವಯಸ್ಸಿಗೆ ಕೂದಲು ಬಿಳಿಯಾಗುವ (Hair Whitening) ಅಥವಾ ಉದರುವ (Hair Falling) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ತುಂಬಾ ಜನಕ್ಕೆ ಈ‌ ರೀತಿ ಆಗುತ್ತಿರುವುದರಿಂದ ಕೆಲವರು ಈ ಸಮಸ್ಯೆಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದರೆ ತುಂಬಾನೇ ಚಿಕ್ಕ ವಯಸ್ಸಿಗೆ ಬಿಳಿ ಕೂದಲು, ಇಲ್ಲವೇ ಕೂದಲುದುರುವಿಕೆ ಸಮಸ್ಯೆಯಿಂದಾಗಿ ಕೆಲವರು ಚಿಂತಾಕ್ರಾಂತರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ನಮ್ಮ ಜೀವನ ಶೈಲಿ, ಆಹಾರದ ಅಭ್ಯಾಸ, ಪರಿಸರದಲ್ಲಿ ಆಗುತ್ತಿರುವ ಏರುಪೇರುಗಳು ಸೇರಿದಂತೆ ನಾನಾ ಕಾರಣಗಳಿಗೆ ಈ ರೀತಿಯ ಸಮಸ್ಯೆ ಆಗುತ್ತಿದೆ. ಆದರೆ ಇದು ಉಪೇಕ್ಷಿಸುವ ಸಮಸ್ಯೆಯೂ ಅಲ್ಲ, ಆತಂಕ ಪಡುವ ಸಮಸ್ಯೆಯೂ ಅಲ್ಲ. ನಮ್ಮ ನಿತ್ಯ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ ಅಥವಾ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಸರಳವಾದ ಮನೆ‌ಮದ್ದುಗಳನ್ನು ಮಾಡಿಕೊಂಡರೆ ಸ್ವಲ್ಪ ಮಟ್ಟಿಗಾದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.


ಕೂದಲು ಬೆಳೆಯುವ, ಬಿಳಿದಾಗುವ ಅಥವಾ ಉದುರುವ ಎಲ್ಲಾ ಸಮಸ್ಯೆ ಮತ್ತು ಪರಿಹಾರಕ್ಕೆ ಮೂಲ ಕಾರಣ ನಾವು ಬಳಸುವ ಕಂಡೀಷನರ್ ಗಳು‌ ಕಾರಣ. ಅದಕ್ಕೂ‌ ಮಿಗಿಲಾಗಿ ನಾವು ಬಳಸುವ ಎಣ್ಣೆ ಕಾರಣ. ನಾವು ಆರೋಗ್ಯಯುತವಾದ ಎಣ್ಣೆ ಬಳಸಿದರೆ ಮುಕ್ಕಾಲು ಭಾಗ ಸಮಸ್ಯೆಗೆ ಮುಕ್ತಿ ದೊರಕಿದಂತೆ. ನಾವೀಗ ಅಂತಹುದೊಂದು ಉಪಯುಕ್ತ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.


ಇದನ್ನೂ ಓದಿ- ಒಂದು ಚಮಚ ಶುಂಠಿ ರಸ ಸೇವಿಸಿದರೆ ಈ ಎಲ್ಲಾ ರೋಗಗಳಿಗೆ ಸಿಗುವುದು ಶಾಶ್ವತ ಮುಕ್ತಿ


ಕೂದಲು ಉದುರುಬಾರದು, ಕೂದಲು ಬಿಳಿಯಾಗಬಾರದು ಅಥವಾ ಈಗಾಗಲೇ ಬಿಳಿಯಾಗಿರುವ ಕೂದಲು ಕಪ್ಪಗಾಗಬೇಕು ಎಂದರೆ ಈಗ ನಾವು ಹೇಳುವ ಎಣ್ಣೆಯನ್ನು ಟ್ರೈ ಮಾಡಿ. ಸಮಸ್ಯೆ ಇರುವವರು ಮಾತ್ರ ಅಲ್ಲ, ಮನೆಮಂದಿಯೆಲ್ಲಾ ಈ ಎಣ್ಣೆಯನ್ನು ಬಳಸಬಹುದು. ಅದಕ್ಕೂ‌ ಮೊದಲು ಎಣ್ಣೆಯನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳಿ. 


ಈ ಎಣ್ಣೆ ತಯಾರಿಸಲು ಬೇಕಾಗುವ ಎರಡು ಮುಖ್ಯ ಪದಾರ್ಥಗಳೆಂದರೆ ಕಲೋಂಚಿ (ಕಪ್ಪು ಜೀರಿಗೆ-ಸೂಪರ್ ಮಾರ್ಕೆಟ್ ಅಥವಾ ಪ್ರಾವಿಷನ್ ಸ್ಟೋರ್ ಗಳಲ್ಲಿ ಸಿಗುತ್ತೆ) ಮತ್ತು ಮೆಂಥ್ಯಾ (ಮೆಂಥ್ಯಾ ಕೂದಲಿನ ಬೆಳವಣಿಗೆಗೆ ಮತ್ತು ಡ್ಯಾಂಡ್ ರಫ್ ನಿವಾರಣೆಗೆ ತುಂಬಾ ಸಹಕಾರಿ). ಎರಡನ್ನೂ ಪ್ರತ್ಯೇಕವಾಗಿ ನೈಸಾಗಿ ಪೌಡರ್ ಮಾಡಿಕೊಳ್ಳಿ. ನೆನಪಿಡಿ ಎರಡೂ ಕೂಡ ಕೂದಲಿನ ಆರೋಗ್ಯದ ದೃಷ್ಟಿಯಲ್ಲಿ ಅತಿ ಮುಖ್ಯವಾದವು.


ಕಲೋಂಚಿ ಮತ್ತು ಮೆಂಥ್ಯಾ ಪೌಡರ್ ಮಾಡಿಕೊಂಡ ಬಳಿಕ ಫ್ರೆಶ್ ಅಲೊವೇರಾವನ್ನು ತೆಗೆದುಕೊಳ್ಳಿ. ಅಲೋವೇರಾ ಕೂದಲಲ್ಲಿ ಹೊಳಪು ತರಲು ಮತ್ತು ಡ್ಯಾಂಡ್ ರಫ್ ನಿವಾರಿಸಲು ಉಪಯುಕ್ತವಾಗುವ ಅಂಶ. ಅಲೋವೇರಾವನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ತಳ ದಪ್ಪ ಇರುವ ಒಂದು ಪಾತ್ರೆಗೆ ಒಂದು ಚಮಚ ಕಲೊಂಚಿ ಪೌಡರ್, ಒಂದು ಚಮಚ ಮೆಂಥ್ಯಾ ಪೌಡರ್ ಜೊತೆಗೆ ಕಟ್ ಮಾಡಿ ಇಟ್ಟುಕೊಂಡಿರುವ ಅಲೋವೇರಾವನ್ನು ಸೇರಿಸಿ. ಅದಾದ ಬಳಿಕ ಮಾಮೂಲಿ ಕೊಬ್ಬರಿ ಎಣ್ಣೆಯನ್ನು ಬೆರಸಿ. ಇದರೊಂದಿಗೆ ಬಾದಾಮಿ ಎಣ್ಣೆಯನ್ನು ಬೇಕಾದರೂ ಸೇರಿಸಬಹುದು, ಅದು ಆಪ್ಷನಲ್ ಬೇಕಿದ್ದರೆ ಸೇರಿಸಬಹುದು ಅಥವಾ ಬಿಡಬಹುದು. ಏಕೆಂದರೆ ಬಾದಾಮಿ ಎಣ್ಣೆಯಲ್ಲಿ ಮಿಟಮಿನ್ ಇ ಸಮೃದ್ಧವಾಗಿ ಇರುತ್ತೆ. ಅದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುತ್ತೆ. ಅದೇ ರೀತಿ ಆಲೀವ್ ಆಯಿಲ್ ಅನ್ನು ಬೇಕಿದ್ದರೆ ಸೇರಿಸಬಹುದು. 


ಇದನ್ನೂ ಓದಿ- ತಿಂಗಳಿಗೆ 10 ಕೆಜಿ ತೂಕ ಇಳಿಸಬೇಕಾ... ನಿಮಗೆ ನಿರಾಸೆ ಮಾಡದ 'ಡಯಟ್ ಪ್ಲಾನ್' ಇಲ್ಲಿದೆ!


ಒಂದು ಚಮಚ ಕಲೊಂಚಿ ಪೌಡರ್, ಒಂದು ಚಮಚ ಮೆಂಥ್ಯಾ ಪೌಡರ್ ಜೊತೆಗೆ ಇಂತಿಷ್ಟೇ ಎಣ್ಣೆ ಹಾಕಿಕೊಳ್ಳಬೇಕು ಅಂತೇನೂ ಇಲ್ಲ. ಕಾಲ್ ಲೀಟರ್ ವರೆಗೆ ಕೊಬ್ಬರಿ ಎಣ್ಣೆ ಬಾದಾಮಿ ಎಣ್ಣೆ ಮತ್ತು ಆಲೀವ್ ಆಯಿಲ್ ಎಣ್ಣೆ ಸ್ವಲ್ಪ ಮಾತ್ರ ಹಾಕಿಕೊಳ್ಳಿ. ಜೊತೆಗೆ ಸ್ವಲ್ಪ ಅರಳೆಣ್ಣೆ ಕೂಡ ಹಾಕಿಕೊಳ್ಳಬಹುದು.  ಅರಳೆಣ್ಣೆಯಿಂದ ದೇಹ ತಂಪಾಗುತ್ತೆ. ಇಷ್ಟೆಲ್ಲಾವನ್ನು ತೆಗೆದುಕೊಂಡ ಬಳಿಕ ಸ್ಟೌವ್ ಮೇಲೆ ಇಟ್ಟು 5 ನಿಮಿಷ ಕುದಿಸಿದರೆ ಸಾಕು ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸಬಹುದಾದ ಎಣ್ಣೆ ರೆಡಿಯಾಗುತ್ತೆ.


5 ನಿಮಿಷ ಕುದಿಸಿ ಎಣ್ಣೆ ತಣ್ಣಗಾದ ಬಳಿಕ ಇದನ್ನು ಸೋಸಿ ಒಂದು ಬಾಟಲಿಯಲ್ಲಿ ಶೇಖರಿಸಿಡಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಬಿಳಿಯಾಗುವ ಅಥವಾ ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಷ್ಡೇಯಲ್ಲ, ಇದರಿಂದ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಕ್ಕಂತಾಗುತ್ತೆ. ಈ ಎಣ್ಣೆಯನ್ನು  ತಲೆಗೆ ಹಚ್ಚಿ ಮರುದಿನ ತಲೆ ಸ್ನಾನ ಮಾಡುವುದರಿಂದ ಪರಿಣಾಮ ಹೆಚ್ಚು. ನೆನಪಿಡಿ ಇದನ್ನು ಕೂದಲಿನ ಸಮಸ್ಯೆ ಇರುವವರು ಮಾತ್ರವಲ್ಲ,  ಮನೆ ಮಂದಿಯೆಲ್ಲಾ ಬಳಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.