How to get quick sleep : ಆರೋಗ್ಯಕರ ದೇಹಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ. ಕೆಲವರಿಗೆ ತಡ ರಾತ್ರಿವರೆಗೆ ನಿದ್ದೆ ಬರುವುದಿಲ್ಲ ಎನ್ನುವು ದೂರು ಇರುತ್ತದೆ. ಅಥವಾ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ಗಾಢ ನಿದ್ದೆ ಬರುವುದೇ ಇಲ್ಲ ಎಂದು ಹೇಳುವವ ಅನೇಕ ಮಂದು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ವಾಸ್ತವವಾಗಿ ಒಳ್ಳೆಯ ನಿದ್ರೆಗೆ ಅಗತ್ಯವಾದ ಐದು ಕ್ರಮಗಳನ್ನು ಮನುಷ್ಯ ನಿರ್ಲಕ್ಷಿಸುತ್ತಾನೆ. ಪರಿಣಾಮವಾಗಿ, ಎಷ್ಟೇ ಬಯಸಿದರೂ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.  ಅಮೆರಿಕದ ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ನರವಿಜ್ಞಾನ ವಿಭಾಗದ ಪ್ರೊಫೆಸರ್ ಮ್ಯಾಥ್ಯೂ ವೋಲ್ಕರ್ ಅವರು ಐದು ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ನಿದ್ರೆ ಮಾಡಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಈ ಮೂಲಕ ತನ್ನನ್ನು ತಾನು ಆರೋಗ್ಯವಾಗಿರಿಸಿಕೊಳ್ಳಬಹುದು ಎನ್ನುವುದನ್ನು ಕೂಡಾ ಹೇಳಿದ್ದಾರೆ.  ಹಾಗಿದ್ದರೆ ಆ 5 ಪರಿಹಾರಗಳು ಯಾವುವು ? 


COMMERCIAL BREAK
SCROLL TO CONTINUE READING

ನಿಯಮ ಪಾಲನೆ : ಉತ್ತಮ ನಿದ್ರೆಗಾಗಿ, ನಿಯಮಿತ ಸಮಯಕ್ಕೆ ಮಲಗುವುದು ಮತ್ತು ನಿಯಮಿತ ಸಮಯಕ್ಕೆ ಎದ್ದೇಳುವುದು ಬಹಳ  ಮುಖ್ಯ. ಹಾಗೆ ಮಾಡದೇ ಹೋದರೆ ನಿದ್ರೆಯ ಕ್ರಮಬದ್ಧತೆಯನ್ನು ಮುರಿಯುತ್ತದೆ. ಇದು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


ಇದನ್ನೂ ಓದಿ : ಕೂದಲು ದಟ್ಟವಾಗಿ ಮತ್ತು ಗಾಢವಾಗಿ ಬೆಳೆಯಲು ಈ ಬಿಳಿ ವಸ್ತು ಬಳಸಿ !


ಬೆಳಕು : ಮಲಗುವ ಒಂದು ಗಂಟೆ ಮೊದಲು ಕೋಣೆಯ ದೀಪಗಳನ್ನು ಆಫ್ ಮಾಡಿ ಅಥವಾ ದೀಪಗಳನ್ನು ಮಂದಗೊಳಿಸಿ. ಇದು ಮೆದುಳಿನಲ್ಲಿ ಮೆಲಟೋನಿನ್ ಸ್ರವಿಸುವಿಕೆಯನ್ನು ಉಂಟುಮಾಡುತ್ತದೆ. ಇದು ಉತ್ತಮ ನಿದ್ರೆಗೆ ಪ್ರಮುಖ ಅಂಶವಾಗಿದೆ. ಮಲಗುವ ಮುನ್ನ ಗ್ಯಾಜೆಟ್‌ಗಳನ್ನು ಬಳಸಬೇಡಿ.


ಸಮತೋಲಿತ ತಾಪಮಾನ : ಮಲಗುವ ಕೋಣೆಯ ಉಷ್ಣತೆಯು ಸಮತೋಲನದಲ್ಲಿರಬೇಕು. ಕೊಠಡಿ ತುಂಬಾ ಬಿಸಿಯಾಗಿರಬಾರದು ಅಥವಾ ತಂಪಾಗಿರಬಾರದು. ಕೋಣೆಯ ಉಷ್ಣತೆ ಏನೇ ಇರಲಿ, ಮೆದುಳು ಆ ತಾಪಮಾನವನ್ನು 1-2 ಡಿಗ್ರಿ ಸೆಲ್ಸಿಯಸ್ ಕಡಿಮೆ ಮಾಡುತ್ತದೆ. ತಂಪಾದ ಕೋಣೆಯಲ್ಲಿ ಮಲಗುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ : ಜಿಮ್, ಡಯಟ್ ಜಂಜಾಟವೇ ಬೇಡ ! ಈ ಹಣ್ಣುಗಳನ್ನು ಸೇವಿಸಿದರೆ ಸಾಕು ಸಣ್ಣಗಾಗುವುದು ದುಂಡು ಹೊಟ್ಟೆ


ಆಲ್ಕೋಹಾಲ್ ಸೇವನೆಯನ್ನು ತಪ್ಪಿಸುವುದು ಮುಖ್ಯ: ಮದ್ಯಪಾನ ಮಾಡಿ ಮಲಗುವ ಜನರು ಗಾಢ ನಿದ್ದೆಗೆ ಜಾರುವುದೇ ಇಲ್ಲ. ಹಾಗೆಯೇ ರಾತ್ರಿಯ ಊಟದ ನಂತರ ಚಹಾ ಅಥವಾ ಕಾಫಿ ಕುಡಿಯುವುದರಿಂದ ನಿದ್ರೆ  ಹಾಳಾಗುತ್ತದೆ. ಬೆಳಿಗ್ಗೆ ಎದ್ದಾಗ ವ್ಯಕ್ತಿಯು ಉಲ್ಲಾಸದಿಂದ ಯಾರಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಇನ್ನು ಬೆಳಿಗ್ಗೆ ಎದ್ದ ತಕ್ಷಣ ಚಹಾ ಮತ್ತು ಕಾಫಿ ಕುಡಿಯುವುದರಿಂದ ವ್ಯಕ್ತಿಯು ಕೆಫೀನ್‌ಗೆ ವ್ಯಸನಿಯಾಗುತ್ತಾನೆ.


ನೀವು ಎದ್ದ ತಕ್ಷಣ ಹಾಸಿಗೆಯಿಂದ ಅಂತರವನ್ನು ಕಾಯ್ದುಕೊಳ್ಳಿ: ಬೆಳಿಗ್ಗೆ ಎದ್ದ ನಂತರ ಹಾಸಿಗೆಯ ಮೇಲೆ ಕುಳಿತುಕೊಳ್ಳಬೇಡಿ. ಇದು ನಿದ್ರೆ ಪ್ರಾಬಲ್ಯಕ್ಕೆ ಕಾರಣವಾಗಬಹುದು. ಮತ್ತೆ ನಿದ್ರಿಸುವುದನ್ನು ತಪ್ಪಿಸಲು, ಮಲಗಿರುವ ಕೊನೆಯಿಂದ ಎದ್ದು ಹೊರಗೆ ಬನ್ನಿ. ಏನನ್ನಾದರೂ ಓದಿ. ಒಂದು ವೇಳೆ ಬೆಳಿಗ್ಗೆ ಬೆಳಿಗ್ಗೆ ಓದುವುದು ನಿಮಗೆ ಇಷ್ಟವಿಲ್ಲದೆ ಹೋದರೆ ಇನ್ನೊಂದು ಕೋಣೆಯಲ್ಲಿ ಧ್ಯಾನ ಮಾಡಿ. ಹಾಸಿಗೆಯಿಂದ ಎದ್ದ ತಕ್ಷಣ ಮೊಬೈಲ್ ಪರದೆಯತ್ತ ಮುಖ ಮಾಡಬೇಡಿ. 


ಇದನ್ನೂ ಓದಿ : ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೇವಲ ಈ ಪದಾರ್ಥಗಳಿದ್ದರೆ ಸಾಕು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.