Sapta Dhanya Remedy: ಸಾಮಾಹ್ಯವಾಗಿ ಶನಿಯನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಸೂರ್ಯಪುತ್ರ ಶನಿದೇವ ಉತ್ತಮ ಸ್ಥಾನದಲ್ಲಿದ್ದರೆ, ಆ ವ್ಯಕ್ತಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ಶನಿಯ ಪ್ರಕೊಪದಿಂದ ಯಾವುದೇ ವ್ಯಕ್ತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೊಂದೆಡೆ ಯಾರ ಜೀವನದಲ್ಲಿ ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳ ಕಾಟ ನಡೆದಿದೆಯೋ, ಆ ವ್ಯಕ್ತಿಗಳ ಜೀವನದಲ್ಲಿ ನೌಕರಿ-ವ್ಯಾಪಾರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿರಂತರವಾಗಿ ಎದುರಾಗುತ್ತಲೇ ಇರುತ್ತವೆ. ಜೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ಮೆಚ್ಚಿಸಲು ಹಾಗೂ ಶನಿ ಪ್ರಕೊಪದಿಂದ ಪಾರಾಗಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನಿಗೆ ಸಪ್ತಧಾನ್ಯ ಅಂದರೆ ಏಳು ಬಗೆಯ ಧಾನ್ಯಗಳೆಂದರೆ ತುಂಬಾ ಇಷ್ಟ ಎನ್ನಲಾಗುತ್ತದೆ. ಇವುಗಳಲ್ಲಿ ಗೋಧಿ, ಬಾರ್ಲಿ, ಅಕ್ಕಿ, ಎಳ್ಳು, ನವಣೆ, ಉದ್ದು ಮತ್ತು ಹೆಸರು ಬೇಳೆಗಳಂತಹ ಧಾನ್ಯಗಳು ಶಾಮೀಲಾಗಿವೆ. ತಮ್ಮ ಜಾತಕದಲ್ಲಿ ಸಾಡೆಸಾತಿ ಅಥವಾ ಶನಿಯ ಎರಡೂವರೆ ವರ್ಷಗಳ ಕಾಟವನ್ನು ಹೊಂದಿರುವ ಜನರು, ಅವರು ಶನಿ ದೇವರಿಗೆ ಸಪ್ತಧಾನ್ಯವನ್ನು ಅರ್ಪಿಸಬೇಕು. ಇದರಿಂದ ಶನಿದೇವನ ಕ್ರೋಧದಿಂದ ಪಾರಾಗಬಹುದು.

ಸಪ್ತಧಾನ್ಯ ಪರಿಹಾರ- ಶನಿವಾರದಂದು ಒಂದು ಕೆಜಿ ಸಪ್ತಧಾನ್ಯದ ಜೊತೆಗೆ  ಅರ್ಧ ಕೆಜಿ ಎಳ್ಳು, ಅರ್ಧ ಕೆಜಿ ಬ್ಲಾಕ್ ಗ್ರಾಮ್, ಸ್ವಲ್ಪ ಲೋಹದ ಮೊಳೆ ಮತ್ತು ಸಾಸಿವೆ ಎಣ್ಣೆಯನ್ನು ನೀಲಿ ಬಟ್ಟೆಯಲ್ಲಿ ಕಟ್ಟಿ ಶನಿದೇವರ ದೇವಸ್ಥಾನದಲ್ಲಿ ದಾನ ಮಾಡಿ. ಹೀಗೆ ಮಾಡುವುದರಿಂದ ಶನಿದೇವನ ಕೃಪೆಯಿಂದ ಎಲ್ಲಾ ಸಂಕಷ್ಟಗಳು ದೂರಾಗುತ್ತವೆ.


ಶನಿದೇವನಿಗೆ ಸಪ್ತಧಾನ್ಯ ಏಕೆ ಇಷ್ಟ?
ಇದಕ್ಕೆ ಸಂಬಂಧಿಸಿದ ಪುರಾಣಗಳಲ್ಲಿ ಒಂದು ದಂತಕಥೆ ಇದೆ, ಅದರ ಪ್ರಕಾರ ಶನಿ ದೇವ್ ಒಮ್ಮೆ ತುಂಬಾ  ಚಿಂತಿತರಾಗಿದ್ದರು. ಅವನು ಚಿಂತಾಕ್ರಾಂತನಾಗಿರುವುದನ್ನು ಕಂಡು ನಾರದ ಮುನಿಯು ಅದರ ಕಾರಣವನ್ನು ಕೇಳುತ್ತಾರೆ. ಶನಿದೇವನು ಏಳು ಋಷಿಗಳಿಗೆ ಅವರ ಕರ್ಮಗಳಿಗೆ ಅನುಗುಣವಾಗಿ ನ್ಯಾಯವನ್ನು ನೀಡಬೇಕಾಗಿದೆ ಎಂದು ಹೇಳುತ್ತಾರೆ. ಆದರೆ ಇದಕ್ಕಾಗಿ ಮೊದಲ ಏಳು ಋಷಿಗಳನ್ನು ಪರೀಕ್ಷಿಸಬೇಕು ಎನ್ನುತ್ತಾರೆ. ನಾರದ ಮುನಿಯ ಸಲಹೆಯ ಮೇರೆಗೆ ಶನಿ ದೇವರು  ಬ್ರಾಹ್ಮಣನ ವೇಷ ಧರಿಸಿ ಸಪ್ತ ಋಷಿಗಳನ್ನು ಅಂದರೆ ಏಳು ಋಷಿಗಳ ಬಳಿ ತಲುಪುತ್ತಾರೆ. ಅವರು ಋಷಿಗಳೊಂದಿಗೆ ತನ್ನ ಬಗ್ಗೆಯೇ ಅಂದರೆ ಶನಿ ದೇವನ ಬಗ್ಗೆ ದೂರನ್ನು ನೀಡುತ್ತಾರೆ. ಆದರೆ ಎಲ್ಲಾ ಏಳು ಋಷಿಗಳು ಶನಿದೇವನು ಒಬ್ಬರ ಕರ್ಮಗಳ ಫಲವನ್ನು ನೀಡುವವನು ಮತ್ತು ಈ ರೀತಿ ಫಲವನ್ನು ನೀಡುವುದು ಸಮರ್ಥನೀಯವಾಗಿದೆ ಎಂದು ಹೇಳುತ್ತಾರೆ.


ಇದನ್ನೂ ಓದಿ-Perl Disadvantages: ಈ ರಾಶಿಗಳ ಜನರು ಮರೆತೂ ಕೂಡ ಮುತ್ತನ್ನು ಧರಿಸಬಾರದು


ಶನಿದೇವನು ತನ್ನ ಬಗ್ಗೆ ಏಳು ಋಷಿಗಳಿಂದ ಅಂತಹ ಮಾತುಗಳನ್ನು ಕೇಳಿ ಪ್ರಸನ್ನರಾಗುತ್ತಾರೆ ಮತ್ತು ಅವರ ಮುಂದೆ ಪ್ರತ್ಯಕ್ಷರಾಗುತ್ತಾರೆ. ನಂತರ ಏಳು ಋಷಿಗಳು ಪ್ರತಿ ಧಾನ್ಯದೊಂದಿಗೆ ಶನಿ ದೇವನನ್ನು ಪೂಜಿಸುತ್ತಾರೆ. ಇದರಿಂದ ಶನಿ ದೇವ ಪ್ರಸನ್ನನಾಗುತ್ತಾರೆ. ನನ್ನನ್ನು ಏಳು ಧಾನ್ಯಗಳಿಂದ ಪೂಜಿಸುವವನು ನನ್ನ ಕೋಪಕ್ಕೆ ಗುರಿಯಾಗುವುದಿಲ್ಲ ಎಂದು ಶನಿದೇವ ಅವರಿಗೆ ಮಾತುಕೊಡುತ್ತಾರೆ. ಹೀಗಾಗಿ ಶನಿಯ ಸಾಡೇಸಾತಿ ಮತ್ತು ಎರಡೂವರೆ ವರ್ಷಗಳ ಕಾಟವನ್ನು ತಪ್ಪಿಸಲು ಸಪ್ತಧಾನ್ಯ ಅರ್ಪಿಸುವ ವಿಧಾನವಿದೆ.


ಇದನ್ನೂ ಓದಿ-Hybrid Surya Grahan 2023: ಈ ದಿನ ಗೋಚರಿಸಲಿದೆ ಸೂರ್ಯ ಗ್ರಹಣ, 100 ವರ್ಷಗಳಲ್ಲಿ ಇಂತಹ ಗ್ರಹಣ ಇದೆ ಮೊದಲು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.