Eating Food Rules: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಾವು ಸೇವಿಸುವಆಹಾರದ ಪರಿಣಾಮ ನಮ್ಮ ಆರೋಗ್ಯ ಮತ್ತು ಸಮೃದ್ಧಿ ಎರಡರ ಮೇಲೂ ಇರುತ್ತದೆ. ನೀವು ಹೇಗೆ ಊಟ ಮಾಡುತ್ತಿದ್ದೀರಿ, ಯಾರೊಂದಿಗೆ ಊಟ ಮಾಡುತ್ತಿರುವಿರಿ, ಊಟ ಮಾಡುವಾಗ ಏನು ಮಾಡುತ್ತಿರುವಿರಿ, ಈ ಎಲ್ಲದರ ಬಗ್ಗೆ ಕಾಳಜಿವಹಿಸಬೇಕು. ಇವೆಲ್ಲವುಗಳ ಬಗ್ಗೆ ಕಾಳಜಿ ವಹಿಸದೆ ಹೋದಲ್ಲಿ, ಒಬ್ಬ ವ್ಯಕ್ತಿ ಅನಾರೋಗ್ಯ ಮತ್ತು ಬಡತನಕ್ಕೆ ತುತ್ತಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇಂದು ನಾವು ಆಹಾರ ಸೇವನೆಯ ವೇಳೆ ಅನುಸರಿಸಬೇಕಾದ ವಿಶೇಷ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇದರಿಂದ ವ್ಯಕ್ತಿ ದೀರ್ಘ ಕಾಲದವರೆಗೆ ಆರೋಗ್ಯದಿಂದಿರಬೇಕು.


COMMERCIAL BREAK
SCROLL TO CONTINUE READING

ಅನ್ನವನ್ನು ಅವಮಾನಿಸಬೇಡಿ- ಶಾಸ್ತ್ರಗಳ ಪ್ರಕಾರ ಬಡಿಸಿದ ಅನ್ನವನ್ನು ಎಂದಿಗೂ ಕೂಡ ಅವಮಾನಿಸಬಾರದು ಎಂದು ಹೇಳಲಾಗಿದೆ. ಅನ್ನ ಸಿಗುವುದು ಒಂದು ಅದೃಷ್ಟದ ಸಂಕೇತವಾಗಿದೆ. ಬಡಿಸುವ ಆಹಾರದಲ್ಲಿ ಅನೇಕ ಲೋಪದೋಷಗಳನ್ನು ತೆಗೆದು ತಟ್ಟೆಯನ್ನು ಮುಂಭಾಗದಿಂದ ಸರಿಸುವವರನ್ನು ನಾವು ಹಲವು ಬಾರಿ ನೋಡುತ್ತೇವೆ. ಇದು ಆಹಾರಕ್ಕೆ ಎಸಗುವ ಅವಮಾನವಾಗಿದೆ. ಈ ರೀತಿ ಮಾಡುವುದರಿಂದ ತಾಯಿ ಅನ್ನಪೂರ್ಣೆ ಮುನಿಸಿಕೊಳ್ಳುತ್ತಾಳೆ. ಇದಲ್ಲದೆ, ಊಟದ ಸಮಯದಲ್ಲಿ ತಲೆಯ ಮೇಲೆ ಕ್ಯಾಪ್ ಅಥವಾ ಪೇಟವನ್ನು ಧರಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೆ, ದಕ್ಷಿಣ ದಿಕ್ಕಿನಲ್ಲಿ ಆಹಾರವನ್ನು ಸೇವಿಸಬಾರದು ಮತ್ತು ಬೂಟುಗಳನ್ನು ಸಹ ಧರಿಸಬಾರದು.


ನಿಮ್ಮ ಮನಸ್ಸಿನಲ್ಲಿ ಇಂತಹ ಆಲೋಚನೆಗಳನ್ನು ತರಬೇಡಿ- ಆಹಾರ ಸೇವಿಸುವಾಗ ಮರೆತೂ ಕೂಡ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತರಬೇಡಿ. ಹಲವು ಬಾರಿ ಆಹಾರ ನೋಡಿದ ತಕ್ಷಣ ಕೆಲ ಜನರು ತುಂಬಾ ಮಸಾಲೆ, ಎಣ್ಣೆಯುಕ್ತ ಎಂದು ಹೇಳಲು ಪ್ರಾರಂಭಿಸುತ್ತಾರೆ. ನೋಡಲು ಚೆನ್ನಾಗಿಲ್ಲ ಎನ್ನುತ್ತಾರೆ. ನಿಮ್ಮ ಮನಸ್ಸಿನಲ್ಲಿ ಇಂತಹ ಆಲೋಚನೆಗಳನ್ನು ತರಬೇಡಿ. ಇದನ್ನು ಮಾಡುವುದರಿಂದ, ನೀವು ಆಹಾರವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ ಅಥವಾ ಅಥವಾ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.


ಇಂತಹ ಜನರ ಮನೆಯಲ್ಲಿ ಎಂದಿಗೂ ಕೂಡ ಊಟ ಮಾಡಬೇಡಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ನಾನ ಮಾಡದೆ ಇರುವ, ದೇವರ ಪೂಜೆ ಮಾಡದೆ ಇರುವ, ದೇವರಿಗೆ ಅನ್ನವನ್ನು ಅರ್ಪಿಸದೆ ಊಟ ಊಟ ಮಾಡುವವರ ಮನೆಯಲ್ಲಿ ಅಥವಾ ಅವರ ಜೊತೆಗೆ ಊಟವನ್ನು ಮಾಡಬಾರರು ಎನ್ನಲಾಗಿದೆ. ಈ ರೀತಿ ಮಾಡುವವರನ್ನು ಭಗವದ್ಗೀತೆಯಲ್ಲಿ ಕಳ್ಳರು ಎಂದು ಹೇಳಲಾಗಿದೆ. ಅಲ್ಲದೆ, ನಿಮ್ಮನ್ನು ಪ್ರೀತಿಸದೇ ಇರುವ ವ್ಯಕ್ತಿಯ ಕೈಯಿಂದ ಬದಿಸಲಾಗಿರುವ ಆಹಾರವನ್ನು ಎಂದಿಗೂ ಗ್ರಹಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ.


ಇದನ್ನೂ ಓದಿ-Garuda Purana: ಗರುಡ ಪುರಾಣದ ಈ ಸಂಗತಿಗಳು ನೀವು ಮುಂದಿನ ಜನ್ಮದಲ್ಲಿ ಏನಾಗುವಿರಿ ಎಂಬುದನ್ನು ಹೇಳುತ್ತವೆ!


ಈ ದಿಕ್ಕಿನತ್ತ ಮುಖಮಾಡಿ ಆಹಾರ ಸೇವಿಸಬೇಡಿ- ದಕ್ಷಿಣಾಭಿಮುಖವಾಗಿ ಆಹಾರ ಸೇವಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಿ. ಇದರೊಂದಿಗೆ, ಊಟವನ್ನು ಪ್ರಾರಂಭಿಸುವ ಮೊದಲು ನಿಮ್ಮ ಕೈ ಮತ್ತು ಕಾಲುಗಳನ್ನು ಸರಿಯಾಗಿ ತೊಳೆಯಿರಿ. ದುಃಖದ ಮನಸ್ಸು ಮತ್ತು ಅತೃಪ್ತ ಮನಸ್ಸಿನಿಂದ ತಿನ್ನುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-Samudrik Shastra: ದೇಹದ ಈ ಅಂಗದ ಮೇಲೆ ಕಪ್ಪು ಮಚ್ಚೆ ಇರುವ ಮಹಿಳೆ, ತನ್ನ ಬಾಳಸಂಗಾತಿಯ ಭಾಗ್ಯವನ್ನೇ ಬದಲಾಯಿಸುತ್ತಾರೆ

(ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.