White Hair Remedy : ಏನನ್ನೂ ಹಚ್ಚಬೇಕೆಂದಿಲ್ಲ, ಈ ಪದಾರ್ಥಗಳನ್ನು ಸೇವಿಸಿದರೆ ಸಾಕು ಬಿಳಿ ಕೂದಲು ಕಪ್ಪಾಗಲು
Home Remedy for white hair : ಕೂದಲ ಆರೈಕೆ ಎಂದರೆ ಕೇವಲ ಆಯಿಲ್ ಮಸಾಜ್, ಶಾಂಪೂ ಮಾಡುವುದು ಮತ್ತು ಸ್ನಾನ ಮಾಡುವುಡು, ಸ್ಪಾ ಮಾಡುವುದು ಮಾತ್ರವಲ್ಲ. ನಾವು ಏನನ್ನು ತಿನ್ನುತ್ತೇವೆ, ಯಾವ ರೀತಿಯ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆಯೂ ನಮ್ಮ ಕೂದಲ ಆರೈಕೆ ಅಡಗಿರುತ್ತದೆ.
Food to turn white hair into black : ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಂಡರೆ ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ. ಬಿಳಿ ಕೂದಲು ಕಾಣಿಸಿಕೊಳ್ಳುವ ಹಿಂದೆ ನಾನಾ ಕಾರಣಗಳು ಅಡಗಿರುತ್ತವೆ. ಅವುಗಳಲ್ಲಿ ಬಹಳ ಮುಖ್ಯವಾದ ಕಾರಣವೆಂದರೆ, ಅನುವಂಶಿಕತೆ. ಇದನ್ನು ಹೊರತುಪಡಿಸಿ, ವಿಟಮಿನ್ ಕೊರತೆ ಮತ್ತು ಜೀವನಶೈಲಿಯಿಂದಲೂ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ. ಕೂದಲ ಆರೈಕೆ ಎಂದರೆ ಕೇವಲ ಆಯಿಲ್ ಮಸಾಜ್, ಶಾಂಪೂ ಮಾಡುವುದು ಮತ್ತು ಸ್ನಾನ ಮಾಡುವುದು, ಸ್ಪಾ ಮಾಡುವುದು ಮಾತ್ರವಲ್ಲ. ನಾವು ಏನನ್ನು ತಿನ್ನುತ್ತೇವೆ, ಯಾವ ರೀತಿಯ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆಯೂ ನಮ್ಮ ಕೂದಲ ಆರೈಕೆ ಅಡಗಿರುತ್ತದೆ. ನಮ್ಮ ಕೂದಲಿನ ಆರೋಗ್ಯ ನಾವು ನಿತ್ಯ ಸೇವಿಸುವ ಆಹಾರಗಳ ಮೇಲೆ ಅವಲಂಬಿತವಾಗಿದೆ.
ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಲು ಸಹಾಯ ಮಾಡುವ ಆಹಾರಗಳು :
ಸಿಹಿ ಗೆಣಸು :
ಸಿಹಿ ಗೆಣಸನ್ನು ಇಂಗ್ಲಿಷ್‌ನಲ್ಲಿ ಸ್ವೀಟ್ ಪೊಟ್ಯಾಟೊ ಎಂದು ಕರೆಯುತ್ತಾರೆ. ಸಿಹಿ ಗೆಣಸಿನಲ್ಲಿ ಬೀಟಾ ಕೆರಾಟಿನ್ ಸಮೃದ್ಧವಾಗಿದೆ. ಈ ಪೋಷಕಾಂಶವು ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಸಿಹಿ ಗೆಣಸು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದರೊಂದಿಗೆ ಕೂದಲು ಉದುರುವುದನ್ನು ತಡೆಯುತ್ತದೆ.
ಇದನ್ನೂ ಓದಿ : Blood sugar Control tips : ಈ ಎಲೆಯನ್ನು ರಾತ್ರಿ ಹೊತ್ತು ಜಗಿದು ತಿಂದರೆ ಬ್ಲಡ್ ಶುಗರ್ ಕಡಿಮೆ ಮಾಡಲು ಔಷಧಿಯೇ ಬೇಕಿಲ್ಲ!
ಅರಿಶಿನ:
ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಬಿಳಿ ಕೂದಲಿಗೆ ಕಾರಣವಾಗುವ ಪದರಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಕೂದಲು ಬಿಳಿಯಾಗದಂತೆ ಕಾಪಾಡಿಕೊಳ್ಳಬಹುದು.
ಆವಕಾಡೊ:
ಆವಕಾಡೊ ಹಣ್ಣಿನಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದು ಕೂದಲನ್ನು ಬೇರಿನಿಂದಲೇ ರಕ್ಷಿಸುತ್ತದೆ. ಕೂದಲನ್ನು ಕಾಂತಿಯುತವಾಗಿಸಲು ಕೂಡಾ ಇದು ಸಹಾಯ ಮಾಡುತ್ತದೆ.
ಅಕ್ಕಿಯನ್ನು ನೆನೆಸಿದ ನೀರು:
ಕೂದಲಿಗೆ ಅಕ್ಕಿ ನೆನೆಸಿದ ನೀರನ್ನು ಬಳಸುವ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅಕ್ಕಿ ನೆನೆಸಿದ ನೀರು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಇದರಲ್ಲಿರುವ ಅಮೈನೋ ಆಮ್ಲಗಳು ಮತ್ತು ವಿಟಮಿನ್ ಗಳು ಕೂದಲ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Cinnamon Tea Benefits: ತೂಕ ಇಳಿಕೆ ಅಷ್ಟೇ ಅಲ್ಲ, ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೇ ಈ ಚಹಾ!
ಕಪ್ಪು ಎಳ್ಳು :
ಕಪ್ಪು ಎಳ್ಳಿನಲ್ಲಿ ಕಬ್ಬಿಣ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಇದನ್ನು ಸಲಾಡ್, ಮೊಸರು, ಅನ್ನ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಲ್ಲಿ ಬೆರೆಸಿ ಬಳಸಬಹುದು. ಕಪ್ಪು ಎಳ್ಳು ಕೂದಲು ಬಿಳಿಯಾಗಲು ಕಾರಣವಾಗುವ ಜೀವಕೋಶಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.