ಬೆಂಗಳೂರು: ಕರೀನಾ ಕಪೂರ್, ಕರಿಷ್ಮಾ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಸಲಹೆ ನೀಡುವ ಪೌಷ್ಟಿಕಾಂಶ ತಜ್ಞೆ ರುಜುತಾ ದಿವೇಕರ್ ಕೂದಲು ಉದುರುವುದನ್ನು ತಡೆಯಲು 3 ಸಿಂಪಲ್ ಸಲಹೆಗಳನ್ನು ನೀಡಿದ್ದಾರೆ. ದಿನದ ಯಾವ ಸಮಯದಲ್ಲಿ 1 ಚಮಚ ಬೆಣ್ಣೆಯನ್ನು ತಿನ್ನುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಿಸಬಹುದು ಎಂಬ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಕರೋನಾದಿಂದ ಚೇತರಿಸಿಕೊಂಡ ನಂತರ, ಹೆಚ್ಚಿನ ಜನರು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೋವಿಡ್ ನಂತರ ಕೂದಲುದುರುವ ಸಮಸ್ಯೆಯನ್ನು ನಿಲ್ಲಿಸಲು ಪೌಷ್ಟಿಕತಜ್ಞರು ಈ ಸಲಹೆಗಳನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಕೂದಲು ಉದುರುವುದನ್ನು ನಿಲ್ಲಿಸಲು ಈ 3 ಸಲಹೆಗಳನ್ನು ಅನುಸರಿಸಿ  (Tips to Stop Hair Fall):
ಕರೋನಾದಿಂದ ಚೇತರಿಸಿಕೊಂಡ ನಂತರ, ದೇಹದಲ್ಲಿ ಶಕ್ತಿಯನ್ನು ಮರಳಿ ತರಲು ಮತ್ತು ಕೂದಲನ್ನು ಬಲಪಡಿಸಲು ನೀವು ಈ ಮೂರು ಸಲಹೆಗಳನ್ನು ಅನುಸರಿಸಬೇಕು ಎಂದು ಸೆಲೆಬ್ರಿಟಿ ಪೌಷ್ಟಿಕತಜ್ಞರಾದ ರುಜುತಾ ದಿವೆಕರ್ ಹೇಳಿದರು.


ಇದನ್ನೂ ಓದಿ- Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ


1. ಬೆಳಗಿನ ಉಪಾಹಾರದಲ್ಲಿ, ತಪ್ಪದೇ ಒಂದು ಚಮಚ ಬೆಣ್ಣೆಯನ್ನು (Butter) ತಿನ್ನಿರಿ:- ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ನಲ್ಲಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಸೆಲೆಬ್ರಿಟಿ ಪೌಷ್ಟಿಕ ತಜ್ಞರಾದ ರುಜುತಾ ದಿವೆಕರ್, ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ನಿತ್ಯ ಬ್ರೇಕ್ ಫಾಸ್ಟ್ ಸಮಯದಲ್ಲಿ ಒಂದೇ ಒಂದು ಚಮಚ ಬೆಣ್ಣೆಯನ್ನು ತಿನ್ನಲು ಸಲಹೆ ನೀಡಿದ್ದಾರೆ.


2. ಕೂದಲು ಉದುರುವುದನ್ನು ತಡೆಗಟ್ಟಲು ರಾತ್ರಿ ಹೊತ್ತು ಹೆಸರುಬೇಳೆ, ಅಕ್ಕಿ ಮತ್ತು ತುಪ್ಪ ತಿನ್ನುವಂತೆ ರುಜುತಾ ದಿವೆಕರ್ ತಿಳಿಸಿದ್ದಾರೆ. 


3. ಇದಲ್ಲದೇ, ಕೂದಲುದುರುವ ಸಮಸ್ಯೆ (Hairfall Problem) ನಿವಾರಣೆಗೆ ನೀವು ಪನೀರ್ ಪರಾಠವನ್ನು ಕೂಡ ತಿನ್ನಬಹುದು.


ಇದನ್ನೂ ಓದಿ- Hair Care Tips: ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಹಾಕಿ ದಟ್ಟವಾದ ಕೂದಲು ನಿಮ್ಮದಾಗಿಸಿ


ನೀವು ಕೂದಲು ಉದುರುವುದನ್ನು ನಿಲ್ಲಿಸಲು ಬಯಸಿದರೆ ಈ 3 ಕೆಲಸಗಳನ್ನು ಎಂದಿಗೂ ಮಾಡಬೇಡಿ (Don't do these things to control hair fall):
ಕೋವಿಡ್ ನಂತರದ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಲು ಬಯಸಿದರೆ ಈ ಮೂರು ಕೆಲಸಗಳನ್ನು ಎಂದಿಗೂ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.


>> ನೀವು ಎಂದಿಗೂ ಬೆಳಗಿನ ಉಪಹಾರವನ್ನು ಬಿಡಬಾರದು ಎಂದು ರುಜುತಾ ಹೇಳುತ್ತಾರೆ.
>> ಕೂದಲು ಉದುರುವುದನ್ನು ತಡೆಗಟ್ಟಲು ಬಯಸಿದರೆ ನಿಮ್ಮ ಡಯಟ್ನಿಂದ ಅನ್ನವನ್ನು ಕೈಬಿಡಬೇಡಿ. ನಿತ್ಯ ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟದ ಸಮಯದಲ್ಲಿ ಖಿಚಿಡಿ, ಪುಲಾವ್ ಇತ್ಯಾದಿಗಳನ್ನು ತಿನ್ನಬೇಕು.
>> ಕೂದಲುದುರುವ ಸಮಸ್ಯೆ ನಿವಾರಿಸಲು ಬಯಸಿದರೆ ತಡವಾಗಿ ಮಲಗುವುದನ್ನು ತಪ್ಪಿಸುವಂತೆ ವೈದ್ಯರು ಸೂಚಿಸಿದ್ದಾರೆ.


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ