ನವದೆಹಲಿ : ಮನೆಯ ವಾಸ್ತು ತಪ್ಪಾಗಿದ್ದರೆ, ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತು ದೋಷವಿದ್ದರೆ (Vastu Dosha) ಇದು ಮನೆಯವರ ಆರೋಗ್ಯ, ಹಣಕಾಸು ವ್ಯವಸ್ಥೆ, ಸುಖ ಶಾಂತಿ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಮನೆ ನಿರ್ಮಿಸುವಾಗ ವಾಸ್ತು ತಜ್ಞರ ಸಲಹೆ ಪಡೆಯಲಾಗುತ್ತದೆ. ಕೆಲವೊಮ್ಮೆ ಸರಿಯಾದ ಮಾಹಿತಿಯಿಲ್ಲದೆ ಜನರು ತಮ್ಮ ಮನೆಯಲ್ಲಿ ಇರಿಸುವ ವಸ್ತುಗಳಿಂದಲೇ  ಸಮಸ್ಯೆಗೆ ಆಹ್ವಾನ ಕೊಟ್ಟು ಬಿಡುತ್ತಾರೆ. ನಿಮ್ಮ ಮನೆಯಲ್ಲೂ ಅಂಥಹ ವಸ್ತುಗಳಿದ್ದರೆ ತಕ್ಷಣ ಮನೆಯಿಂದ ಹೊರಹಾಕಿ .. 


COMMERCIAL BREAK
SCROLL TO CONTINUE READING

ಹರಕು ಮುರುಕು ಪಾತ್ರಗಳಿದ್ದರೆ ಸಾಲದ ಹೊರೆ ಹೆಚ್ಚುತ್ತದೆ : 
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯಲ್ಲಿ ಹರಕು ಮುರುಕು ತಟ್ಟೆಗಳಿದ್ದರೆ, ಅದು ಅಶುಭ ಫಲವನ್ನು ನೀಡುತ್ತದೆ. ಮುರಿದ ಅಥವಾ ಬಿರುಕು ಬಿಟ್ಟ ತಟ್ಟೆಯನ್ನು ತಕ್ಷಣ ಮನೆಯಿಂದ ಹೊರ ಹಾಕಿ. ಮುರಿದ ಅಥವಾ ಬಿರುಕು ಬಿಟ್ಟ ತಟ್ಟೆಯಲ್ಲಿ ಊಟ ಮಾಡಿದರೆ ಇಲ್ಲವೇ ಬೇರೆಯವರಿಗೆ ಊಟ ಬಡಿಸಿದರೆ, ಸಾಲದ ಹಿರೆ ಹೆಚ್ಚುತ್ತದೆಯಂತೆ. ಇಷ್ಟು ಮಾತ್ರವಲ್ಲ ಮನೆಯಲ್ಲಿ ಆರ್ಥಿಕ ಸಮಸ್ಯೆ (Financial problem) ಎದುರಾಗುತ್ತದೆಯಂತೆ.. 


ಇದನ್ನೂ ಓದಿ : Budh Rashi Parivartan: ಬುಧ ರಾಶಿ ಪರಿವರ್ತನೆ, ಈ ರಾಶಿಗಳಿಗೆ ಒಳ್ಳೆಯ ಸಮಯ


ಹರಿದ ಹಾಸಿಗೆ ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ :
ಮನೆಯಲ್ಲಿ ಹಾಸಿಗೆ ಹರಿದಿದ್ದರೆ, ಅದು ನಿಮ್ಮ ತೊಂದರೆಗಳು ಕೊನೆಯಾಗಲು ಬಿಡುವುದೇ ಇಲ್ಲವಂತೆ. ಅಂದರೆ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಬರುತ್ತಲೇ ಇರುತ್ತವೆಯಂತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಎಂದಿಗೂ ಹರಿದ ಹಾಸಿಗೆ ಇರಬಾರದು. 


ಈ ದಿಕ್ಕಿನಲ್ಲಿ ಕನ್ನಡಿಯಿದ್ದರೆ ತೆಗೆದುಬಿಡಿ :
 ಮನೆಯ ದಕ್ಷಿಣ ಗೋಡೆಯ ಮೇಲೆ  ಕನ್ನಡಿಯನ್ನು (Mirror) ಇಡಬಾರದು. ಒಂದು ವೇಳೆ, ಈ ಸ್ಥಳದಲ್ಲಿ ಕನ್ನಡಿಯಿದ್ದರೆ, ಮಹಿಳೆಯರು ದುಃಖಿತರಾಗಿರುತ್ತಾರೆ. ಅತೃಪ್ತರಾಗಿರುತ್ತಾರೆ. ಸಾಧ್ಯವಾದರೆ, ಮನೆಯ ಉತ್ತರ ದಿಕ್ಕಿನಲ್ಲಿ ಎಂಟು ಮೂಲೆಯಿರುವ ಕನ್ನಡಿ ಹಾಕಿ. ಇದರಿಂದ ಮನೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ. 


ಇದನ್ನೂ ಓದಿ : ನಿಮ್ಮ ಜೀವನದ ಈ ವಿಚಾರಗಳ ಬಗ್ಗೆ ಯಾವತ್ತೂ ಇನ್ನೊಬ್ಬರೊಂದಿಗೆ ಚರ್ಚಿಸದಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.