ನವದೆಹಲಿ : ಕಲ್ಲು ಸಕ್ಕರೆಯನ್ನು  ಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪೂಜೆಯ ನಂತರ ಪ್ರಸಾದವಾಗಿ ಕಲ್ಲುಸಕ್ಕರೆಯನ್ನು (Sugar candy) ನೀಡಲಾಗುತ್ತದೆ.  ದೇವಸ್ಥಾನಗಳಲ್ಲಿ ಅರ್ಚನೆ ಮಾಡಿದ ನಂತರ ಪ್ರಸಾದ ರೂಪದಲ್ಲಿ ಕಲ್ಲು ಸಕ್ಕರೆ ನೀಡುವುದನ್ನು ನೋಡಿರಬಹುದು. ಇದರ ಹೊರತಾಗಿ, ಕಲ್ಲು ಸಕ್ಕರೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ (Sugar candy benefits in Vastu) . ಜ್ಯೋತಿಷ್ಯದ ಪ್ರಕಾರ  ಕಲ್ಲು ಸಕ್ಕರೆ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ. ಕಲ್ಲು ಸಕ್ಕರೆ ಸೇವಿಸುವುದರಿಂದ, ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದರ ಜೊತೆಗೆ, ದೇಹವು ಬಲಗೊಳ್ಳುತ್ತದೆ ಎನ್ನಲಾಗಿದೆ. ಇಲ್ಲಿ ನಾವು ಕಲ್ಲು ಸಕ್ಕರೆಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಹೇಳಲಿದ್ದೇವೆ. 


COMMERCIAL BREAK
SCROLL TO CONTINUE READING

ಆಹಾರ ಸೇವಿಸಿದ ನಂತರ ಪ್ರತಿದಿನ ಕಲ್ಲು ಸಕ್ಕರೆ (Sugar candy) ಸೇವಿಸುವುದು ತುಂಬಾ ಪ್ರಯೋಜನಕಾರಿಯಂತೆ. ಇದು ಮಾತಿನಲ್ಲಿ  ಮಾಧುರ್ಯವನ್ನು ತರುತ್ತದೆ. ಇದು ಶುಕ್ರ ಗ್ರಹದ (Venus) ಸ್ಥಿತಿಯನ್ನು ಸುಧಾರಿಸುತ್ತದೆ. ಇದು ವೈವಾಹಿಕ ಜೀವನದ (Married Life) ಮೇಲೆ ಉತ್ತಮ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Astrology: ಈ ನಾಲ್ಕು ರಾಶಿಯವರಿಗೆ ಉದ್ಯೋಗ ಸೇರಿದಂತೆ ಈ ಎಲ್ಲಾ ವಿಷಯಗಳಲ್ಲಿ ಶುಭ ಫಲ ನೀಡಲಿದೆ ಬುಧಾದಿತ್ಯ ಯೋಗ


ಕಲ್ಲು ಸಕ್ಕರೆಯೆಂದರೆ ತಾಯಿ ಲಕ್ಷ್ಮಿಗೆ (Godess Lakshmi) ತುಂಬಾ ಪ್ರಿಯವಾದದ್ದು. ಲಕ್ಷ್ಮಿ ದೇವಿಗೆ ಪ್ರತಿದಿನ ಕಲ್ಲು ಸಕ್ಕರೆ ಅರ್ಪಿಸುವುದರಿಂದ ಮನೆಯಲ್ಲಿ ಸಮೃದ್ಧಿಯಾಗುತ್ತದೆಯಂತೆ. ಅಲ್ಲದೆ, ಇದು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೂಡಾ ಸಹಕಾರಿ ಎನ್ನಲಾಗಿದೆ.  


ಇನ್ನು ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಹಿಟ್ಟಿನಲ್ಲಿ ಬೆರೆಸಬೇಕು. ನಂತರ ಈ ಮಿಶ್ರಣವನ್ನು ಕಪ್ಪು ಇರುವೆಗಳು ಇರುವ ಸ್ಥಳದಲ್ಲಿ ಶನಿವಾರ ಇರಿಸಬೇಕು. ಇದರಿಂದ ಶನಿಯ (Shani Dev) ವಕ್ರ ದೃಷ್ಟಿಯಿಂದ ಉಂಟಾಗಬಹುದಾದ ದೋಷಗಳು ದೂರವಾಗುತ್ತವೆಯಂತೆ.  


ಬುಧವಾರ ಸ್ವಲ್ಪ ಕರ್ಪೂರ ಮತ್ತು ಕಲ್ಲು ಸಕ್ಕರೆಯನ್ನು ತೆಗೆದುಕೊಂಡು ಎರಡೂ ವಸ್ತುಗಳನ್ನು ಒಟ್ಟಿಗೆ ದಾನ ಮಾಡಬೇಕು. ಇದರೊಂದಿಗೆ, ಸ್ವಲ್ಪ ಕರ್ಪೂರವನ್ನು (Camphor) ಸುಟ್ಟು ಮತ್ತು ಅದರ ಮೇಲೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಕಿ. ಹೀಗೆ ಮಾಡುವುದರಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 


ಇದನ್ನೂ ಓದಿ :Vastu Tips : ಮನೆಯ ಮುಖ್ಯ ದ್ವಾರಕ್ಕೆ ಕುಂಕುಮ ಇಡುವುದು ಶುಭ : ಯಾಕೆ ಕಾರಣ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ