Astrology: ಈ ನಾಲ್ಕು ರಾಶಿಯವರಿಗೆ ಉದ್ಯೋಗ ಸೇರಿದಂತೆ ಈ ಎಲ್ಲಾ ವಿಷಯಗಳಲ್ಲಿ ಶುಭ ಫಲ ನೀಡಲಿದೆ ಬುಧಾದಿತ್ಯ ಯೋಗ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ , ಆಗಸ್ಟ್ 9 ರಂದು ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲದೆ, ಆಗಸ್ಟ್ 26 ರವರೆಗೆ ಇದೇ ರಾಶಿಯಲ್ಲಿ ಉಳಿಯುತ್ತದೆ.

Written by - Ranjitha R K | Last Updated : Aug 4, 2021, 02:33 PM IST
  • ಈ ತಿಂಗಳಲ್ಲಿ ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು
  • ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು
  • ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ
Astrology: ಈ ನಾಲ್ಕು ರಾಶಿಯವರಿಗೆ ಉದ್ಯೋಗ ಸೇರಿದಂತೆ ಈ ಎಲ್ಲಾ ವಿಷಯಗಳಲ್ಲಿ ಶುಭ ಫಲ ನೀಡಲಿದೆ ಬುಧಾದಿತ್ಯ ಯೋಗ  title=
ಈ ತಿಂಗಳಲ್ಲಿ ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು (file photo)

ನವದೆಹಲಿ : ಗ್ರಹಗಳ ಪರಿವರ್ತನೆ (Planet Transit) ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯವು ಕೆಲವು ರಾಶಿಗಳಿಗೆ ಶುಭವಾಗಿದ್ದರೆ, ಕೆಲವರಿಗೆ ಅಶುಭವಾಗಿರಲಿದೆ. ಇನ್ನು ಕೆಲವು ರಾಶಿಗಳಿಗೆ (Zodiac Signs) ಮಿಶ್ರ ಫಲ ನೀಡಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಆಗಸ್ಟ್ 9 ರಂದು ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲದೆ, ಆಗಸ್ಟ್ 26 ರವರೆಗೆ ಇದೇ ರಾಶಿಯಲ್ಲಿ ಉಳಿಯುತ್ತದೆ.  ಈ ನಡುವೆ, ಆಗಸ್ಟ್ 17 ರಂದು, ಸೂರ್ಯ ಕೂಡಾ ಸಿಂಹ ರಾಶಿ  ಪ್ರವೇಶಿಸುತ್ತಾನೆ. ಈ ಮೂಲಕ ಬುಧನ ಜೊತೆಯಲ್ಲಿ ಬುಧಾದಿತ್ಯ ಯೋಗ (Budhaditya Yog) ರೂಪುಗೊಳ್ಳಲಿದೆ. ಈ ಯೋಗವು ಕೆಲವು ರಾಶಿಗಳಿಗೆ ಬಹಳ ಶುಭವಾಗಿರಲಿದೆ. ಕೆಲ ರಾಶಿಗಳ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸು  ಸಿಗಲಿದೆ. 

ಬುಧಾದಿತ್ಯ ಯೋಗವು ಈ ರಾಶಿಗಳಿಗೆ ಬಹಳ ಶುಭಾವಾಗಿರಲಿದೆ :
ಮಿಥುನ: ಈ ರಾಶಿಯ ಜನರು ಕೆಲಸದಲ್ಲಿ ಯಶಸ್ಸು ಪಡೆಯುತ್ತಾರೆ. ಈ ಯಶಸ್ಸು ಆರ್ಥಿಕ ಸುಧಾರಣೆಯನ್ನೂ (financial benefit) ತರುತ್ತದೆ. ಎಲ್ಲಿಂದಲಾದರೂ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಜೀವನದಲ್ಲಿ ಸಂತೋಷ ಬರುತ್ತದೆ.

ಇದನ್ನೂ ಓದಿ : Vastu Tips : ಮನೆಯ ಮುಖ್ಯ ದ್ವಾರಕ್ಕೆ ಕುಂಕುಮ ಇಡುವುದು ಶುಭ : ಯಾಕೆ ಕಾರಣ ತಿಳಿಯಿರಿ

ಕನ್ಯಾ: ಸಿಂಹ ರಾಶಿಗೆ (Leo) ಬುಧನ ಪ್ರವೇಶವು ಈ ರಾಶಿಯ ಜನರಿಗೆ ಬಹಳ ಶುಭವಾಗಿ ಪರಿಣಮಿಸಲಿದೆ. ಉದ್ಯಮಿಗಳು ಉತ್ತಮ ಯಶಸ್ಸನ್ನು ಪಡೆಯಬಹುದು. ಆರ್ಥಿಕವಾಗಿ ಪ್ರಯೋಜನವಾಗಲಿದೆ. ಈ ರಾಶಿಯ (Zodiac Signs) ಜನರು ಈ ಅವಧಿಯಲ್ಲಿ ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಾಗಾಗಿ ಹೊಸ ಕೆಲಸ ಆರಂಭಿಸಲು ಇದು ಒಳ್ಳೆಯ ಸಮಯ.

ತುಲಾ : ಈ ಸಮಯವು ಈ ರಾಶಿಯ ಜನರ ಜೀವನದಲ್ಲಿ ಬಹಳಷ್ಟು ಸಂತೋಷವನ್ನು ತರುತ್ತದೆ. ನೀವು ವೃತ್ತಿಜೀವನದಲ್ಲಿ (career) ಯಶಸ್ಸನ್ನು ಪಡೆಯುತ್ತೀರಿ. ಹಣ ಗಳಿಕೆಯ ಜೊತೆಗೆ ಗೌರವವನ್ನು ಪಡೆಯುವ ಸಾಧ್ಯತೆಯೂ ಇದೆ.

ಕುಂಭ: ಕುಂಭ ರಾಶಿಯ ಜನರಿಗೆ ಎಲ್ಲಿಂದಲಾದರೂ ಒಳ್ಳೆಯ ಸುದ್ದಿ ಸಿಗಲಿದೆ. ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುವುದು. ಆದಾಯ ಹೆಚ್ಚಾಗುತ್ತದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸವನ್ನು ಪೂರ್ಣಗೊಳಿಸಬಹುದು.

ಇದನ್ನೂ ಓದಿ : ಭೂಮಿ ನಾಶವಾಗುವ ಸಮಯವನ್ನು ಹೇಳುತ್ತದೆಯಂತೆ ಈ ದೇವಸ್ಥಾನ..! ಇಲ್ಲಿಯ ಶಿವಲಿಂಗದ ವಿಶೇಷತೆ ತಿಳಿದಿದೆಯಾ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News