ಜುಲೈ 2 ರಿಂದ ಈ ನಾಲ್ಕು ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಲಿದ್ದಾರೆ ಬುಧ ಮತ್ತು ಆದಿತ್ಯ
ಜುಲೈ 2 ರಂದು, ಸೂರ್ಯ ಮತ್ತು ಬುಧ ಮಿಥುನ ರಾಶಿಯಲ್ಲಿ ಒಟ್ಟಿಗೆ ಇರುತ್ತಾರೆ. ಈ ರಾಶಿ ಬದಲಾವಣೆಯಿಂದ ನಾಲ್ಕು ರಾಶಿಯವರಿಗೆ ಒಳ್ಳೆಯ ಯೋಗಗಳು ಕೂಡಿ ಬರಲಿವೆ.
ಬೆಂಗಳೂರು : ಜುಲೈ 2 ರಂದು, ಸೂರ್ಯ ಮತ್ತು ಬುಧ ಮಿಥುನ ರಾಶಿಯಲ್ಲಿ ಒಟ್ಟಿಗೆ ಇರಲಿದ್ದಾರೆ. ಈ ರಾಶಿ ಬದಲಾವಣೆಯಿಂದ ಅನೇಕ ರಾಶಿಯವರಿಗೆ ಒಳ್ಳೆಯ ಯೋಗಗಳು ಕೂಡಿ ಬರಲಿವೆ. ಬುಧ ಜುಲೈ 2 ರಂದು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿ ಪ್ರವೇಶಿಸಲಿದ್ದಾನೆ. ಸೂರ್ಯನು ಈಗಾಗಲೇ ಇದೇ ರಾಶಿಯಲ್ಲಿದ್ದಾನೆ. ಸೂರ್ಯ ಮತ್ತು ಬುಧ ಜೋಡಿಯು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಯೋಗವನ್ನು ತರುತ್ತಿದೆ. ಸೂರ್ಯನು ಆತ್ಮ, ತಂದೆ, ಗೌರವ, ಯಶಸ್ಸು, ಉನ್ನತ ಸೇವೆಯ ಸೂಚಕ ಎಂದು ಹೇಳಲಾಗುತ್ತದೆ. ಇನ್ನು ಬುಧ ಬುದ್ಧಿವಂತಿಕೆ, ತರ್ಕ, ಸಂಭಾಷಣೆ, ಗಣಿತ, ಬುದ್ಧಿವಂತಿಕೆ ಮತ್ತು ಸ್ನೇಹದ ಅಂಶ. ಸೂರ್ಯ-ಬುಧ ಒಟ್ಟು ಸೇರಿದರೆ ನಾಲ್ಕು ರಾಶಿಯವರ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ.
ಕುಂಭ:
ಸೂರ್ಯ ಮತ್ತು ಬುಧ ಗ್ರಹಗಳು ಜೋಡಿಯಾಗುವುದರಿಂದ ಕುಂಭ ರಾಶಿಯವರಿಗೆ ಶುಭ ಯೋಗ ಉಂಟಾಗುತ್ತಿದೆ. ಶುಭ ಕಾರ್ಯಗಳು ನಡೆಯುತ್ತವೆ. ಹಣ ಪಡೆಯುವ ಎಲ್ಲಾ ಲಕ್ಷಣಗಳೂ ಇವೆ.
ಇದನ್ನೂ ಓದಿ : ದೇವರ ಮುಂದೆ ದೀಪ ಬೆಳಗುವ ವೇಳೆ ಆಗುವ ಈ ತಪ್ಪುಗಳಿಂದ ಆಗುತ್ತದೆ ಭಾರೀ ಧನ ಹಾನಿ
ಧನು ರಾಶಿ : ಧನು ರಾಶಿಯವರಿಗೆ ಸೂರ್ಯ ಬುಧನು ಒಳ್ಳೆಯ ಯೋಗವನ್ನು ತಂದು ಕೊಡುತ್ತಾರೆ. ಈ ರಾಶಿಯ ಜನರು, ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತಾರೆ. ಅವರು ಇಷ್ಟು ದಿನ ಮಾಡಿದ ಶ್ರಮಕ್ಕೆ ತಕ್ಕ ಫಲ ಸಿಗುವ ಕಾಲ ಬಂದಿದೆ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಈ ಅವಧಿಯಲ್ಲಿ ಮನೆ, ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸಬಹುದು. ಈ ಹೊತ್ತಿನಲ್ಲಿ ಇವರಿಗೆ ಉತ್ತಮ ಯೋಗವನ್ನು ತಂದು ಕೊಡಲಿದೆ. ಆದರೆ ಹೂಡಿಕೆ ಮಾಡುವ ಮೊದಲು, ಯೋಚನೆ ಮಾಡಿ ಹೂಡಿಕೆ ಮಾಡುವುದು ಒಳ್ಳೆಯದು.
ಇದನ್ನೂ ಓದಿ : Varsha Rutu 2022: ಈ ದಿನದಿಂದ ವರ್ಷಾ ಋತುವಿನ ಆಗಮನ, ಸುಖ-ಸಮೃದ್ಧಿಗಾಗಿ ಈ ಉಪಾಯಗಳನ್ನು ಅನುಸರಿಸಿ
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರಲಿದೆ. ಕೈ ಕೊಟ್ಟ ಕೆಲಸಗಳೆಲ್ಲವೂ ಈ ಸಮಯದಲ್ಲಿ ಕೈ ಗೂಡಲಿದೆ. ಯೋಚನೆಗೂ ಮೀರಿದ ಯಶಸ್ಸು ಸಿಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.