Budh Gochar 2022; ಜುಲೈ 2 ರಿಂದ 17 ರವರೆಗೆ ಈ ಮೂರು ರಾಶಿಗಳಿಗೆ ಲಾಭವೇ ಲಾಭ, ಕಾರಣ ಇಲ್ಲಿದೆ

Budh Gochar 2022: ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವಿದೆ. ಗ್ರಹಗಳ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಮೇಲೆ ಶುಭ-ಅಶುಭ ಪ್ರಭಾವ ಬೀರುತ್ತದೆ. ಹಾಗಾದರೆ ಬನ್ನಿ ಬುಧ ಗೊಚಾರದ ಪರಿಣಾಮಗಳನ್ನು ತಿಳಿದುಕೊಳ್ಳೋಣ.  

Written by - Nitin Tabib | Last Updated : Jun 27, 2022, 05:40 PM IST
  • ಜುಲೈ 2 ರಿಂದ ಜುಲೈ 17ರವರೆಗೆ ಈ ರಾಶಿಯ ಜನರಿಗೆ ಭಾರಿ ಲಾಭ.
  • ಮಿಥುನ ರಾಶಿಯಲ್ಲಿ ಬುಧನ ಗೋಚರ.
  • ಯಾವ ಯಾವ ರಾಶಿಗಳ ಪಾಲಿಗೆ ಈ ಬುಧ ಗೋಚರ ಸಕಾರಾತ್ಮಕವಾಗಿರಲಿದೆ
Budh Gochar 2022; ಜುಲೈ 2 ರಿಂದ 17 ರವರೆಗೆ ಈ ಮೂರು ರಾಶಿಗಳಿಗೆ ಲಾಭವೇ ಲಾಭ, ಕಾರಣ ಇಲ್ಲಿದೆ title=
Budh Gochar In Gemini 2022

Budh Rashi Parivartan 2022 July: ಗ್ರಹಗಳ ರಾಜಕುಮಾರ ಬುಧ ಜುಲೈ 2 ರಂದು ತನ್ನ ರಾಶಿಯನ್ನು ಬದಲಾಯಿಸಲಿದೆ. ಬುಧ ವೃಷಭ ರಾಶಿಯಿಂದ ಹೊರಟು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ, ಸಮೃದ್ಧಿ, ವ್ಯಾಪಾರ ಮತ್ತು ಆರ್ಥಿಕ ಪ್ರಗತಿಯ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಜುಲೈ 2 ರಂದು ಬುಧನು ಬೆಳಗ್ಗೆ 09:40 ಕ್ಕೆ ಮಿಥುನ ರಾಶಿಯನ್ನು ಪ್ರವೆಶಿಸಲಿದ್ದಾನೆ ಮತ್ತು ಜುಲೈ 17 ರವರೆಗೆ ಆ ರಾಶಿಯಲ್ಲಿಯೇ ಇರಲಿದ್ದಾನೆ. ಈ ಅವಧಿಯಲ್ಲಿ ಬುಧ ರವಿ ಯೋಗದಲ್ಲಿ ಸಂಚರಿಸಲಿದ್ದಾನೆ. ಬುಧದ ಈ ರಾಶಿ ಬದಲಾವಣೆಯಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಸಿಂಹ ರಾಶಿ- ಸಿಂಹ ರಾಶಿಯವರ ಜೀವನದಲ್ಲಿ ಆರ್ಥಿಕ ಪ್ರಗತಿ ಇರಲಿದೆ. ದಾಂಪತ್ಯ ಜೀವನ ಸುಖದಿಂದ ಕೂದಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಉದ್ಯೋಗಾಕಾಂಕ್ಷಿಗಳು ಹೊಸ ಅವಕಾಶಗಳನ್ನು ಸಿಗುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳ ಸಾಧ್ಯ. ಉದ್ಯೋಗವನ್ನು ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿ ಸಿಗಲಿದೆ. ಹೂಡಿಕೆಗೆ ಸಮಯ ಅನುಕೂಲಕರವಾಗಿದೆ.

ಕನ್ಯಾ ರಾಶಿ- ಕನ್ಯಾ ರಾಶಿಯ ಜನರು ಕಾರ್ಯ ಸ್ಥಳದಲ್ಲಿ ತಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತಾರೆ. ಬಡ್ತಿಯ ಅವಕಾಶಗಳಿವೆ. ಬುಧ ಸಂಚಾರದ ಪ್ರಭಾವದಿಂದಾಗಿ ನೀವು ವ್ಯಾಪಾರದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ವ್ಯಾಪಾರದ ಬೆಳವಣಿಗೆಯೊಂದಿಗೆ, ಹೊಸ ಸಂಬಂಧಗಳು ಸ್ಥಾಪನೆಯಾಗಲಿವೆ. ನಿಮಗೆ ಹೊಸ ಉದ್ಯೋಗ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ.

ಮಕರ ರಾಶಿ- ಬುಧನ ಈ ರಾಶಿ ಪರಿವರ್ತನೆ ಮಕರ ರಾಶಿಯ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ರಿಯಲ್ ಎಸ್ಟೇಟ್ ವಿಷಯಗಳಲ್ಲಿ ನಿಮಗೆ ಲಾಭವಾಗಬಹುದು. ಕಾರ್ಯಶೈಲಿಯಲ್ಲಿ ಸುಧಾರಣೆ ಕಂಡುಬರಲಿದೆ. ಕಾರ್ಯ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದ್ದು, ಉದ್ಯೋಗದಲ್ಲಿ ಪ್ರಗತಿ ಸಾಧ್ಯತೆ ಇದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News