Shani-Shukra Yuti: ಪ್ರಸ್ತುತ ಶನಿ ಹಾಗೂ ಶುಕ್ರ ಎರಡೂ ಗ್ರಹಗಳು ಕುಂಭ ರಾಶಿಯಲ್ಲಿ ಕುಳಿತುತುಕೊಂಡಿವೆ. ಶನಿ ಕುಂಭ ರಾಶಿಯ ರಾಷ್ಯಾಧಿಪತಿ ಕೂಡ ಹೌದು. ಶುಕ್ರ ಹಾಗೂ ಶನಿಯ ಒಂದೇ ರಾಶಿಯಲ್ಲಿನ ಯುತಿ ಹಲವು ರಾಶಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿವೆ. ಜನವರಿ 17, 2023 ರಂದು ಶನಿ ಕುಂಭ ರಾಶಿಗೆ ಪ್ರವೇಶ ನೆರವೇರಿದ್ದರೆ, ಜನವರಿ 22, 2023 ರಂದು ಶುಕ್ರ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿ-ಶುಕ್ರರ ಈ ಯುತಿ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಕೆಲ ರಾಶಿಗಳ ಜನರಿಗೆ ಈ ಸಂಯೋಜನೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಈ ಪಟ್ಟಿಯಲ್ಲಿ ನಿಮ್ಮ ರಾಶಿ ಇದೆಯಾ ತಿಳಿದುಕೊಳ್ಳೋಣ ಬನ್ನಿ,   

COMMERCIAL BREAK
SCROLL TO CONTINUE READING

ವೃಷಭ ರಾಶಿ: ಶುಕ್ರ-ಶನಿಯ ಮೈತ್ರಿ ವೃಷಭ ರಾಶಿಯ ಜಾತಕದವರಿಗೆ ಲಾಭಕಾರಿಯಾಗಿದೆ. ಈ ಅವಧಿಯಲ್ಲಿ ನಿಮಗೆ ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಕೆಲಸ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ. ಧನಲಾಭದ ಯೋಗಗಳಿವೆ. ಆದಾಯದಲ್ಲಿ ವೃದ್ಧಿ ಇರಲಿದೆ. ಲವ್ ಲೈಫ್ ಉತ್ತಮವಾಗಿರಲಿದೆ. ಸಂಬಂಧಗಳಲ್ಲಿ ಸುಧಾರಣೆ ಇರಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯ ಜಾತಕದವರಿಗೆ ಶನಿ-ಶುಕ್ರರ ಯುತಿ ಅತ್ಯಂತ ಶುಭ ಸಾಬೀತಾಗಲಿದೆ. ಈ ರಾಶಿಯ ಜಾತಕದವರಿಗೆ ಭಾಗ್ಯದ ಸಾಥ್ ಸಿಗಲಿದೆ. ಹಾಳಾದ ಮತ್ತು ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಯಾತ್ರೆಯ ಮೇಲೆ ಹೋಗುವ ಯೋಗವಿದೆ. ಧನಲಾಭದ ಸಂಕೇತಗಳಿವೆ. ಘನತೆ ಗೌರವ ಹೆಚ್ಚಾಗಲಿದೆ. 

ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಶುಕ್ರ ಹಾಗೂ ಶನಿಯ ಯುತಿ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ಮಾನಸಿಕ ಒತ್ತಡ ದೂರಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗಳಿವೆ. ಧನಲಾಭದ ಯೋಗವಿದೆ. ಕುಟುಂಬದ ಜೊತೆಗೆ ಒಳ್ಳೆಯ ಸಮಯ ಕಳೆಯುವಿರಿ.


ಇದನ್ನೂ ಓದಿ-Guru Ast 2023: ಶೀಘ್ರದಲ್ಲಿಯೇ ದೇವಗುರು ಬೃಹಸ್ಪತಿ ಅಸ್ತ, ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ?

ಮಕರ ರಾಶಿ: ಮಕರ ರಾಶಿಯ ಜಾತಕದವರ ಪಾಲಿಗೆ ಶುಕ್ರ-ಶನಿಗಳ ಮೈತ್ರಿ ಲಾಭ ತರಲಿದೆ. ಕಷ್ಟಗಳಿಂದ ಮುಕ್ತಿ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹೂಡಿಕೆಗೆ ಈ ಸಮಯ ಅನುಕೂಲಕರವಾಗಿದೆ.


ಇದನ್ನೂ ಓದಿ-ಈ ನಾಲ್ಕು ರಾಶಿಗಳ ಜನರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಶೂನ್ಯಕ್ಕೆ ಸಮಾನ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.