ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಶನಿ ಗ್ರಹ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದು ಹೇಳಲಾಗುತ್ತದೆ.  ಶನಿ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು  ಎರಡೂವರೆ ವರ್ಷದ ಸಮಯವನ್ನು ತೆಗೆದುಕೊಳ್ಳುತ್ತದೆ. ಇನ್ನು ಯಾವ ವ್ಯಕ್ತಿಯ ಜಾತಕದಲ್ಲಿ ಶನಿಯ ಆಶೀರ್ವಾದ  ಇರುತ್ತದೆಯೋ ಆ ವ್ಯಕ್ತಿ ಜೀವನದ ಪ್ರತೀ  ಹಂತದಲ್ಲಿಯೂ ಯಶಸ್ಸು ಪಡೆಯುತ್ತಾನೆ. ಅದೇ ರೀತಿ ಯಾರು ಶನಿ ಮಹಾತ್ಮನ ಕೆಂಗಣ್ಣಿಗೆ ಗುರಿಯಾಗುತ್ತರೆಯೋ ಅವರು, ಜೀವನದಲ್ಲಿ ಬಹಳಷ್ಟು ನೋವು ಅನುಭವಿಸಬೇಕಾಗುತ್ತದೆ. 2023 ಜನವರಿ 17 ಅಂದರೆ ಹೊಸ ವರ್ಷದ ಮೊದಲ ಮಾಸದಲ್ಲಿಯೇ ಶನಿ ಮಕರ ರಾಶಿಯಿಂದ ಕುಂಭ ರಾಶಿ ಪ್ರವೇಶಿಸುತ್ತಾನೆ.  


COMMERCIAL BREAK
SCROLL TO CONTINUE READING

ಈ ರಾಶಿಯವರ ಮೇಲಿರಲಿದೆ ಶನಿ ದೇವನ ಆಶೀರ್ವಾದ : 
ಮೇಷ  ರಾಶಿ : ಶನಿ ಮಹಾತ್ಮನು ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ನೀಡಲಿದ್ದಾನೆ. ಶನಿ ದೇವನ ಕೃಪೆಯಿಂದ ಸ್ವಂತ ಕೆಲಸವನ್ನು ಆರಂಭಿಸಬಹುದು. ಅದೃಷ್ಟ ಸದಾ ನಿಮ್ಮ ಜೊತೆಗಿರುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡಿದರೂ ಯಶಸ್ಸು  ಖಂಡಿತಾ. ಉದ್ಯೋಗದಲ್ಲಿರುವವರಿಗೆ ಮತ್ತು ವ್ಯಾಪಾರಸ್ಥರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದು. ಮಕ್ಕಳಿಂದ ಶುಭ ಸಮಾಚಾರ ಸಿಗಲಿದೆ. 


ಇದನ್ನೂ ಓದಿ : Sun Transit 2022: ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ- ನಿಮ್ಮ ಪ್ರಗತಿ, ಆರ್ಥಿಕ ಸ್ಥಿತಿಯ ಮೇಲೆ ಏನು ಪರಿಣಾಮ ತಿಳಿಯಿರಿ


ವೃಷಭ ರಾಶಿ : ಶನಿದೇವನು ನಿಮ್ಮ ರಾಶಿಯ ಹತ್ತನೇ ಮನೆಯನ್ನು ಪ್ರವೇ ಶಿಸಲಿದ್ದಾನೆ. ಉದ್ಯೋಗದಲ್ಲಿ ಉನ್ನತ ಪದವಿ ಪ್ರಾಪ್ತಿಯಾಗಬಹುದು. ಹಲವು ವರ್ಷಗಳ ಕನಸು ಈ ಬಾರಿ ನನಸಾಗಲಿದೆ. ಸ್ವಂತ ಮನೆ ಹೊಂದುವ ಕನಸು ಈಡೇರುವುದು. 


ಕನ್ಯಾ ರಾಶಿ :  ಶನಿ ಗ್ರಹವು ಈ ರಾಶಿಯ ಆರನೇ ಮನೆ ಪ್ರವೇಶಿಸಲಿದೆ. ನಿಮ್ಮ ಜೀವನದಲ್ಲಿರುವ ಶತ್ರುಗಳ ನಾಶವಾಗುತ್ತದೆ. ಹೊಸ ಉದ್ಯೋಗದ ಅವಕಾಶ ಲಭಿಸಬಹುದು. ವಿದೇಶ ಪ್ರಯಾಣದ ಯೋಗ ಕೂಡಿ ಬರುವುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. 


ಇದನ್ನೂ ಓದಿ : Surya Gochar 2022: ನಾಳೆ ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ, ಅಪಾರ ಧನವೃಷ್ಟಿಗಾಗಿ ಈ ಉಪಾಯ ಅನುಸರಿಸಿ


ಧನು ರಾಶಿ : ಶನಿದೇವನು ಧನು ರಾಶಿಯ ಮೂರನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ ಧನು ರಾಶಿಯವರಿಗೆ ಸಾಡೇಸಾತಿಯಿಂದ ಮುಕ್ತಿ ಸಿಗಲಿದೆ. ಮಾಡುವ ಎಲ್ಲಾ ಕಾರ್ಯಗಳಲ್ಲಿಯೂ ಶನಿದೇವನ ಆಶೀರ್ವಾದ ಇರುತ್ತದೆ. ಹಾಗಾಗಿ ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ಉದ್ಯೋಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಬಹುದು.    


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.