Surya Gochar 2022: ನಾಳೆ ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ, ಅಪಾರ ಧನವೃಷ್ಟಿಗಾಗಿ ಈ ಉಪಾಯ ಅನುಸರಿಸಿ

Surya Gochar 2022: ಹಿಂದೂ ಧರ್ಮದಲ್ಲಿ, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನ ಸ್ಥಾನ ಪಲ್ಲಟವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ ಮತ್ತು ಅದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಸೂರ್ಯ ದೇವರನ್ನು ಪೂಜಿಸುವ ಆಚರಣೆಯೂ ಕೂಡ ರೂಢಿಯಲ್ಲಿದೆ. ಸೂರ್ಯನ ಈ ಸ್ಥಾನಪಲ್ಲಟದಿಂದ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ  ಸಮೃದ್ಧಿಯ ಜೊತೆಗೆ ಗೌರವ ಮತ್ತು ಸಂತೋಷವನ್ನು ಪಡೆಯುತ್ತಾನೆ.  

Written by - Nitin Tabib | Last Updated : Nov 15, 2022, 08:54 PM IST
  • ಅಕ್ಟೋಬರ್ 16 ರ ಬುಧವಾರದಂದು, ಸೂರ್ಯನು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಹೀಗಾಗಿ ಇದನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
  • ಈ ದಿನ ಸೂರ್ಯ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ವಿಧಾನವಿದೆ.
Surya Gochar 2022: ನಾಳೆ ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ, ಅಪಾರ ಧನವೃಷ್ಟಿಗಾಗಿ ಈ ಉಪಾಯ ಅನುಸರಿಸಿ title=
Surya Gochar 2022

Surya Gochar 2022: ಹಿಂದೂ ಧರ್ಮದಲ್ಲಿ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ದಿನದಂದು ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಇದೇ ವೇಳೆ ಯಾವ ರಾಶಿಯಲ್ಲಿ ಸೂರ್ಯನ ಈ ಸಂಚಾರ ಸಂಭವಿಸುತ್ತದೆಯೋ, ಅದೇ ರಾಶಿಯ ಹೆಸರಿನ ಅಡಿ ಈ ಸಂಕ್ರಾಂತಿಯನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ, ಅಕ್ಟೋಬರ್ 16 ರ ಬುಧವಾರದಂದು, ಸೂರ್ಯನು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಹೀಗಾಗಿ ಇದನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ವಿಧಾನವಿದೆ. 

ಈ ದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ ಸೂರ್ಯ ಮಂತ್ರಗಳನ್ನು ಜಪಿಸುವುದು, ಪಠಣ ಇತ್ಯಾದಿಗಳನ್ನು ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಅಷ್ಟಮಿ ದಿನ  ಸೂರ್ಯ ದೇವ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಸೂರ್ಯ ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಗೆ ಪ್ರವೆಶಿಸಲಿದ್ದಾನೆ. ಈ ದಿನ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ ಎನ್ನಲಾಗುತ್ತದೆ. ಇದರೊಂದಿಗೆ ಈ ದಿನದಂದು ಸೂರ್ಯ ಚಾಲಿಸಾ ಪಠಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ ಮತ್ತು ವ್ಯಕ್ತಿಗೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

ಸೂರ್ಯಾಷ್ಟಕಂ 
ಸಾಂಬ ಉವಾಚ |
ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತು ತೇ || 1 ||

ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ |
ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 2 ||

ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 3 ||

ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 4 ||

ಬೃಂಹಿತಂ ತೇಜಸಾಂ ಪುಂಜಂ ವಾಯುಮಾಕಾಶಮೇವ ಚ |
ಪ್ರಭುಂ ಚ ಸರ್ವಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ || 5 ||

ಬಂಧೂಕಪುಷ್ಪಸಂಕಾಶಂ ಹಾರಕುಂಡಲಭೂಷಿತಮ್ |
ಏಕಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 6 ||

ತಂ ಸೂರ್ಯಂ ಜಗತ್ಕರ್ತಾರಂ ಮಹಾತೇಜಃಪ್ರದೀಪನಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 7 ||

ತಂ ಸೂರ್ಯಂ ಜಗತಾಂ ನಾಥಂ ಜ್ಞಾನವಿಜ್ಞಾನಮೋಕ್ಷದಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || 8 ||

ಸೂರ್ಯಾಷ್ಟಕಂ ಪಠೇನ್ನಿತ್ಯಂ ಗ್ರಹಪೀಡಾಪ್ರಣಾಶನಮ್ |
ಅಪುತ್ರೋ ಲಭತೇ ಪುತ್ರಂ ದರಿದ್ರೋ ಧನವಾನ್ಭವೇತ್ || 9 ||

ಆಮಿಷಂ ಮಧುಪಾನಂ ಚ ಯಃ ಕರೋತಿ ರವೇರ್ದಿನೇ |
ಸಪ್ತಜನ್ಮ ಭವೇದ್ರೋಗೀ ಜನ್ಮಜನ್ಮ ದರಿದ್ರತಾ || 10 ||

ಇದನ್ನೂ ಓದಿ-Samudrika Shastra: ಹೊಟ್ಟೆಯ ಆಕಾರದಿಂದ ನಿಮ್ಮ ವ್ಯಕ್ತಿತ್ವ, ಭವಿಷ್ಯ ತಿಳಿಯಬಹುದು!

ಸ್ತ್ರೀತೈಲಮಧುಮಾಂಸಾನಿ ಯೇ ತ್ಯಜಂತಿ ರವೇರ್ದಿನೇ |
ನ ವ್ಯಾಧಿಃ ಶೋಕದಾರಿದ್ರ್ಯಂ ಸೂರ್ಯಲೋಕಂ ಸ ಗಚ್ಛತಿ || 11 ||

ಇತಿ ಶ್ರೀ ಸೂರ್ಯಾಷ್ಟಕಮ್ |

ಇದನ್ನೂ ಓದಿ-Vastu Tips : ಬಾತ್ರೂಮ್‌ನಲ್ಲಿ ಈ ಬಣ್ಣದ ಬಕೆಟ್ ಇಟ್ಟರೆ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News