ಬೆಂಗಳೂರು : ಪ್ರಸ್ತುತ ಕನ್ಯಾರಾಶಿಯಲ್ಲಿರುವ ಬುಧ ಗ್ರಹವು ಸೆಪ್ಟೆಂಬರ್ 10 ರಿಂದ  ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತದೆ. ಇದಾದ ನಂತರ ಅಕ್ಟೋಬರ್ 2 ರವರೆಗೆ ಹಿಮ್ಮುಖವಾಗಿಯೇ ಚಲಿಸಲಿದೆ. ನಂತರ ಬುಧನು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುದ್ಧಿವಂತಿಕೆ, ವ್ಯಾಪಾರ, ಸಂಪತ್ತುಗಳ ಅಂಶವಾದ ಬುಧನ ಚಲನೆಯಲ್ಲಿನ  ಬದಲಾವಣೆಯು ಕೆಲವರ ಜೀವನದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಬುಧನ ಹಿಮ್ಮುಖ ಚಲನೆಯ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಉದ್ಯೋಗ-ವ್ಯಾಪಾರ, ಶಿಕ್ಷಣ, ಬುದ್ಧಿವಂತಿಕೆ, ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.


COMMERCIAL BREAK
SCROLL TO CONTINUE READING

ಮಿಥುನ ರಾಶಿ: ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ಕೆಲಸದ ಹೊರೆ ಹೆಚ್ಚಾಗುತ್ತದೆ. ಸಂಬಂಧಗಳು ಉತ್ತಮವಾಗಿರುತ್ತವೆ. ಕಾನೂನು ವಿವಾದಗಳಿಂದ ಪರಿಹಾರ ಸಿಗಲಿದೆ.


ಕರ್ಕಾಟಕ ರಾಶಿ:  ಬುಧನ ಹಿಮ್ಮುಖ ಚಲನೆಯು ಕರ್ಕ ರಾಶಿಯವರಿಗೆ ಹಠಾತ್ ಹಣದ ಲಾಭವನ್ನು ನೀಡುತ್ತದೆ. ಹೊಸ ಅವಕಾಶಗಳು ಬರಲಿವೆ. ಕೆಲಸದಲ್ಲಿ ಬದಲಾವಣೆ ಆಗಬಹುದು.  ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿದರೆ ಅದ್ಭುತ ಯಶಸ್ಸು ಸಿಗಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. 


ಇದನ್ನೂ ಓದಿ : ಸೆಪ್ಟೆಂಬರ್ 17 ರಿಂದ ಈ ರಾಶಿಯವರಿಗೆ ಅದೃಷ್ಟ, ಕೈ ಹಾಕಿರುವ ಕೆಲಸದಲ್ಲಿ ಯಶಸ್ಸು ನೀಡಲಿದ್ದಾರೆ ಸೂರ್ಯ ಮತ್ತು ಬುಧ


ಕನ್ಯಾ ರಾಶಿ : ಕನ್ಯಾರಾಶಿಯಲ್ಲಿಯೇ ಬುಧನ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದರ ಪರಿಣಾಮವು ಈ ರಾಶಿಯವರ ಮೇಲೆ ಗರಿಷ್ಠವಾಗಿರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.  ವಾಹನ ಗೃಹ ಖರೀದಿ ಯೋಗ ಕೂಡಿ ಬರಬಹುದು. ಪತಿ ಪತ್ನಿಯರ ಬಾಂಧವ್ಯ ಉತ್ತಮವಾಗಿರಲಿದೆ. ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ. ವೃತ್ತಿಜೀವನದಲ್ಲಿ ಪ್ರಗತಿಯ ಬಲವಾದ ಅವಕಾಶಗಳಿವೆ. 


ವೃಶ್ಚಿಕ ರಾಶಿ : ಬುಧದ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿಯನ್ನು ನೀಡುತ್ತದೆ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ. ಅದೃಷ್ಟದ ಸಹಾಯದಿಂದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಸಂಗಾತಿಯಿಂದ ನೀವು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯುತ್ತೀರಿ. 


ಇದನ್ನೂ ಓದಿ : Dream Predictions: ಈ ರೀತಿಯ ಕನಸು ಬಿದ್ದರೆ, ಪ್ರಮೋಶನ, ಘನತೆ-ಗೌರವ ವೃದ್ಧಿ ಗ್ಯಾರಂಟಿ!


 ಹಿಮ್ಮುಖ ಚಲನೆಯಲ್ಲಿರುವ ಬುಧನ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ಏನು ಮಾಡಬೇಕು : 
 ಬುಧದ ಹಿಮ್ಮುಖ ಚಲನೆಯ ದುಷ್ಪರಿಣಾಮಗಳನ್ನು ತೆಗೆದು ಹಾಕಲು ಹಸಿರು ವಸ್ತುಗಳನ್ನು ದಾನ ಮಾಡಬೇಕು. ಹಸುವಿಗೆ ಮೇವು ತಿನ್ನಿಸಬೇಕು. ಬುಧವಾರ ಉಪವಾಸ ಮಾಡಿ ಗಣಪತಿ ಪೂಜೆ ಮಾಡಬೇಕು. ಗಣಪತಿಗೆ ಗರಿಕೆ, ಲಡ್ಡು ಅಥವಾ ಮೋದಕಗಳನ್ನು ಅರ್ಪಿಸಿ. 


 



( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.