ಈ ರಾಶಿಯ ಯುವತಿಯನ್ನು ಮದುವೆಯಾದ್ರೆ ಕಡುಬಡವ ಕೂಡ ಶ್ರೀಮಂತನಾಗ್ತಾನೆ

Lucky zodiac signs : ಕೆಲವರು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತುಕೊಂಡು ಬಂದಿರುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಮನೆಯ ಲಕ್ಷ್ಮಿ ಇದ್ದಂತೆ. ಅವರು ಹುಟ್ಟಿದ ಮನೆಗೂ ಹೋದ ಮನೆಗೂ ಅದೃಷ್ಟ ತರುತ್ತಾರೆ.

Written by - Chetana Devarmani | Last Updated : Sep 6, 2022, 06:12 PM IST
  • ಕೆಲವರು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತುಕೊಂಡು ಬಂದಿರುತ್ತಾರೆ
  • ಅದರಲ್ಲೂ ಹೆಣ್ಣುಮಕ್ಕಳು ಮನೆಯ ಲಕ್ಷ್ಮಿ ಇದ್ದಂತೆ
  • ಈ ರಾಶಿಯ ಯುವತಿಯನ್ನು ಮದುವೆಯಾದ್ರೆ ಕಡುಬಡವ ಕೂಡ ಶ್ರೀಮಂತನಾಗ್ತಾನೆ
ಈ ರಾಶಿಯ ಯುವತಿಯನ್ನು ಮದುವೆಯಾದ್ರೆ ಕಡುಬಡವ ಕೂಡ ಶ್ರೀಮಂತನಾಗ್ತಾನೆ   title=
ರಾಶಿಯ ಮಹಿಳೆಯರು

Lucky zodiac signs : ಕೆಲವರು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತುಕೊಂಡು ಬಂದಿರುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಮನೆಯ ಲಕ್ಷ್ಮಿ ಇದ್ದಂತೆ. ಅವರು ಹುಟ್ಟಿದ ಮನೆಗೂ ಹೋದ ಮನೆಗೂ ಅದೃಷ್ಟ ತರುತ್ತಾರೆ. ಕೆಲವು ವಿಶೇಷ ರಾಶಿಯ ಹೆಣ್ಣುಮಕ್ಕಳು ಮದುವೆಯಾದ ಮೇಲೆ ಗಂಡನಿಗೆ ಅದೃಷ್ಟವನ್ನು ತರುತ್ತಾರೆ. ಅದರಲ್ಲಿಯೂ ತುಲಾ ಮತ್ತು ವೃಷಭ ರಾಶಿಯ ಮಹಿಳೆಯರನ್ನು ಮದುವೆಯಾದರೆ ಗಂಡನಿಗೆ ಅದೃಷ್ಟ ಖುಲಾಯಿಸಿದಂತೆ. 

ಇದನ್ನೂ ಓದಿ: Relationship Tips: ಏಕಕಾಲಕ್ಕೆ ಇಬ್ಬರ ಜೊತೆಗೆ ಡೇಟಿಂಗ್, ಇಲ್ಲಿವೆ ಅದರ ಹಾನಿಗಳು

ತುಲಾ ರಾಶಿ : ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸಿಕ್ಕಾಪಟ್ಟೆ ಅದೃಷ್ಟವಂತರಾಗಿರುತ್ತಾರೆ. ಇವರಿಗೆ ಶುಕ್ರದೆಸೆ ಇರುತ್ತದೆ. ತುಲಾ ಲಗ್ನದಲ್ಲಿ ಜನಿಸಿದ ಹೆಣ್ಣು ಮಕ್ಕಳು ಕಡುಬಡವನನ್ನು ಮದುವೆಯಾದರೂ ಜೀವನದಲ್ಲಿ ಹಂತಹಂತವಾಗಿ ಮೇಲೇರುತ್ತಾರೆ. ಅದೃಷ್ಟದಿಂದ ಶ್ರೀಮಂತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ತುಲಾ ರಾಶಿ ಹೆಣ್ಣು ಮಕ್ಕಳು ಬುದ್ಧಿವಂತರಾಗಿರುತ್ತಾರೆ. ಅಧ್ಯಯನದಿಂದ ಜ್ಞಾನ ಗಳಿಸುತ್ತಾರೆ. ಈ ರಾಶಿಯ ಮಹಿಳೆಯರು ಧೈರ್ಯವಂತರು, ಸಾಹಸಪ್ರಿಯರು ಆಗಿರುತ್ತಾರೆ. ಇವರಿಗೆ ಆಭರಣಗಳೆಂದರೆ ತುಂಬಾ ಇಷ್ಟ. ರೂಪವಂತರೂ ಆಗಿರುವ ಈ ಹೆಣ್ಣುಮಕ್ಕಳು, ಅದ್ಭುತ ಕಲಾವಿದರಾಗಿರುತ್ತಾರೆ. ಇದಕ್ಕೆ ಕಾರಣ ಅವರ ರಾಶಿಯ ಅಧಿಪತಿ ಶುಕ್ರ. ಇವರ ಕಾಲ್ಗುಣದಿಂದ ಹೆಣ್ಣುಮಕ್ಕಳು ಹೋದ ಮನೆಗೆ ಸಿರಿವಂತಿಕೆಯನ್ನ ತರುತ್ತಾರೆ. 

ವೃಷಭ ರಾಶಿ : ಈ ರಾಶಿ ಹಾಗೂ ಲಗ್ನದಲ್ಲಿ ಜನಿಸಿದ ಹೆಣ್ಣು ಮಕ್ಕಳು ತಂದೆ ಹಾಗೂ ಗಂಡನ ಮನೆ ಇಬ್ಬರಿಗೂ ಅದೃಷ್ಟ ತರುತ್ತಾರೆ. ಇವರು ಹುಟ್ಟಿದ ಮನೆಯಲ್ಲಿ ಆರ್ಥಿಕ ವೃದ್ಧಿ, ಆರೋಗ್ಯ ವೃದ್ಧಿಯನ್ನು ಕಾಣಬಹುದು. ನಿಜಕ್ಕೂ ಇವರನ್ನು ಮದುವೆಯಾದರೆ ಲಕ್ಷ್ಮೀದೇವತೆಯನ್ನು ಮನೆಗೆ ಕರೆದುಕೊಂಡು ಬಂದಂತೆ. ಈ ರಾಶಿಯ ಯುವತಿಯರನ್ನು ಮದುವೆಯಾಗುವವರು ಅದೃಷ್ಟವಂತರು. 

ಇದನ್ನೂ ಓದಿ: Viral Video: ದೇಸಿ ಆಂಟಿಗಳ ಸಖತ್‌ ಡ್ಯಾನ್ಸ್‌! ವಿಡಿಯೋ ಇಲ್ಲಿ ನೋಡಿ

ತುಲಾ ಮತ್ತು ವೃಷಭ ರಾಶಿಯವರು ಸುಮ್ಮಸುಮ್ಮನೆ ಇನ್ನೊಬ್ಬರ ತಂಟೆಗೆ ಹೋಗುವವರಲ್ಲ. ಆದರೆ ಇವರ ತಂಟೆಗೆ ಯಾರಾದರೂ ಬಂದರೆ ಸುಮ್ಮನೆ ಬಿಡುವುದಿಲ್ಲ. ತಮ್ಮ ಮುಷ್ಟಿಯಲ್ಲಿಯೇ ಪತಿಯನ್ನು ಹಿಡಿದಿಟ್ಟುಕೊಳ್ಳುವ ಕಲೆ ಇವರಿಗೆ ಕರಗತವಾಗಿರುತ್ತದೆ. ಈ ಎರಡು ರಾಶಿಯ ಹೆಣ್ಣುಮಕ್ಕಳು ಕಾಲಿಟ್ಟ ಗಳಿಗೆ ಅದೃಷ್ಟ ಖುಲಾಯಿಸಿದಂತೆ. ಇವರು ಹೋದಲ್ಲೆಲ್ಲ ಸಮೃದ್ಧಿ ತರುತ್ತಾರೆ. 

(Disclaimer: ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News