ಇಂದಿನಿಂದ ಎಚ್ಚರದಿಂದ ಇರಬೇಕು ಈ ಐದು ರಾಶಿಯವರು, ಕಷ್ಟ ನಷ್ಟ ನೀಡಲಿದ್ದಾನೆ ಬುಧ
ಇಂದು ಅಂದರೆ ಜನವರಿ 18, 2022 ರಿಂದ ವ್ಯಾಪಾರದ ದೇವರಾದ ಬುಧನು ಅಸ್ತಮಿಸಲಿದ್ದಾನೆ. ಇದು ಐದು ರಾಶಿ ಚಕ್ರದ ಜನರಿಗೆ ಬಹಳ ಅಪಾಯಕಾರಿಯಾಗಿ ಪರಿಣಮಿಸಲಿದೆ.
ನವದೆಹಲಿ : ವೈದಿಕ ಜ್ಯೋತಿಷ್ಯದಲ್ಲಿ (Astrology), ಗ್ರಹದ ರಾಶಿಚಕ್ರದ ಬದಲಾವಣೆ, ಅದರ ನಡೆಯಲ್ಲಿನ ಬದಲಾವಣೆ ಮತ್ತು ಗ್ರಹಗಳ ಅಸ್ತಂಗತವಾಗುವುದಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಬದಲಾವಣೆಗಳಲ್ಲಿ ಕೆಲವು ಶುಭ ಫಲ ನೀಡಿದರೆ ಇನ್ನು ಕೆಲವು ಅಶುಭ ಫಲವನ್ನು ನೀಡುತ್ತದೆ. ಇಂದು ಅಂದರೆ ಜನವರಿ 18, 2022 ರಿಂದ ವ್ಯಾಪಾರದ ದೇವರಾದ ಬುಧನು ಅಸ್ತಮಿಸಲಿದ್ದಾನೆ. ಇದು ಐದು ರಾಶಿ ಚಕ್ರದ (Zodiac sign) ಜನರಿಗೆ ಬಹಳ ಅಪಾಯಕಾರಿಯಾಗಿ ಪರಿಣಮಿಸಲಿದೆ. ಬುಧನು (Mercury) ಜನವರಿ 29 ರಂದು ಮತ್ತೆ ಉದಯಿಸತ್ತಾನೆ ಮತ್ತು ಅಲಿದ್ದಾನೆ. ಅಲ್ಲಿಯವರೆಗೆ ಈ ರಾಶಿಚಕ್ರ ಚಿಹ್ನೆಗಳ ಜನರಿಗೆ ತೊಂದರೆ ನೀಡುತ್ತಲೇ ಇರುತ್ತಾನೆ.
ಈ ರಾಶಿಚಕ್ರದ ಜನರು ಎಚ್ಚರಿಕೆಯಿಂದ ಇರಬೇಕು :
ಮೇಷ ರಾಶಿ : ಮೇಷ ರಾಶಿಯ (Aries) ಜನರು ವೃತ್ತಿ ವಿಷಯದಲ್ಲಿ ಜಾಗರೂಕರಾಗಿರಬೇಕು. ನೀವು ಜೀವನದಲ್ಲಿ ತೊಂದರೆಗಳಿಂದ ಸುತ್ತುವರೆದಿರುವಿರಿ. ಸಂವಹನದಲ್ಲಿ ಸಮಸ್ಯೆ ಇರುತ್ತದೆ. ದಾಖಲೆಗಳನ್ನು ನೋಡಿಕೊಳ್ಳಿ.
ಇದನ್ನೂ ಓದಿ : Shukra Margi: ಮಕರ ರಾಶಿಗೆ ಶುಕ್ರನ ಸಂಚಾರ, ಯಾವ ರಾಶಿಯವರಿಗೆ ಅದೃಷ್ಟ
ಮಿಥುನ : ಈ ಸಮಯ ಮಿಥುನ ರಾಶಿಯವರು (Gemini) ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಜನರು ಚರ್ಮದ ಸಮಸ್ಯೆಗಳಿಂದ (Skin problems) ತೊಂದರೆ ಎದುರಿಸಬೇಕಾದೀತು.
ಕರ್ಕಾಟಕ : ಕರ್ಕಾಟಕ ರಾಶಿಯ (Cancer) ಜನರು ಸಹ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೆಲಸ ಕೆಡುತ್ತದೆ. ಈ ಸಮಯದಲ್ಲಿ ತಾಳ್ಮೆಯಿಂದಿರುವುದು ಉತ್ತಮ.
ಮಕರ: ಮಕರ ರಾಶಿಯವರಿಗೆ (Capricorn) ವ್ಯಾಪಾರ-ವ್ಯವಹಾರದಲ್ಲಿ ಸಂಕಷ್ಟ ಎದುರಾಗಲಿದೆ. ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ.
ಇದನ್ನೂ ಓದಿ : Guru Ast 2022: ಅಸ್ತನಾಗಲಿರುವ ಗುರುವಿನಿಂದ ಯಾವ ರಾಶಿಯವರಿಗೆ ಏನು ಫಲ
ಕುಂಭ: ಕುಂಭ (aquarius) ರಾಶಿಯ ವಿದ್ಯಾರ್ಥಿಗಳಿಗೆ ಅಪೇಕ್ಷಿತ ಯಶಸ್ಸು ಸಿಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಷ್ಟಪಟ್ಟು ಕೆಲಸ ಮಾಡಿ.
ಬುಧವನ್ನು ಬಲಪಡಿಸುವುದು ಹೇಗೆ?
ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದರಿಂದ ಬುಧ ಗ್ರಹದಿಂದ ಶುಭ ಫಲಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ವೈದಿಕ ತಿಳಿಸಿರುವಂತೆ, ಹಸುವಿಗೆ ಹಸಿರು ಮೇವು ತಿನ್ನಿಸಿ, ಹಸಿರು ಏಲಕ್ಕಿ-ಹಸಿರು ತರಕಾರಿಗಳನ್ನು (Green vegetables) ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಈ ಕ್ರಮಗಳನ್ನು ಅನುಸರಿಸುವುದರಿಂದ ಮಾತು ಕೂಡ ಸಮತೋಲನಗೊಳ್ಳುತ್ತದೆ ಮತ್ತು ಹಣಕಾಸಿನ ಲಾಭವೂ ಆಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.