Shani Asta 2022: ಶೀಘ್ರದಲ್ಲಿಯೇ ಶನಿ ಅಸ್ತನಾಗಲಿದ್ದಾನೆ, ಈ ನಾಲ್ಕು ರಾಶಿಗಳ ಜನರ ನೌಕರಿ-ವ್ಯಾಪಾರದಲ್ಲಿ ಭಾರಿ ಕಷ್ಟ ಎದುರಾಗಲಿದೆ

Shani Dev - ಬರುವ ಜನವರಿ 22 ರಿಂದ ಶನಿ ದೇವ ಅಸ್ತನಾಗಲಿದ್ದಾನೆ. ಫೆಬ್ರವರಿ 22 ರಂದು ಮತ್ತೆ ಆತನ ಉದಯ ಸಂಭವಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿ ಅಸ್ತವು ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ವಿಶೇಷ ವಿಶೇಷ ಪ್ರಭಾವ ಬೀರಲಿದೆ.

Written by - Nitin Tabib | Last Updated : Jan 17, 2022, 09:53 PM IST
  • ಒಟ್ಟು 33 ದಿನಗಳವರೆಗೆ ಶನಿ ಅಸ್ತನಾಗಲಿದ್ದಾನೆ.
  • ನಾಲ್ಕು ರಾಶಿಗಳ ಜನರ ಮೇಲೆ ಭಾರಿ ಪ್ರಭಾವ.
  • ನೌಕರಿ-ವ್ಯಾಪಾರದ ಮೇಲೆ ಭಾರಿ ಸಮಸ್ಯೆ ಎದುರಾಗಬಹುದು.
Shani Asta 2022: ಶೀಘ್ರದಲ್ಲಿಯೇ ಶನಿ ಅಸ್ತನಾಗಲಿದ್ದಾನೆ, ಈ ನಾಲ್ಕು ರಾಶಿಗಳ ಜನರ ನೌಕರಿ-ವ್ಯಾಪಾರದಲ್ಲಿ ಭಾರಿ ಕಷ್ಟ ಎದುರಾಗಲಿದೆ  title=
Shani Parivartan 2022(File Photo)

ನವದೆಹಲಿ: ಶನಿಯ ರಾಶಿ ಬದಲಾಗಲಿದೆ. ಏಪ್ರಿಲ್ 29 ರಂದು ಶನಿದೇವ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ (Shani Parivartan 2022). ಶನಿದೇವರು ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿ (Shani Sade Sati 2022) ಇರಲಿದ್ದಾನೆ. ಆದರೆ ಇದಕ್ಕೂ ಮುನ್ನ ಶನಿ ದೇವ (Shani Transit 2022) 33 ದಿನ ಅಸ್ತನಾಗಲಿದ್ದಾನೆ. ಶನಿ ದೇವ ಜನವರಿ 22 ರಂದು ಅಸ್ತನಾಗಲಿದ್ದು ಬಳಿಕ ಫೆಬ್ರವರಿ 22ರಂದು ಉದಯಿಸಲಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯ (Shani Gochar 2022) ಈ ಅಸ್ತ ಕಾಲ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ತನ್ನ ಪ್ರಭಾವ ಬೀರಲಿದೆ. ಆದರೆ ಶನಿಗ್ರಹವು ಕೆಲವು ರಾಶಿಚಕ್ರದ ಚಿಹ್ನೆಗಳ (Zodiac Signs) ಮೇಲೆ ವಿಶೇಷ ಪರಿಣಾಮವನ್ನು ಉಂಟುಮಾಡಬಹುದು. ಆ ರಾಶಿಚಕ್ರದ ಚಿಹ್ನೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ
ಶನಿದೇವನ ಅಸ್ತಕಾಲ ಈ ರಾಶಿಚಕ್ರದ ಜನರಿಗೆ ನೋವಿನಿಂದ ಕೂಡಿರಲಿದೆ. ಕೆಲಸದಲ್ಲಿ ನಿರಂತರ ವೈಫಲ್ಯದಿಂದ, ಮನಸ್ಸು ವಿಚಲಿತವಾಗಿರುತ್ತದೆ. ಪ್ರಸ್ತುತ ಶನಿಯ ಎರಡೂವರೆ ವರ್ಷಗಳು ಮಿಥುನ ರಾಶಿಯಲ್ಲಿ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಣದ ಅತಿಯಾದ ವ್ಯಯದಿಂದಾಗಿ ಸಂಗಾತಿಯೊಂದಿಗೆ ವೈಮನಸ್ಯ ಉಂಟಾಗುವುದು. ಇದಲ್ಲದೆ, ಉದ್ಯೋಗದಲ್ಲಿ ಸಮಸ್ಯೆಗಳಿರಬಹುದು. ಅಲ್ಲದೆ, ವ್ಯವಹಾರದಲ್ಲಿ ಆರ್ಥಿಕ ನಷ್ಟವೂ ಉಂಟಾಗಬಹುದು.

ಕರ್ಕ ರಾಶಿ
ಶನಿಯ ಅಸ್ತದಿಂದಾಗಿ, ಈ ರಾಶಿಚಕ್ರದ ಜನರು ಕಷ್ಟಗಳಿಂದ ಸುತ್ತುವರೆದಿರಬಹುದು. ಉದ್ಯೋಗದಲ್ಲಿ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ವಿವಾದಗಳು ಉಂಟಾಗಬಹುದು. ಹಣದ ನಷ್ಟವೂ ಆಗಬಹುದು. ಕೆಲಸದಲ್ಲಿ ನಿರ್ಲಕ್ಷ್ಯವು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ.

ಕನ್ಯಾ ರಾಶಿ
ಶನಿ ಅಸ್ತನಾಗಿರುವ ಕಾರಣ, 33 ದಿನಗಳವರೆಗೆ ಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಕೆಲಸದಲ್ಲಿ ಮನಸ್ಸು ಸ್ಥಿರವಾಗಿರುವುದಿಲ್ಲ. ಇದರಿಂದಾಗಿ ಉದ್ಯೋಗದಲ್ಲಿಯೂ ಸಮಸ್ಯೆಗಳಿರಬಹುದು. ಕಠಿಣ ಪರಿಶ್ರಮಕ್ಕೆ ಅನುಕೂಲಕರ ಫಲಿತಾಂಶಗಳನ್ನು ಪಡೆಯದ ಕಾರಣ ಮನಸ್ಸು ಅತೃಪ್ತವಾಗಿರುತ್ತದೆ. ತಂದೆಯೊಂದಿಗಿನ ವೈಮನಸ್ಯದಿಂದಾಗಿ ಮನೆಯಲ್ಲಿ ಮನಸ್ಸು ನಿಲ್ಲುವುದಿಲ್ಲ. ಇದಲ್ಲದೇ ಉದ್ಯೋಗದಲ್ಲಿಯೂ ಸಮಸ್ಯೆಗಳಿರಲಿವೆ.

ಇದನ್ನೂ ಓದಿ-ನೀವು ಬಿಸಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುತ್ತೀರಾ? ಮೊದಲು ಈ ವಿಷಯ ತಿಳಿಯಿರಿ

ತುಲಾ ರಾಶಿ
ಶನಿ ಅಸ್ತದ ಎಲ್ಲಕ್ಕಿಂತ ಕೆಟ್ಟ ಪರಿಣಾಮವು ಈ ರಾಶಿಚಕ್ರದ ಜನರ ಮೇಲೆ ಇರುತ್ತದೆ. ಅನಗತ್ಯ ವಿವಾದಗಳಾಗುವ ಸಾಧ್ಯತೆ ಇದೆ. ನೀವು ಕಾನೂನು ವಿವಾದದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಮಾನಸಿಕ ತೊಂದರೆ ಉಂಟಾಗುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವುದು. ಇದು ಕೆಲಸದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ-ರಾಶಿಗನುಗುಣವಾಗಿ ನಿಮ್ಮ ಜೊತೆಗಿರಲಿ ಈ ನಾಣ್ಯಗಳು, ಆಗುವುದು ಭಾರೀ ಧನ ಲಾಭ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ಮನೆಯಲ್ಲಿ ಈ 4 ವಿಗ್ರಹಗಳಿದ್ದರೆ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ, ಹೆಚ್ಚಾಗಲಿದೆ ಸಂಪತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News