ನಾಳೆಯಿಂದ ಶನಿದೇವನ ಕೃಪೆಯಿಂದ ಈ ಆರು ರಾಶಿಯವರಿಗೆ ಭಾರೀ ಅದೃಷ್ಟ, ಉದ್ಯೋಗದಲ್ಲಿ ಸಿಗಲಿದೆ ಬಡ್ತಿ
ಶನಿದೇವನ ಉದಯವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಉದಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವಾಗಿರಲಿದೆ.
ನವದೆಹಲಿ : ಜನವರಿ 22ರ ಅಸ್ತವಾಗಿರುವ ಶನಿಗ್ರಹ ಫೆಬ್ರವರಿ 24ಕ್ಕೆ ಮತ್ತೆ ಉದಯವಾಗಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಗ್ರಹವು ಉದಯಿಸುವಾಗ ಅಥವಾ ಅಸ್ತಮಿಸಿದಾಗ, ಅದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಶನಿದೇವನ ಉದಯವು (Saturn rise)ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಉದಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವಾಗಿರಲಿದೆ.
ಮೇಷ ರಾಶಿ (Aries):
ಶನಿಯ ಉದಯವು (Saturn rise) ಕರ್ಮದ ಮನೆಯಲ್ಲಿ ಸಂಭವಿಸಲಿದೆ. ಭಾಗ್ಯದ ಮನೆಯಲ್ಲಿ ಮಂಗಳ (Mars) ಈಗಾಗಲೇ ಇದ್ದಾನೆ. ಈ ಹಿನ್ನೆಲೆಯಲ್ಲಿ ಶನಿ-ಮಂಗಳರ ಸಂಯೋಗವು ವಿಪರೀತ ಲಾಭವನ್ನು ನೀಡುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ಜನರು ವಿಶೇಷ ಲಾಭವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿರುವವರು ಬಡ್ತಿ ಹೊಂದುವ ಸಾಧ್ಯತೆ ಇದೆ.
ಇದನ್ನೂ ಓದಿ : Tulasi Benefits: ಮನೆಯಲ್ಲಿ ಈ ರೀತಿಯ ತುಳಸಿ ಗಿಡವನ್ನು ಎಂದಿಗೂ ಇಡಬೇಡಿ
ವೃಷಭ ರಾಶಿ (Taurus):
ಶನಿಯ ಉದಯವು ಈ ರಾಶಿಯವರಿಗೆ ಅಪಾರ ಸಂತೋಷವನ್ನು ತರುತ್ತದೆ. ಶನಿ ಉದಯದ (Saturn Rise effects) ಅವಧಿಯಲ್ಲಿ ವ್ಯಾಪಾರದಲ್ಲಿ ಲಾಭ ಇರುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. ಹಲವಾರು ಮೂಲಗಳಿಂದ ಆರ್ಥಿಕ ಲಾಭವಾಗುತ್ತದೆ.
ಕಟಕ ರಾಶಿ (Cancer):
ಶನಿಯು ಏಳನೇ ಮನೆಯಲ್ಲಿ ಉದಯಿಸಲಿದ್ದಾನೆ. ಏಳನೇ ಮನೆ ವೈವಾಹಿಕ ಜೀವನ ಮತ್ತು ಪಾಲುದಾರಿಕೆಗೆ ಸಂಬಂಧಿಸಿದ್ದಾಗಿದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಕೆಲಸಗಳಿಗೂ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಅಲ್ಲದೆ, ಪಾಲುದಾರಿಕೆ ಕೆಲಸದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ.
ಇದನ್ನೂ ಓದಿ : Maha Shivaratri: ಮಹಾಶಿವರಾತ್ರಿಯಂದು ರಾಶಿಚಕ್ರದ ಪ್ರಕಾರ ಶಿವನ ಆರಾಧನೆ ಹೆಚ್ಚು ಫಲಪ್ರದ
ತುಲಾ ರಾಶಿ (Libra):
ಶನಿಯು (Shani deva) ನಾಲ್ಕನೇ ಮನೆಯಲ್ಲಿ ಉದಯಿಸುತ್ತಾನೆ. ನಾಲ್ಕನೇ ಮನೆಯನ್ನು ವಾಹನ ಸುಖ, ತಾಯಿ ಮತ್ತು ಕಟ್ಟಡ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಕಂಡುಬರುತ್ತದೆ. ತಾಯಿಯ ಕಡೆಯಿಂದ ಧನ ಲಾಭವಾಗಲಿದೆ. ಕೆಲಸದ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ.
ಮಕರ ರಾಶಿ (Capricorn):
ಶನಿಯ ಉದಯದೊಂದಿಗೆ ಮಕರ ರಾಶಿಯ ಜಾತಕದಲ್ಲಿ ತ್ರಿಕೋನ ರಾಜಯೋಗವು (Trikona Rajyoga) ರೂಪುಗೊಳ್ಳಲಿದೆ. ಇದರಿಂದಾಗಿ ವ್ಯಾಪಾರದಲ್ಲಿ ಆರ್ಥಿಕ ಪ್ರಗತಿಯ ಹಲವು ಮಾರ್ಗಗಳು ತೆರೆದುಕೊಳ್ಳುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ.
ಇದನ್ನೂ ಓದಿ : Astrology: ಈ 4 ರಾಶಿಯವರು ತುಂಬಾ ಬುದ್ಧಿವಂತರು ಮತ್ತು ಕಠಿಣ ಪರಿಶ್ರಮಿಗಳು
ಕುಂಭ ರಾಶಿ (Aquarius):
ಕುಂಭ ರಾಶಿಯ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಈ ರಾಶಿಚಕ್ರವನ್ನು ಶನಿಯು ಆಳುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯ ಉದಯದಿಂದಾಗಿ, ಈ ರಾಶಿಯ ಜನರು ಹಠಾತ್ ಧನಲಾಭವನ್ನು ಪಡೆಯಬಹುದು. ಅದೃಷ್ಟದ ಸಂಪೂರ್ಣ ಬೆಂಬಲ ಈ ರಾಶಿಯವರಿಗೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.