ನವದೆಹಲಿ: ಪ್ರತಿಯೊಂದು ರಾಶಿಯವರಿಗೆ(Zodiac Sign) ಕೆಲವು ವಿಶೇಷತೆಗಳಿರುತ್ತವೆ. ಕೆಲವರು ತುಂಬಾ ಚುರುಕಾಗಿರುತ್ತಾರೆ, ಮತ್ತೆ ಕೆಲವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಇದಲ್ಲದೆ ಕೆಲವರು ಪ್ರಯಾಣಿಸಲು ಇಷ್ಟಪಡುತ್ತಾರೆ ಮತ್ತು ಕೆಲವರು ಒಂಟಿಯಾಗಿರಲು ಇಷ್ಟಪಡುತ್ತಾರೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯ ಜನರು ಗೆಲುವಿನ ಸಹಜ ಉತ್ಸಾಹವನ್ನು ಹೊಂದಿರುತ್ತಾರೆ. ಇಂತಹವರನ್ನು ತುಂಬಾ ಶ್ರಮಜೀವಿಗಳು ಮತ್ತು ಬುದ್ಧಿವಂತರು(Lucky Zodiac) ಎಂದು ಪರಿಗಣಿಸಲಾಗುತ್ತದೆ. ಈ 4 ರಾಶಿಯವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಮೇಷ ರಾಶಿ (Aries)
ಈ ರಾಶಿಚಕ್ರದ ಜನರು ಬುದ್ಧಿವಂತರು(Intelligent Zodiac), ಧೈರ್ಯಶಾಲಿಗಳು, ಶ್ರಮಶೀಲರು ಮತ್ತು ಮಾತನಾಡುವ ಸ್ವಭಾವದವರೆಂದು ಪರಿಗಣಿಸಲಾಗಿದೆ. ಈ ರಾಶಿಚಕ್ರದ ಜನರು ಎಲ್ಲಾ ಸಮಯದಲ್ಲೂ ಶಕ್ತಿಯುತವಾಗಿರುತ್ತಾರೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅವರ ಸಾಧನೆ ತುಂಬಾ ಚೆನ್ನಾಗಿರುತ್ತದೆ. ಅದೇ ರೀತಿ ಇವರು ಜೀವನದಲ್ಲಿ ಬರುವ ಪ್ರತಿಯೊಂದು ಸವಾಲನ್ನು ಧೈರ್ಯದಿಂದ ಎದುರಿಸುತ್ತಾರೆ. ಅಷ್ಟೇ ಅಲ್ಲ ಈ ರಾಶಿಯ ಜನರು ಎಂದಿಗೂ ಹೆದರುವುದಿಲ್ಲ.
ಇದನ್ನೂ ಓದಿ: ಶೀಘ್ರವೇ ಶನಿದೇವನ ಪ್ರಕೋಪಕ್ಕೆ ಒಳಗಾಗಲಿದೆ ಈ ಎರಡು ರಾಶಿಗಳು, ಆರಂಭವಾಗಲಿದೆ ಶನಿ ಧೈಯಾ
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಜನರು ಬಲವಾದ ಇಚ್ಛಾಶಕ್ತಿಯುಳ್ಳವರು. ಇವರು ಯಾವುದೇ ಕೆಲಸವನ್ನು ಒಮ್ಮೆ ಮಾತ್ರ ನಿರ್ಧರಿಸಿ ಪೂರ್ಣಗೊಳಿಸುತ್ತಾರೆ. ಇವರಲ್ಲಿ ಗೆಲ್ಲಬೇಕೆಂಬ ಅಗಾಧ ಉತ್ಸಾಹವಿರುತ್ತದೆ. ಅಲ್ಲದೆ ಮೆದುಳು ತುಂಬಾ ಚುರುಕಾಗಿರುತ್ತದೆ. ಈ ರಾಶಿಯ ಜನರ ದೊಡ್ಡ ವೈಶಿಷ್ಟ್ಯವೆಂದರೆ ಇವರು ಎಲ್ಲೆಡೆ ತಮ್ಮದೇ ಆದ ಗುರುತನ್ನು ಹೊಂದಿರುತ್ತಾರೆ.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯ ಜನರು ತುಂಬಾ ಬುದ್ಧಿವಂತರು. ಜೊತೆಗೆ ಆರೋಗ್ಯದಲ್ಲಿಯೂ ಶ್ರೀಮಂತರು. ಶ್ರಮದ ವಿಷಯದಲ್ಲಿ ಎಲ್ಲರಿಗಿಂತ ಎರಡು ಹೆಜ್ಜೆ ಮುಂದೆ ಇರುತ್ತಾರೆ. ಈ ರಾಶಿಯ ಜನರು ಜೀವನದಲ್ಲಿ ಬರುವ ಸವಾಲುಗಳಿಗೆ ಅಥವಾ ತೊಂದರೆಗಳಿಗೆ ಹೆದರುವುದಿಲ್ಲ. ಇದಲ್ಲದೆ ಈ ರಾಶಿಚಕ್ರದ ಜನರು ಎಲ್ಲದರಲ್ಲೂ ಮುಂದೆ ಇರಲು ಇಷ್ಟಪಡುತ್ತಾರೆ.
ಇದನ್ನೂ ಓದಿ: ಯಾರ ಹಸ್ತದಲ್ಲಿ ಈ ಚಿಹ್ನೆಗಳಿರುತ್ತವೆಯೋ ಅವರು ಜೀವನ ಪೂರ್ತಿ ರಾಜನಂತೆ ಬದುಕುತ್ತಾರೆ
ಧನು ರಾಶಿ (Sagittarius)
ಈ ರಾಶಿಯ ಜನರು ಅದೃಷ್ಟದಲ್ಲಿ ಶ್ರೀಮಂತರು. ಅವರ ಉದ್ದೇಶಗಳು ಬಹಳ ಪ್ರಬಲವಾಗಿರುತ್ತವೆ. ಇವರು ಮನಸ್ಸು ಮಾಡಿದರೆ ಎಂತಹ ಕೆಲಸವನ್ನಾದರೂ 100 ಪ್ರತಿಶತ ಪೂರ್ಣಗೊಳಿಸುತ್ತಾರೆ. ಅಲ್ಲದೆ ಈ ರಾಶಿಚಕ್ರದ ಜನರು ಕಠಿಣ ಪರಿಶ್ರಮದಿಂದ ತಮ್ಮ ಹಣೆಬರಹವನ್ನೇ ಬದಲಾಯಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ರಾಶಿಯವರು ಸುಲಭವಾಗಿ ತಮ್ಮನ್ನು ಬಿಟ್ಟುಕೊಡುವುದಿಲ್ಲ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.