Raksha Bandhan: ರಕ್ಷಾ ಬಂಧನದಂದು ರೂಪುಗೊಳ್ಳಲಿದೆ `ಗಜ ಕೇಸರಿ ಯೋಗ`, ಯಾರ ಮೇಲೆ ನೇರ ಪರಿಣಾಮ!
ಈ ವರ್ಷ ರಕ್ಷಾ ಬಂಧನ 2021 ರಂದು ಗಜ ಕೇಸರಿ ಯೋಗವು ರೂಪುಗೊಳ್ಳುತ್ತಿದೆ, ಈ ಯೋಗವು ಅತ್ಯಂತ ಮಂಗಳಕರವಾಗಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಕೆಲವು ರಾಶಿಗಳಿಗೆ, ಈ ಯೋಗವು ಬಹಳಷ್ಟು ಉಡುಗೊರೆಗಳನ್ನು ತರುತ್ತದೆ.
ಬೆಂಗಳೂರು: ಸಹೋದರ-ಸಹೋದರಿಯರ ಭ್ರಾತೃತ್ವವನ್ನು ಸಾರುವ ಹಬ್ಬ ರಕ್ಷಾ ಬಂಧನ (Raksha Bandhan 2021) ಸಮೀಪಿಸುತ್ತಿದೆ. ಈ ದಿನ ವಿಶೇಷ ಯೋಗ ಕೂಡ ರೂಪುಗೊಳ್ಳುತ್ತಿದೆ. ಪಂಚಾಂಗದ ಪ್ರಕಾರ, ಇದನ್ನು ಭಾನುವಾರ ಆಗಸ್ಟ್ 22 ರಂದು ಆಚರಿಸಲಾಗುತ್ತದೆ. ಈ ವರ್ಷ ರಕ್ಷಾ ಬಂಧನದಂದು ಭದ್ರಾ ಅವಧಿ ಇರುವುದಿಲ್ಲ. ಆದ್ದರಿಂದ ಈ ವರ್ಷ, ಸಹೋದರಿಯರು ತಮ್ಮ ಸಹೋದರರಿಗೆ ರಕ್ಷಾ ಬಂಧನದಂದು ದಿನವಿಡೀ ಯಾವುದೇ ಸಮಯದಲ್ಲಿ ರಾಖಿ ಕಟ್ಟಲು ಸಾಧ್ಯವಾಗುತ್ತದೆ.
ಮತ್ತೊಂದೆಡೆ, ಜ್ಯೋತಿಷ್ಯದ ಪ್ರಕಾರ, ಚಂದ್ರನು ರಕ್ಷಾ ಬಂಧನದ (Raksha Bandhan 2021) ಸಂದರ್ಭದಲ್ಲಿ ಕುಂಭ ರಾಶಿಯಲ್ಲಿ ಉಳಿಯುತ್ತಾನೆ ಮತ್ತು ದೇವಗುರು ಬೃಹಸ್ಪತಿ ಕೂಡ ಈಗಾಗಲೇ ಕುಂಭದಲ್ಲಿ ಕುಳಿತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಈ ಎರಡರ ಸಂಯೋಜನೆಯು ಗಜ ಕೇಸರಿ ಯೋಗವನ್ನು ಉಂಟು ಮಾಡುತ್ತಿದೆ. ಈ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಮಂಗಳಕರವಾಗಿದೆ.
ಇದನ್ನೂ ಓದಿ- Raksha Bandhan 2021 Things To Avoid: ರಕ್ಷಾ ಬಂಧನದ ದಿನ ಸಹೋದರಿಯರು ಮರೆತೂ ಸಹ ಈ ತಪ್ಪು ಮಾಡಬಾರದು
ಈ ರಾಶಿಗಳಿಗೆ ಗಜಕೇಸರಿ ಯೋಗವು ಶುಭಕರವಾಗಿರುತ್ತದೆ:
ಕರ್ಕ ರಾಶಿ: ಈ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ ಮತ್ತು ಆತನು ಗುರುವಿನೊಂದಿಗೆ ಗಜ ಕೇಸರಿ ಯೋಗವನ್ನು (Gaj Kesari Yog) ರೂಪಿಸುವನು, ಆದ್ದರಿಂದ ಈ ಯೋಗವು ಕರ್ಕಾಟಕ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಅವರು ತಮ್ಮ ಕಾರ್ಯಗಳ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆದಾಯ ಹೆಚ್ಚಾಗುತ್ತದೆ. ಎಲ್ಲರಿಗೂ ಸಹಕಾರ ಸಿಗುತ್ತದೆ. ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ.
ಧನು ರಾಶಿ: ಈ ರಾಶಿಚಕ್ರದ ಜನರು ಆರ್ಥಿಕ ಲಾಭಗಳನ್ನು ಪಡೆಯುವ ಬಲವಾದ ಅವಕಾಶಗಳನ್ನು ಹೊಂದಿರುತ್ತಾರೆ, ಜೊತೆಗೆ ಖ್ಯಾತಿಯು ಹೆಚ್ಚಾಗುತ್ತದೆ. ಕೆಲಸದಲ್ಲಿ ಯಶಸ್ಸು ಇರುತ್ತದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ನೀವು ಸ್ವಲ್ಪ ಸಮಯದವರೆಗೆ ಪ್ರಮುಖ ವಹಿವಾಟುಗಳನ್ನು ಮಾಡಲು ಬಯಸಿದರೆ, ನೀವು ಅದನ್ನು ಈ ಸಮಯದಲ್ಲಿ ಮಾಡಬಹುದು.
ಇದನ್ನೂ ಓದಿ- Varalakshmi Vrata: ವರಮಹಾಲಕ್ಷ್ಮಿ ವ್ರತ ವಿಧಿ-ವಿಧಾನ ಇಲ್ಲಿದೆ
ಮೀನ ರಾಶಿ: ದೀರ್ಘಕಾಲದವರೆಗೆ ನಿಮ್ಮನ್ನು ಕಾಡುತ್ತಿದ್ದ ತೊಂದರೆಗಳಿಗೆ ವಿದಾಯ ಹೇಳುವ ಸಮಯ ಬಂದಿದೆ. ನಿಮ್ಮ ಆಸೆಗಳು ಅಥವಾ ಕನಸುಗಳು ನನಸಾಗಬಹುದು. ಆರ್ಥಿಕವಾಗಿ ಪ್ರಯೋಜನಕಾರಿಯಾಗಲಿದೆ. ನೀವು ನಿಮ್ಮ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಅದಕ್ಕಾಗಿ ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ಒಟ್ಟಾರೆಯಾಗಿ, ಗಜ ಕೇಸರಿ ಯೋಗವು ನಿಮಗೆ ಅತ್ಯಂತ ಮಂಗಳಕರವಾಗಿದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ