Raksha Bandhan 2021 Things To Avoid : ಈ ವರ್ಷ 22 ಆಗಸ್ಟ್ 2021 ರಂದು ರಕ್ಷಾ ಬಂಧನದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಪೂರ್ಣಿಮೆ ದಿನದಂದು ಆಚರಿಸಲಾಗುತ್ತದೆ. ಇದನ್ನು ರಾಖಿ ಹಬ್ಬ ಎಂದು ಕೂಡ ಕರೆಯುತ್ತಾರೆ. ರಾಖಿ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.
ರಕ್ಷಾಬಂಧನ (Raksha Bandhan) ಹಬ್ಬವು ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವಾಗಿದೆ. ಈ ದಿನ ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿಗೆ ರಕ್ಷಾ ಸೂತ್ರವನ್ನು (ರಾಖಿ) ಕಟ್ಟುತ್ತಾರೆ ಮತ್ತು ಸಹೋದರನ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಪ್ರತಿಯಾಗಿ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ.
ಇದನ್ನೂ ಓದಿ- Raksha Bandhan: ನಿಮ್ಮ ಸಹೋದರನ ರಾಶಿಗೆ ಅನುಗುಣವಾಗಿ ಯಾವ ಬಣ್ಣದ ರಾಖಿ ಕಟ್ಟಿದರೆ ಶುಭ!
ಭಾರತದಲ್ಲಿ ರಕ್ಷಾಬಂಧನ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ರಕ್ಷಾ ಬಂಧನದ ದಿನ, ಸಹೋದರಿಯರು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಅದು ಅವರ ಸಹೋದರರ ಮೇಲೆ ಪರಿಣಾಮ ಬೀರಬಹುದು. ರಕ್ಷಾ ಬಂಧನದ ದಿನ ಯಾವ ಕೆಲಸಗಳನ್ನು ಮಾಡಬಾರದು (Things To Avoid on Raksha Bandhan) ತಿಳಿಯಿರಿ...
>> ರಕ್ಷಾ ಬಂಧನದ ದಿನದಂದು ಸಹೋದರಿಯರು ತಮ್ಮ ಸಹೋದರನಿಗೆ ರಾಖಿಯನ್ನು ಶುಭ ಸಮಯದಲ್ಲಿ ಮಾತ್ರ ಕಟ್ಟಬೇಕು. ಭದ್ರ ಅಥವಾ ರಾಹು ಕಾಲದಲ್ಲಿ ಯಾವುದೇ ಕಾರಣಕ್ಕೂ ರಾಖಿ ಕಟ್ಟಬಾರದು.
>> ಸಹೋದರನಿಗೆ ಕಪ್ಪು ಬಣ್ಣದ ರಾಖಿಯನ್ನು ಕಟ್ಟಬಾರದು. ಕಪ್ಪು ಬಣ್ಣವು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ- Raksha Bandhan 2021: 474 ವರ್ಷಗಳ ನಂತರ ನಿರ್ಮಾಣವಾಗಲಿದೆ ಈ ಅದ್ಭುತ ಮಹಾ ಯೋಗ..! ಈಡೇರಲಿದೆ ಎಲ್ಲಾ ಇಚ್ಛೆಗಳು
>> ರಾಖಿ ಕಟ್ಟುವಾಗ ಸಹೋದರನ ಮುಖ ದಕ್ಷಿಣ ದಿಕ್ಕಿನಲ್ಲಿರಬಾರದು. ಬದಲಾಗಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರುವುದು ಉತ್ತಮ.
>> ರಕ್ಷಾಬಂಧನದ ದಿನದಂದು ಸಹೋದರನಿಗೆ ತಿಲಕ ಹಚ್ಚುವಾಗ, ಅಕ್ಷತೆಗಾಗಿ ಅಕ್ಕಿಯನ್ನು ಬಳಸಬೇಕು.
>> ರಕ್ಷಾಬಂಧನದ ದಿನದಂದು ಸಹೋದರ ಮತ್ತು ಸಹೋದರಿಯರು ಪರಸ್ಪರ ಕರವಸ್ತ್ರ ಮತ್ತು ಎಣ್ಣೆಯನ್ನು ಉಡುಗೊರೆಯಾಗಿ ನೀಡಬಾರದು. ಇದು ಒಳ್ಳೆಯದನ್ನು ಸೂಚಿಸುವುದಿಲ್ಲ.
>> ಇದರ ಹೊರತಾಗಿ, ಈ ವಿಶೇಷ ದಿನದಂದು ಸಹೋದರಿಯರಿಗೆ ತೀಕ್ಷ್ಣವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಎಂಬುದನ್ನು ನೆನಪಿನಲ್ಲಿಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ