ಗಣೇಶ ಚತುರ್ಥಿ 2022:  ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ಭಾಗಗಳಲ್ಲಿ ಗಣೇಶನ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ, ವಿಘ್ನ ವಿನಾಶಕ ಗಣೇಶ ಚತುರ್ಥಿಯ ಹಬ್ಬವು ಬಹಳ ವಿಶೇಷ ಮತ್ತು ಬಹಳ ಮುಖ್ಯವಾಗಿದೆ. ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಮನೆಗೆ ಹೊಸ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. 
ಕೆಲವೆಡೆ ಐದು ದಿನಗಳವರೆಗೆ ಗಣೇಶನನ್ನು ಪ್ರತಿಷ್ಠಾಪಿಸಿದರೆ, ಇನ್ನೂ ಕೆಲವೆಡೆ ಹತ್ತು ದಿನಗಳವರೆ, ಹಲವು ಪ್ರದೇಶಗಳಲ್ಲಿ 21 ದಿನಗಳವರೆಗೆ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಗಣೇಶೋತ್ಸವದ ಸಂದರ್ಭದಲ್ಲಿ ಕಣ್ಣಿಗೆಬೇಕಾದ ರಂಗು ರಂಗಿನ ವಿಗ್ರಹಗಳನ್ನು ತಂದು ಪೂಜಿಸಲಾಗುತ್ತದೆ. ಆದರೆ, ಗಣೇಶ ಚತುರ್ಥಿಯಂದು ನಿಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ತರಲು ನೀವು ಬಯಸಿದರೆ, ಎಂತಹ ಮೂರ್ತಿಯನ್ನು ತರಬೇಕು ಮತ್ತು ಯಾವ ರೀತಿಯ ಮೂರ್ತಿಯನ್ನು ತರಬಾರದು ಎಂದು ತಿಳಿದಿರುವುದು ಅವಶ್ಯಕ. 


ಇದನ್ನೂ ಓದಿ- Ganesh Chaturthi 2022: ಈ 3 ರಾಶಿಯವರಿಗೆ ಸದಾ ಇರುತ್ತೆ ಗಣಪತಿ ಆಶೀರ್ವಾದ


ಗಣೇಶ ಚತುರ್ಥಿಯ ದಿನ ಅಪ್ಪಿತಪ್ಪಿಯೂ ಸಹ ಇಂತಹ ಮೂರ್ತಿಯನ್ನು ತರಲೇಬಾರದು : 
ಗಣೇಶನ ವಿಗ್ರಹವನ್ನು ಖರೀದಿಸುವಾಗ, ಮೊದಲು ಗಣೇಶನ ಸೊಂಡಿಲಿನ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಗಣೇಶನ ವಿಗ್ರಹದಲ್ಲಿ ಸೊಂಡಿಲು ಯಾವ ಕಡೆಗೆ ಬಾಗಿದೆ ಎಂಬುದನ್ನು ತಿಳಿಯಬೇಕು. ಯಾವಾಗಲೂ ಎಡಭಾಗಕ್ಕೆ ಬಾಗಿದ ಸೊಂಡಿಲನ್ನು ಹೊಂದಿರುವ ಗಣಪತಿಯನ್ನು ಖರೀದಿಸಬೇಕು. ಆದರೆ ಬಲಭಾಗಕ್ಕೆ ಬಾಗಿರುವ ಸೊಂಡಿಲಿನ ಗಣೇಶನ ವಿಗ್ರಹವನ್ನು ಖರೀದಿಸಬಾರದು.


ನಿಂತಿರುವ ಗಣೇಶನ ವಿಗ್ರಹವನ್ನೂ ತೆಗೆದುಕೊಳ್ಳಬಾರದು. ಕುಳಿತಿರುವ ಗಣೇಶನ ವಿಗ್ರಹವನ್ನು ತೆಗೆದುಕೊಳ್ಳಬೇಕು.


ಇದನ್ನೂ ಓದಿ- ಸೆಪ್ಟೆಂಬರ್ ತಿಂಗಳಲ್ಲಿ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾಳೆ ಮಹಾ ಲಕ್ಷ್ಮೀ


ಗಣಪತಿ ವಿಗ್ರಹವನ್ನು ಆರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: 
* ಗಣಪತಿ ವಿಗ್ರಹವನ್ನು ಖರೀದಿಸುವಾಗ ಗಣಪತಿ ಕೈಯಲ್ಲಿ ಮೋದಕವಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಈ ವಿಗ್ರಹವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
* ಗಣೇಶನ ವಿಗ್ರಹವನ್ನು ಖರೀದಿಸುವಾಗ, ಗಣೇಶನ ವಿಗ್ರಹದಲ್ಲಿ ಅದರ ವಾಹನ ಇಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಗಣೇಶನ ವಿಗ್ರಹದಲ್ಲಿ ಮೂಷಕನ ಉಪಸ್ಥಿತಿಯು ಬಹಳ ಮುಖ್ಯವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.